»   » ಹಾಲಿವುಡ್ ಚಿತ್ರಕ್ಕೆ ಕೈಹಾಕಿದ ನಟ ಕಿಚ್ಚ ಸುದೀಪ್

ಹಾಲಿವುಡ್ ಚಿತ್ರಕ್ಕೆ ಕೈಹಾಕಿದ ನಟ ಕಿಚ್ಚ ಸುದೀಪ್

Posted By:
Subscribe to Filmibeat Kannada
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಂದಿನ ನಡೆಯೇನು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. 'ಈಗ' ಚಿತ್ರದ ಬಳಿಕ ಅವರು ಯಾವ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಅವರು ಈ ಬಾರಿ ಹಾಲಿವುಡ್ ಚಿತ್ರಕ್ಕೆ ಕೈಹಾಕಿದ್ದಾರೆ.

2009ರಲ್ಲಿ ತೆರೆಕಂಡ ಹಾಲಿವುಡ್ ಹಿಟ್ ಚಿತ್ರ 'ದಿ ಹ್ಯಾಂಗೋವರ್' ಚಿತ್ರವನ್ನು ಅವರು ರೀಮೇಕ್ ಮಾಡಲಿದ್ದಾರೆ. ಆದರೆ ಈ ಚಿತ್ರವನ್ನು ಅವರು ಕನ್ನಡದಲ್ಲಿ ರೀಮೇಕ್ ಮಾಡುತ್ತಿಲ್ಲ. ಬದಲಾಗಿ ಈ ಬಾರಿಯೂ ಅವರು ತೆಲುಗು, ತಮಿಳು ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ತೆಲುಗಿನಲ್ಲಿ ಈ ಚಿತ್ರಕ್ಕೆ 'ಆಕ್ಷನ್' ಎಂದು ಹೆಸರಿಡಲಾಗಿದೆ.

ಹಾಲಿವುಡ್ ನಲ್ಲಿ ಭರ್ಜರಿ ಹಿಟ್ ದಾಖಲಿಸಿದ 'ದಿ ಹ್ಯಾಂಗೋವರ್' ಚಿತ್ರ ಪಕ್ಕಾ ಹಾಸ್ಯ ಪ್ರಧಾನ ಚಿತ್ರ. ಹಾಲಿವುಡ್ ನಲ್ಲಿ ಈ ಚಿತ್ರ 467,483,912 ಯುಎಸ್ ಡಾಲರ್ ಗಳಿಸಿತ್ತು. ಟಾಡ್ ಫಿಲಿಪ್ಸ್ ನಿರ್ಮಿಸಿದ್ದ ಈ ಚಿತ್ರವನ್ನು ಅವರೇ ನಿರ್ದೇಶಿಸಿದ್ದರು.

ಈ ಚಿತ್ರದ ತೆಲುಗು ರೀಮೇಕ್ ಗೆ ಅನಿಲ್ ಸುಂಕರ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ. ತೆಲುಗಿನ ಇತರೆ ನಟರಾದ ಅಲ್ಲರಿ ನರೇಶ್, ವೈಭವ್, ರಾಜು ಸುಂದರಂ, ನೀಲಂ ಉಪಾಧ್ಯ, ಸ್ನೇಹಾ ಉಲ್ಲಾಳ್ ಹಾಗೂ ಕಾಮ್ನಾ ಜೇಠ್ಮಲಾನಿ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಮೂಲ ಚಿತ್ರದಲ್ಲಿ ಮಾಜಿ ಬಾಕ್ಸರ್ ಮೈಕ್ ಟೈಸನ್ ಪೋಷಿಸಿದ್ದ ಪಾತ್ರವನ್ನು ಸುದೀಪ್ ಮಾಡಲಿದ್ದಾರೆ. ಚಿತ್ರದಲ್ಲಿ ಅವರದು ವಿಶೇಷ ಪಾತ್ರ. ಈ ಚಿತ್ರದಲ್ಲಿ ತಮ್ಮದು 'ಕ್ರೇಜಿ ಕೋಟ್ಯಾಧಿಪತಿ' ಪಾತ್ರ ಎಂದಿದ್ದಾರೆ ಸುದೀಪ್. ಇನ್ನೊಂದು ವಿಶೇಷ ಎಂದರೆ ಈ ಚಿತ್ರ 3Dಯಲ್ಲಿ ಮೂಡಿಬರಲಿರುವುದು.

ತೆಲುಗು, ತಮಿಳು ದ್ವಿಭಾಷಾ ಚಿತ್ರ ಇದಾಗಿದ್ದು ತಮಿಳಿನಲ್ಲಿ 'ಏಸ್ ರಾಜ ರಾಣಿ ಜಾಕಿ ಮತ್ರುಮ್ ಜೋಕರ್' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಬಪ್ಪ ಲಹರಿ ಸಂಗೀತ (ಹಿಟ್ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಪುತ್ರ) ಇರುತ್ತದೆ. ಏತನ್ಮಧ್ಯೆ ಕನ್ನಡ 'ಬಚ್ಚನ್' ಚಿತ್ರದ ಶೂಟಿಂಗ್ ನಲ್ಲೂ ಸುದೀಪ್ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
Kannada actor Kichcha Sudeep returns to Tollywood with a special appearance in Action — a remake of Hollywood film The Hangover (2009). Directed by Anil Sunkara, the film stars Allari Naresh, Vaibhav, Raju Sundaram, Neelam Upadhyay and Kamna Jethmalani, among others.
Please Wait while comments are loading...