For Quick Alerts
  ALLOW NOTIFICATIONS  
  For Daily Alerts

  ಮದುವೆ ಆಗಿಲ್ಲ ಎಂದ ಪವಿತ್ರಾ ಲೋಕೇಶ್‌ಗೆ ಸುಚೇಂದ್ರ ಪ್ರಸಾದ್ ತಿರುಗೇಟು!

  By Bhagya.s
  |

  ಪವಿತ್ರಾ ಲೋಕೇಶ್, ನರೇಶ್ ಮದುವೆ ಮತ್ತು ಫ್ರೆಂಡ್‌ಶಿಪ್ ವಿವಾದ ಸದ್ಯಕ್ಕೆ ಮುಗಿಯುವಂತೆ ಇಲ್ಲ. ದಿನಕ್ಕೊಂದು ಹೊಸ ವಿಚಾರಗಳು ರಿವೀಲ್ ಆಗುತ್ತಿದೆ. ಈ ವಿವಾದ ದೊಡ್ಡ ಮಟ್ಟಕ್ಕೆ ಹೋದ ಬಳಿಕ, ಪವಿತ್ರಾ ಲೋಕೇಶ್ ಮಾಧ್ಯಮದ ಮುಂದೆ ಈ ಬಗ್ಗೆ ಮಾತನಾಡಿದರು.

  ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾಗೆ ವಿಚ್ಛೇದನ ನೀಡಿಲ್ಲ ಎನ್ನುವುದು ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಇನ್ನು ಇತ್ತ ಪವಿತ್ರಾ ಲೋಕೇಶ್ ಕೂಡ ಪತಿ ಸುಚೇಂದ್ರ ಪ್ರಸಾದ್‌ಗೆ ವಿಚ್ಛೇದನ ಕೊಟ್ಟಿಲ್ಲ ಎನ್ನುವ ಸುದ್ದಿಯೂ ಹರಿದಾಡಿತು.

  ಇದಕ್ಕೆ ಸ್ಪಷ್ಟನೆ ಕೊಟ್ಟ ಪವಿತ್ರಾ ಲೋಕೇಶ್ ನಾವು ಮದುವೆ ಆಗೇ ಇಲ್ಲ. ಸುಚೇಂದ್ರ ಪ್ರಸಾದ್ ಜೊತೆಗೆ ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲೆ ಇದ್ದೆ. ವಿಚ್ಛೇದನದ ಮಾತೆಲ್ಲಿ ಬರಬೇಕು ಎಂದಿದ್ದರು. ಈ ಮಾತಿಗೆ ಈಗ ಸುಚೇಂದ್ರ ಪ್ರಸಾದ್ ಖಡಕ್ ತಿರುಗೇಟು ನೀಡಿದ್ದಾರೆ.

  ಮದುವೆ ಬಗ್ಗೆ ಇಬ್ಬರದ್ದು ವಿಭಿನ್ನ ಹೇಳಿಕೆ!

  ಮದುವೆ ಬಗ್ಗೆ ಇಬ್ಬರದ್ದು ವಿಭಿನ್ನ ಹೇಳಿಕೆ!

  ಪವಿತ್ರಾ ಲೋಕೇಶ್ ಸುಚೇಂದ್ರ ಪ್ರಸಾದ್ ಜೊತೆಗೆ ಮದುವೆ ಆಗಿಲ್ಲ. ನಾನು ಅವರ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದೆ. ಹಾಗಾಗಿ ವಿಚ್ಛೇದನ ಕೊಡುವ ಮಾತೇ ಇಲ್ಲ ಎಂದು ಪವಿತ್ರ ಲೋಕೇಶ್ ಹೇಳಿಕೊಂಡಿದ್ದರು. ಆದರೆ ಇದಕ್ಕೆ ತಿರುಗೇಟು ಕೊಟ್ಟಿದ್ದು, ನಾವು ಸಂಪ್ರದಾಯ ಪ್ರಕಾರವೇ ಮದುವೆ ಆಗಿದ್ದೇವೆ ಎಂದಿದ್ದಾರೆ. ಜೊತೆಗೆ ಒಂದಷ್ಟು ಉದಾಹರಣೆಗಳನ್ನೂ ಕೂಡ ಕೊಟ್ಟಿದ್ದಾರೆ.

  ಸಂಪ್ರದಾಯದಂತೆ ಮದುವೆ ಆಗಿದೆ!

  ಸಂಪ್ರದಾಯದಂತೆ ಮದುವೆ ಆಗಿದೆ!

  ಈ ವಿವಾದದ ಬಗ್ಗೆ ಹೆಚ್ಚಾಗಿ ಮಾತನಾಡದೆ ಇರುವ ಸುಚೇಂದ್ರ ಪ್ರಸಾದ್ ಮದುವೆ ಬಗ್ಗೆ ಮಾತಾಡಿದ್ದಾರೆ. ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿರುವ ಅವರು "ನಾನು ಹಿಂದೂ ವಿವಾಹದ ಸಂಪ್ರದಾಯದಂತೆ ಮದುವೆ ಆಗಿದ್ದೇನೆ. ನಾನೇ ಪವಿತ್ರಾ ಲೋಕೇಶ್ ಅವರ ಗಂಡ ಎನ್ನುವುದಕ್ಕೆ ಅವರ ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಮನಿಸಿದರೆ ಗೊತ್ತಾಗುತ್ತದೆ. ನನ್ನ ಪಾಸ್ ಪೋರ್ಟ್ ನಲ್ಲೂ ಅವರೇ ಹೆಂಡತಿ ಅಂತಿದೆ. ಅಲ್ಲದೇ, ನಾವಿಬ್ಬರೂ ಗಂಡ ಹೆಂಡತಿ ಅನ್ನುವ ಕಾರಣಕ್ಕಾಗಿಯೇ ಹಲವಾರು ಧಾರ್ಮಿಕ ಗುರುಗಳು ನಮ್ಮನ್ನು ಸನ್ಮಾನಿಸಿದ್ದಾರೆ. ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ. ಆದರೆ, ಮದುವೆ ನೋಂದಣಿ ಪತ್ರ ಮಾತ್ರ ಮಾಡಿಸಿಲ್ಲ." ಎಂದಿದ್ದಾರೆ ಸುಚೇಂದ್ರ ಪ್ರಸಾದ್.

  15 ವರ್ಷ ಸುಚೇಂದ್ರ ಪ್ರಸಾದ್ ಜೊತೆ ಸಂಸಾರ!

  15 ವರ್ಷ ಸುಚೇಂದ್ರ ಪ್ರಸಾದ್ ಜೊತೆ ಸಂಸಾರ!

  ಸುಮಾರು 15 ವರ್ಷಗಳ ಕಾಲ ಸುಚೇಂದ್ರ ಪ್ರಸಾದ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಇದ್ದರು. ಆದರೆ ಈ ಜೋಡಿ ಕಳೆದ 5 ವರ್ಷಗಳಿಂದ ಇಬ್ಬರು ಜೊತೆಯಲ್ಲಿ ಇಲ್ಲ ಎಂದು ಪವಿತ್ರಾ ಲೋಕೇಶ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ನಾವು ಮದುವೆಯೇ ಆಗಿಲ್ಲ ಎಂದರೆ, ಸುಚೇಂದ್ರ ಪ್ರಸಾದ್ ಮಾತ್ರ ಸಂಪ್ರದಾಯದ ಪ್ರಕಾರವೇ ಮದುವೆ ಆಗಿದ್ದೇವೆ ಎಂದಿದ್ದಾರೆ. ಈ ವಿಚಾರವೂ ನರೇಶ್ ಜೊತೆಗೆ ಪವಿತ್ರಾ ಹೆಸರು ಕೇಳಿ ಬಂದ ಬಳಿಕ ಹೊರ ಬಂದಿದೆ.

  ಮೈಸೂರಲ್ಲಿ ಒಟ್ಟಿಗೆ ಇದ್ದ ಪವಿತ್ರಾ-ನರೇಶ್!

  ಮೈಸೂರಲ್ಲಿ ಒಟ್ಟಿಗೆ ಇದ್ದ ಪವಿತ್ರಾ-ನರೇಶ್!

  ಈ ವಿವಾದ ಹೊರ ಬರುತ್ತಲೇ, ನಾವು ಒಳ್ಳೆಯ ಸ್ನೇಹಿತರು ಎಂದು ನರೇಶ್ ಮತ್ತು ಪವಿತ್ರಾ ಲೋಕೇಶ್ ಹೇಳಿಕೊಂಡಿದ್ರು. ಆದರೆ ಇವರು ಒಟ್ಟಿಗೆ ಮೈಸೂರಿನಲ್ಲಿ ಇರುವುದನ್ನು ರಮ್ಯಾ ಹುಡುಕಿ ಹಿಡಿದಿದ್ದರು. ಆ ಬಳಿಕ ಈ ವಿವಾದ ಮತ್ತೊಂದು ತಿರುವು ಪಡೆದುಕೊಂಡಿತು. ಆದರೆ ಮುಂದೆ ಈ ಜೋಡಿ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎನ್ನುವುದನ್ನು ನೋಡಬೇಕಿದೆ.

  English summary
  Suchendra Prasad Refused Pavithra Lokesh's Live In Relationship Comment,Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X