ಒಂದೇ ವರ್ಷದಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸುದೀಪ್

Recommended Video

Sudeep acted 3 pan india films this year | Filmibeat Kannada

ನಟ ಸುದೀಪ್ ಈ ವರ್ಷ ಬಂಪರ್ ಹೊಡೆದಿದ್ದಾರೆ. ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಈ ಮೂರು ಚಿತ್ರಗಳು ಕೂಡ ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಉಂಟು ಮಾಡಿವೆ.

2019 ರಲ್ಲಿ ಸುದೀಪ್ 'ಪೈಲ್ವಾನ್' ಸಿನಿಮಾದಲ್ಲಿ ನಟಿಸಿದರು. ಕನ್ನಡದ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಆದ 'ಪೈಲ್ವಾನ್' ಈ ವರ್ಷದ ಹಿಟ್ ಸಿನಿಮಾ ಆಗಿದೆ.

'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಚಿರಂಜೀವಿ ನಟನೆಯ 151ನೇ ಸಿನಿಮಾ. ತೆಲುಗು ಇಂಡಸ್ಟ್ರಿಗೆ ಈ ಸಿನಿಮಾದ ಮೂಲಕ ಸುದೀಪ್ ಕಮ್ ಬ್ಯಾಕ್ ಮಾಡಿದ್ದರು. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಸುದೀಪ್ ಅವುಕು ರಾಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೆಚ್ಚುಗೆ ಪಡೆದರು.

Sudeep Acted 3 Pan India Films This Year

ಈ ಎರಡು ಸಿನಿಮಾಗಳ ನಂತರ ಸುದೀಪ್ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. 'ದಬಾಂಗ್ 3'ನಲ್ಲಿ ಸಲ್ಮಾನ್ ಖಾನ್ ಜೊತೆಗೆ ವಿಲನ್ ಆಗಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ. ಸುದೀಪ್ ಪಾತ್ರ ಕುತೂಹಲ ಮೂಡಿಸಿದೆ. ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿಯೂ ಡಬ್ ಆಗಿದೆ.

'ಪೈಲ್ವಾನ್', 'ಸೈರಾ ನರಸಿಂಹ ರೆಡ್ಡಿ' ಹಾಗೂ 'ದಬಾಂಗ್ 3' ಈ ಮೂರು ಸಿನಿಮಾಗಳಿಂದ ಸುದೀಪ್ ಒಂದು ಹಂತ ಮೇಲೆ ಹೋಗಿದ್ದಾರೆ. ಕನ್ನಡ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಅಭಿಮಾನಿಗಳನ್ನು ತಲುಪಿದ್ದಾರೆ.

More from Filmibeat

English summary
Kannada actor Sudeep acted 3 pan india films this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X