twitter
    For Quick Alerts
    ALLOW NOTIFICATIONS  
    For Daily Alerts

    ಒಂದೇ ವರ್ಷದಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸುದೀಪ್

    |

    Recommended Video

    Sudeep acted 3 pan india films this year | Filmibeat Kannada

    ನಟ ಸುದೀಪ್ ಈ ವರ್ಷ ಬಂಪರ್ ಹೊಡೆದಿದ್ದಾರೆ. ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಈ ಮೂರು ಚಿತ್ರಗಳು ಕೂಡ ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಉಂಟು ಮಾಡಿವೆ.

    2019 ರಲ್ಲಿ ಸುದೀಪ್ 'ಪೈಲ್ವಾನ್' ಸಿನಿಮಾದಲ್ಲಿ ನಟಿಸಿದರು. ಕನ್ನಡದ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಆದ 'ಪೈಲ್ವಾನ್' ಈ ವರ್ಷದ ಹಿಟ್ ಸಿನಿಮಾ ಆಗಿದೆ.

    ಕಿಚ್ಚ ಸುದೀಪ್ ನಿರ್ದೇಶನ ಮಾಡುತ್ತಿರುವುದು ರಿಮೇಕ್ ಚಿತ್ರವಲ್ಲ ಸ್ವಮೇಕ್ಕಿಚ್ಚ ಸುದೀಪ್ ನಿರ್ದೇಶನ ಮಾಡುತ್ತಿರುವುದು ರಿಮೇಕ್ ಚಿತ್ರವಲ್ಲ ಸ್ವಮೇಕ್

    'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಚಿರಂಜೀವಿ ನಟನೆಯ 151ನೇ ಸಿನಿಮಾ. ತೆಲುಗು ಇಂಡಸ್ಟ್ರಿಗೆ ಈ ಸಿನಿಮಾದ ಮೂಲಕ ಸುದೀಪ್ ಕಮ್ ಬ್ಯಾಕ್ ಮಾಡಿದ್ದರು. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಸುದೀಪ್ ಅವುಕು ರಾಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೆಚ್ಚುಗೆ ಪಡೆದರು.

    Sudeep Acted 3 Pan India Films This Year

    ಈ ಎರಡು ಸಿನಿಮಾಗಳ ನಂತರ ಸುದೀಪ್ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. 'ದಬಾಂಗ್ 3'ನಲ್ಲಿ ಸಲ್ಮಾನ್ ಖಾನ್ ಜೊತೆಗೆ ವಿಲನ್ ಆಗಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ. ಸುದೀಪ್ ಪಾತ್ರ ಕುತೂಹಲ ಮೂಡಿಸಿದೆ. ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿಯೂ ಡಬ್ ಆಗಿದೆ.

    ರಷ್ಯಾದ ಅಭಿಮಾನಿಯಿಂದ ಕಿಚ್ಚ ಸುದೀಪ್ ಗೆ ಬಂತು ವಿಶೇಷ ಸಂದೇಶರಷ್ಯಾದ ಅಭಿಮಾನಿಯಿಂದ ಕಿಚ್ಚ ಸುದೀಪ್ ಗೆ ಬಂತು ವಿಶೇಷ ಸಂದೇಶ

    'ಪೈಲ್ವಾನ್', 'ಸೈರಾ ನರಸಿಂಹ ರೆಡ್ಡಿ' ಹಾಗೂ 'ದಬಾಂಗ್ 3' ಈ ಮೂರು ಸಿನಿಮಾಗಳಿಂದ ಸುದೀಪ್ ಒಂದು ಹಂತ ಮೇಲೆ ಹೋಗಿದ್ದಾರೆ. ಕನ್ನಡ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಅಭಿಮಾನಿಗಳನ್ನು ತಲುಪಿದ್ದಾರೆ.

    English summary
    Kannada actor Sudeep acted 3 pan india films this year.
    Monday, November 18, 2019, 17:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X