ಹಾಲಿವುಡ್ ಚಿತ್ರವನ್ನ ಕೈಬಿಟ್ರಾ 'ಬಿಗ್ ಬಾಸ್'.! ಏನಿದು 'ರೈಸನ್' ರಹಸ್ಯ.?

Recommended Video

ಹಾಲಿವುಡ್ ಸಿನಿಮಾ ರೈಸನ್ ಟ್ರೈಲರ್ ನಲ್ಲಿ ಸುದೀಪ್ ಇಲ್ಲ | ಇದರ ಅರ್ಥ? | FILMIBEAT KANNADA

ಕನ್ನಡ, ತಮಿಳು, ತೆಲುಗು, ಬಾಲಿವುಡ್ ಹೀಗೆ ಭಾರತದ ಬಹುಭಾಷೆಯಲ್ಲಿ ನಟಿಸಿ ಜನಮನ ಗೆದ್ದಿರುವ ನಟ ಸುದೀಪ್ ಹಾಲಿವುಡ್ ನಲ್ಲಿ ಅಭಿನಯಿಸುತ್ತಿರುವ ಸುದ್ದಿ ಇಡೀ ಸ್ಯಾಂಡಲ್ ವುಡ್ ಗೆ ಖುಷಿಪಟ್ಟಿತ್ತು. ಆದ್ರೀಗ ಅದು ನಿರಾಸೆಯಾಗುವ ಸೂಚನೆ ಸಿಕ್ಕಿದೆ.

ಸುದೀಪ್ ಹಾಲಿವುಡ್ ಸಿನಿಮಾ 'ರೈಸನ್' ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಆ ಚಿತ್ರದಲ್ಲಿ ಕಿಚ್ಚ ಕಮಾಂಡೋ ಆಗಿ ಕಾಣಿಸಿಕೊಂಡಿದ್ದರು. ನಿರ್ದೇಶಕ ಎಡ್ಡಿ ಆರ್ಯ ಅವರು ಸುದೀಪ್ ಮನೆಗೆ ಬಂದು ಮಾತನಾಡಿ ಹೋಗಿದ್ದರು. ಸದ್ಯದಲ್ಲೇ ಪ್ರೆಸ್ ಮೀಟ್ ಮಾಡಿ ಎಲ್ಲ ಮಾಹಿತಿ ನೀಡುವುದಾಗಿ ಹೇಳಿಕೊಂಡಿದ್ದರು.

'ಪೈಲ್ವಾನ್', 'ಕೋಟಿಗೊಬ್ಬ-3', 'ಬಿಗ್ ಬಾಸ್' ಇವುಗಳ ಮಧ್ಯೆ ಹಾಲಿವುಡ್ ಸಿನಿಮಾ ಯಾವಾಗ ಮಾಡ್ತಾರೆ ಎಂಬ ಕಾತುರ ಕಿಚ್ಚನ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಬಟ್, ಈಗ ಬಹುದೊಡ್ಡ ಆಘಾತಕಾರಿ ವಿಷ್ಯ ಹೊರಬಿದ್ದಿದೆ. 'ರೈಸನ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಒಂದೇ ಒಂದು ದೃಶ್ಯದಲ್ಲೂ ಸುದೀಪ್ ಇಲ್ಲದೇ ಇರುವುದು ಅನುಮಾನ ಮೂಡಿಸಿದೆ. ಹಾಗಿದ್ರೆ, ಸುದೀಪ್ ಈ ಸಿನಿಮಾದಲ್ಲಿ ಇಲ್ವಾ.? ಮುಂದೆ ಓದಿ....

ರೈಸನ್ ಟ್ರೈಲರ್ ನಲ್ಲಿ ಸುದೀಪ್ ಯಾಕಿಲ್ಲ.!

ರೈಸನ್ ಟ್ರೈಲರ್ ನಲ್ಲಿ ಸುದೀಪ್ ಯಾಕಿಲ್ಲ.!

ಸುದೀಪ್ ಅಭಿನಯಿಸುತ್ತಿರುವ ಹಾಲಿವುಡ್ ಸಿನಿಮಾ 'ರೈಸನ್' ಚಿತ್ರದ ಟ್ರೈಲರ್ ಮೂರು ವಾರದ ಹಿಂದೆ ಬಿಡುಗಡೆಯಾಗಿದೆ. 2.30 ನಿಮಿಷದ ಟ್ರೈಲರ್ ಇದಾಗಿದ್ದು, ಸ್ವತಃ ನಿರ್ದೇಶಕರೇ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದ್ರೆ, ಈ ಟ್ರೈಲರ್ ನ ಒಂದೇ ಒಂದು ದೃಶ್ಯದಲ್ಲೂ ಸುದೀಪ್ ಕಾಣಿಸಿಕೊಂಡಿಲ್ಲ. ಈ ಸಿನಿಮಾಗೆ ಸುದೀಪ್ ನಾಯಕ (ಪ್ರಮುಖ ಪಾತ್ರ) ಎನ್ನಲಾಗಿತ್ತು. ಬಟ್, ಇಂತಹ ಪಾತ್ರವೆ ಇಲ್ಲದೇ 2 ನಿಮಿಷ ಟ್ರೈಲರ್ ರಿಲೀಸ್ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ.

ಅಭಿಮಾನಿಗಳು ಫುಲ್ ಶಾಕ್

ಅಭಿಮಾನಿಗಳು ಫುಲ್ ಶಾಕ್

ಈ ಟ್ರೈಲರ್ ನೋಡಿದ ಅಭಿಮಾನಿಗಳು ಸುದೀಪ್ ಎಲ್ಲಿ, ಸುದೀಪ್ ಯಾಕಿಲ್ಲ, ಸುದೀಪ್ ಅಭಿನಯಿಸಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಬಹುಶಃ ಸುದೀಪ್ ಚಿತ್ರದಿಂದ ಹೊರಬಂದಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೆಲವು ಅಂಶಗಳನ್ನ ಗಮನಿಸಿದ್ರೆ ಬಹುಶಃ ಇದು ನಿಜ ಇರಬಹುದು ಎನಿಸುತ್ತಿದೆ.

ಸುದೀಪ್ ಶೇರ್ ಮಾಡಿಲ್ಲ ಯಾಕೆ.?

ಸುದೀಪ್ ಶೇರ್ ಮಾಡಿಲ್ಲ ಯಾಕೆ.?

ಒಂದು ವೇಳೆ ಸುದೀಪ್ ಈ ಚಿತ್ರದಲ್ಲಿ ಅಭಿನಯಿಸಿದ್ರೆ, ಖಂಡಿತವಾಗಿ ಚಿತ್ರದ ಟ್ರೈಲರ್ ನ್ನ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡ್ತಿದ್ರು. ಸಿನಿಮಾ ಬಗ್ಗೆಯೂ ಮಾಹಿತಿ ನೀಡ್ತಿದ್ರು. ಆದ್ರೆ, ಇದುವರೆಗೂ ಸುದೀಪ್ ಅವರು ಈ ಚಿತ್ರದ ಬಗ್ಗೆ ಒಂದೇ ಒಂದು ಮಾತು ಆಡಿಲ್ಲ. ಅಲ್ಲದೇ ರೈಸನ್ ಚಿತ್ರತಂಡ ಪ್ರೆಸ್ ಮೀಟ್ ಮಾಡ್ತೀವಿ ಅಂತ ಹೇಳಿಕೊಂಡಿದ್ದರು. ಅದು ಕೂಡ ಮಾಡಿಲ್ಲ ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ.

ಸುದೀಪ್ ಪಾತ್ರ ಸಸ್ಪೆನ್ಸ್ ಆಗಿಟ್ರಾ.?

ಸುದೀಪ್ ಪಾತ್ರ ಸಸ್ಪೆನ್ಸ್ ಆಗಿಟ್ರಾ.?

ಇಲ್ಲ, ಸುದೀಪ್ ಪಾತ್ರವನ್ನ ಸಸ್ಪೆನ್ಸ್ ಆಗಿಡಲಾಗಿದೆ. ಇದು ಸಿನಿಮಾದ ಸಾಮಾನ್ಯ ಟ್ರೈಲರ್ ಅಷ್ಟೇ ಎಂದರೂ ಅಲ್ಲಿಯೂ ಅನುಮಾನ. ಚಿತ್ರದ ಮುಖ್ಯ ಪಾತ್ರವನ್ನೇ ರಿವೀಲ್ ಮಾಡದೇ ಅದ್ಯಾವ ಸಸ್ಪೆನ್ಸ್ ಇರಬಹುದು. ಇನ್ನು ಟ್ರೈಲರ್ ನಲ್ಲಿ ಮತ್ತು ವಿವರಣೆಯಲ್ಲಿ ಎಲ್ಲಿಯೂ ಸುದೀಪ್ ಹೆಸರನ್ನ ಪ್ರಕಟಿಸಿಲ್ಲ. ಉಳಿದಂತೆ ಯಾವ ಕಲಾವಿದರ ಹೆಸರು ಹೇಳಿಲ್ಲ ಯಾಕೆ.?

ಬ್ಯುಸಿ ಶೆಡ್ಯೂಲ್ ಕಾರಣಾವಾಯಿತಾ.?

ಬ್ಯುಸಿ ಶೆಡ್ಯೂಲ್ ಕಾರಣಾವಾಯಿತಾ.?

ಸದ್ಯಕ್ಕೆ 'ರೈಸನ್' ಚಿತ್ರದಲ್ಲಿ ಸುದೀಪ್ ಇದುವರೆಗೂ ಅಭಿನಯಿಸಿಲ್ಲ ಎಂಬ ಸುದ್ದಿಯಿದೆ. 'ಪೈಲ್ವಾನ್', 'ಕೋಟಿಗೊಬ್ಬ', 'ಬಿಗ್ ಬಾಸ್' ಹೀಗೆ ಬ್ಯುಸಿ ಶೆಡ್ಯೂಲ್ ಮಧ್ಯೆ ಈ ಸಿನಿಮಾದಲ್ಲಿ ನಟಿಸಲು ಕಷ್ಟವಾಗ್ತಿದ್ಯಾ ಎಂಬ ಮಾತಿದೆ. ಹಾಗಾಗಿ, ಇದುವರೆಗೂ ಶೂಟಿಂಗ್ ಮಾಡಿಲ್ಲ. ಸೋ, ಟ್ರೈಲರ್ ನಲ್ಲಿ ಸುದೀಪ್ ಇಲ್ಲ. ಬಟ್ ಸಿನಿಮಾ ಮಾಡ್ತಾರೆ ಎಂದು ಹೇಳಲಾಗ್ತಿದೆ.

More from Filmibeat

English summary
kannada actor sudeep starrer hollywood movie risen trailer has released. but, Unfortunately sudeep missing in trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X