ದುಬೈನಲ್ಲಿ ನಡೆದ 'ವಿಲನ್' ಆಡಿಯೋ ಲಾಂಚ್ ಗೆ ಸುದೀಪ್ ಹೋಗಿಲ್ಲ ಯಾಕೆ.?
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದಲ್ಲಿ ತಯಾರಾಗಿರುವ 'ದಿ ವಿಲನ್' ಸಿನಿಮಾದ ಹಾಡುಗಳು ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು.
ಬೆಂಗಳೂರಿನಲ್ಲಿ ಧೂಳೆಬ್ಬಿಸಿದ್ದ ನಂತರ ಈಗ ದುಬೈನಲ್ಲಿ 'ದಿ ವಿಲನ್' ಆಡಿಯೋ ಲಾಂಚ್ ಆಗಿದೆ. ಈ ಮೊದಲೇ ತಿಳಿಸಿದಂತೆ 'ದಿ ವಿಲನ್' ಚಿತ್ರದ ಹಾಡುಗಳು ಬೆಂಗಳೂರು ಮತ್ತು ದುಬೈನಲ್ಲಿ ಎರಡು ಕಡೆ ರಿಲೀಸ್ ಮಾಡುವ ಪ್ಲಾನ್ ಆಗಿತ್ತು. ಅದರಂತೆ ಎರಡು ಕಡೆ ಕಾರ್ಯಕ್ರಮ ಕೂಡ ಜರುಗಿದೆ.
ಈ ಕಾರ್ಯಕ್ರಮಕ್ಕಾಗಿ ದುಬೈ ಕನ್ನಡಿಗರು ಬಹಳ ಕಾತುರದಿಂದ ಕಾದುಕುಂತಿದ್ದರು. ಸುದೀಪ್, ಶಿವಣ್ಣ, ಪ್ರೇಮ್ ಎಲ್ಲರನ್ನ ನೋಡುವ ಆಸೆಯಿಂದ ಇದ್ದರು. ಆದ್ರೆ, ಕೊನೆ ಘಳಿಗೆಯಲ್ಲಿ ಸುದೀಪ್ ದುಬೈಗೆ ಹೋಗಿಲ್ಲ. ಇದು ಸಹಜವಾಗಿ ನಿರಾಸೆ ಮೂಡಿಸಿದೆ. ಅಷ್ಟಕ್ಕೂ, ಸುದೀಪ್ ಯಾಕೆ ಹೋಗಿಲ್ಲ ಎನ್ನುವುದು ಕುತೂಹಲವಾಗಿದೆ. ಮುಂದೆ ಓದಿ.....

ಸುದೀಪ್ ಹಿಂದೆ ಸರಿದಿದ್ದು ಯಾಕೆ.?
ನಿನ್ನೆಯವರೆಗೂ ಕಿಚ್ಚ ಸುದೀಪ್ ದುಬೈನಲ್ಲಿ ನಡೆಯಲಿರುವ ಆಡಿಯೋ ಲಾಂಚ್ ಗೆ ಹೋಗ್ತಾರೆ ಎಂದೇ ಹೇಳಲಾಗಿತ್ತು. ಯಾಕಂದ್ರೆ, ಇದು ಸುದೀಪ್ ಮತ್ತು ಶಿವಣ್ಣನ ಸಿನಿಮಾ. ಮತ್ತು ಇದೇ ಮೊದಲ ಭಾರಿಗೆ ದುಬೈನಲ್ಲಿ ಕನ್ನಡ ಸಿನಿಮಾ ಆಡಿಯೋ ಲಾಂಚ್ ಮಾಡಲಾಗಿದೆ. ಆದ್ರೆ, ಕೊನೆಯಲ್ಲಿ ಸುದೀಪ್ ಹಿಂದೆ ಸರಿದಿದ್ದು ಯಾಕೆ.?

ಸುದೀಪ್ ಹೋಗಲ್ಲ ಎನ್ನುವುದು ಮೊದಲೇ ನಿರ್ಧಾರವಾಗಿತ್ತಾ.?
ಶಿವರಾಜ್ ಕುಮಾರ್ ಅವರೇ ವಿಡಿಯೋ ಮೂಲಕ, ದುಬೈನಲ್ಲಿ ನಡೆಯಲಿರುವ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ದುಬೈ ಕನ್ನಡಿಗರಿಗೆ ಆಹ್ವಾನ ನೀಡಿದ್ದರು. ನೀವೆಲ್ಲರೂ ಬನ್ನಿ, ನಾನು ಬರ್ತೀನಿ, ಸುದೀಪ್ ಬರ್ತಾರೆ ಎಂದು ಮನವಿ ಮಾಡಿದ್ದರು. ಪ್ರೇಮ್, ಅರ್ಜುನ್ ಜನ್ಯ, ಶಿವಣ್ಣ ವಿಡಿಯೋ ಮಾಡಿದ್ದರು. ಆದ್ರೆ, ಸುದೀಪ್ ವಿಡಿಯೋ ಮಾಡಿರಲಿಲ್ಲ. ಬಹುಶಃ ಸುದೀಪ್ ಹೋಗದಿರಲು ಮೊದಲೇ ನಿರ್ಧಾರವಾಗಿತ್ತಾ.?

ಸುದೀಪ್ ಫುಲ್ ಬ್ಯುಸಿ
ಅಂದ್ಹಾಗೆ, ಕಿಚ್ಚ ಸುದೀಪ್ ತುಂಬಾ ಬ್ಯುಸಿ ಇದ್ದಾರೆ. ಸೆಪ್ಟಂಬರ್ 8, 9 ರಂದು ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದೆ. ಅದಕ್ಕಾಗಿ ಸುದೀಪ್ ತಯಾರಾಗುತ್ತಿದ್ದಾರೆ. ಬಹುಶಃ ಈ ಟೂರ್ನಿಯ ಬ್ಯುಸಿಯಲ್ಲಿ ದುಬೈಗೆ ಹೋಗಲು ಸಾಧ್ಯವಾಗದೇ ಇರಬಹುದು. 'ಪೈಲ್ವಾನ್', 'ಕೋಟಿಗೊಬ್ಬ-3' ಹಾಗೂ ತೆಲುಗಿನ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಶೂಟಿಂಗ್ ಕಾರಣವಾಗಿರಬಹುದಾ.? ನಿಜವಾದ ಕಾರಣ ಗೊತ್ತಿಲ್ಲ. ಬಟ್, ದುಬೈ ಕನ್ನಡಿಗರಿಗೆ ನಿರಾಸೆಯಾಗಿದ್ದು ಮಾತ್ರ ನಿಜಾ.

'ವಿಲನ್'ಗೆ ಮೆರುಗು ಹೆಚ್ಚಿಸಿದ ತಾರೆಯರು
ಶಿವರಾಜ್ ಕುಮಾರ್, ಆಮಿ ಜಾಕ್ಸನ್, ನಿರ್ದೇಶಕ ಪ್ರೇಮ್, ನಿರ್ಮಾಪಕ ಸಿ ಆರ್ ಮನೋಹರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಡಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇವರು ಜೊತೆ ಕನ್ನಡದ ನಟಿಯರಾದ ಹರ್ಷಿಕಾ ಪೂಣಚ್ಛ, ಕಾರುಣ್ಯ ರಾಮ್, ಹಾಗೂ ಭಾವನ ರಾವ್ ಡ್ಯಾನ್ಸ್ ಮಾಡಿ ಮತ್ತಷ್ಟು ಕಲರ್ ಫುಲ್ ಮಾಡಿದರು.


Click it and Unblock the Notifications











