»   » ಪನೋರಮಾ ಚಿತ್ರಗಳ ಕೈ ಹಿಡಿದ ಸುಚಿತ್ರಾ

ಪನೋರಮಾ ಚಿತ್ರಗಳ ಕೈ ಹಿಡಿದ ಸುಚಿತ್ರಾ

Posted By: Staff
Subscribe to Filmibeat Kannada

ಕಳೆದ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದ್ದ 30 ಭಾರತೀಯ ಚಿತ್ರಗಳ ಪ್ರದರ್ಶನ ಏರ್ಪಡಿಸಲು ಬನಶಂಕರಿಯ ಸುಚಿತ್ರಾ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಮುಂದಾಗಿದೆ.

ಜನವರಿ 2 ರಿಂದ 20ರವರೆಗೆ ಚಿತ್ರಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಚಿತ್ರಗಳ ಪ್ರತಿ ಪಡೆಯುವ ಬಗ್ಗೆ ಸಂಬಂಧಿಸಿದವರನ್ನು ಸಂಪರ್ಕಿಸುವ ಪ್ರಯತ್ನ ಈಗಾಗಲೇ ನಡೆದಿದೆ ಎಂದು ಸುಚಿತ್ರಾದ ಬಾತ್ಮೀದಾರ ಎಂ.ಎ. ಶ್ರೀನಿವಾಸ್‌ ತಿಳಿಸಿದ್ದಾರೆ.

ಪನೋರಾಮಕ್ಕೆ ಆಯ್ಕೆಯಾಗಿದ್ದ ಕನ್ನಡ ಚಿತ್ರಗಳಾದ ಮುನ್ನುಡಿ, ಮತದಾನ, ನೀಲಾ ಮತ್ತು ಮುಸ್ಸಂಜೆ ಚಿತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು. ಈ ಚಿತ್ರಪ್ರದರ್ಶನ ಕಾರ್ಯಕ್ಕೆ ಸರಕಾರ ನೆರವು ಒದಗಿಸಬೇಕು. ಆದರೆ ಈ ವರೆಗೆ ಸರಕಾರದ ಕಡೆಯಿಂದ ನೆರವಿನ ಭರವಸೆಯೇನೂ ಸಿಕ್ಕಿಲ್ಲ ಎನ್ನುತ್ತಾರೆ ಶ್ರೀನಿವಾಸ್‌.

ಪನೋರಮಾಕ್ಕೆ ಆಯ್ಕೆಯಾದ ಚಿತ್ರಗಳನ್ನು ಪ್ರದರ್ಶಿಸುವ ವಿಷಯವಾಗಿ ರಾಜ್ಯ ಚಲನ ಚಿತ್ರ ವಾಣಿಜ್ಯ ಮಂಡಳಿಯ ಜೊತೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಶ್ರೀನಿವಾಸ್‌ ಹೇಳಿದರು. ಅಂದಹಾಗೆ, ಸಿನಿಮಾ ಪ್ರದರ್ಶನವನ್ನು ಸುಚಿತ್ರ ಸಭಾಂಗಣದಲ್ಲಿ ನಡೆಸುವುದೋ ಅಥವಾ ಥಿಯೇಟರ್‌ನಲ್ಲಿ ನಡೆಸುವುದೋ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ .

ಢಾಕಾ ಚಿತ್ರೋತ್ಸವಕ್ಕೆ ನಾಗಾಭರಣರ ನೀಲಾ
ಕನ್ನಡ ಪ್ರೇಕ್ಷಕರ ಅವಕೃಪೆಗೆ ಒಳಗಾಗಿ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡದಿದ್ದರೂ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಲಾ ಮುನ್ನುಗ್ಗುತ್ತಿದ್ದಾಳೆ. ಇತ್ತೀಚೆಗಷ್ಟೇ ಕೊಲ್ಕತಾದಲ್ಲಿ ನಡೆದ ಏಳನೆಯ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದ ನೀಲಾ ಢಾಕಾಗೆ ತೆರಳಲಿರುವ ವಿಷಯವನ್ನು ನೀಲಾ ನಿರ್ದೇಶಕ ನಾಗಾಭರಣ ಸುದ್ದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

English summary
Panorama films to be screened in Bangalore by , Suchitra Cinema
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada