For Quick Alerts
  ALLOW NOTIFICATIONS  
  For Daily Alerts

  133 ವರ್ಷ ಹಳೆಯ ಕನ್ನಡ ಶಾಲೆಯನ್ನು ದತ್ತು ಪಡೆದ ಸುದೀಪ್

  |

  ನಟ ಕಿಚ್ಚ ಸುದೀಪ್ ತಮ್ಮ ಸಿನಿಮಾಗಳಿಂದ ಎಷ್ಟು ಖ್ಯಾತರೋ ಸಮಾಜ ಸೇವೆ ಮೂಲಕವೂ ಅಷ್ಟೇ ಜನಪ್ರಿಯರು. ತಮಗೆ ಎಲ್ಲವನ್ನೂ ಕೊಟ್ಟ ಸಮಾಜಕ್ಕೆ ತಾವು ಏನನ್ನಾದರೂ ಕೊಡುವ ಉದ್ದೇಶ ಸುದೀಪ್‌ರದ್ದು. ಹಾಗಾಗಿಯೇ ಹಲವು ಸಾಮಾಜಿಕ ಕಾರ್ಯಗಳಲ್ಲಿ ಸುದೀಪ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹಿರಿಯ ನಟರು, ಸಂಕಷ್ಟದಲ್ಲಿರುವ ಶಿಕ್ಷಕರು, ಬಡ ಮಕ್ಕಳು, ಆಮ್ಲಜನಕ ಕೊರತೆಯಿಂದ ಬಳಲುತ್ತಿರುವ ರೋಗಿಗಳು ಹೀಗೆ ಹಲವರಿಗೆ ತಮ್ಮ ಚಾರಿಟೇಬಲ್ ಸೊಸೈಟಿ ಮೂಲಕ ಸಹಾಯ ಮಾಡಿದ ಸುದೀಪ್ ಇದೀಗ ಮತ್ತೊಂದು ಒಳ್ಳೆಯ ಕಾರ್ಯ ಮಾಡಿದ್ದಾರೆ.

  ನಟ ಸುದೀಪ್ 133 ವರ್ಷಗಳ ಸುದೀರ್ಘ ಇತಿಹಾಸ ಇರುವ ಕನ್ನಡ ಶಾಲೆಯೊಂದನ್ನು ಸುದೀಪ್ ದತ್ತು ಪಡೆದಿದ್ದು, ಆ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ.

  ಶಿವಮೊಗ್ಗದ ಬಿ.ಎಚ್.ರಸ್ತೆಯ ಕನ್ನಡ ಶಾಲೆಯನ್ನು ಸುದೀಪ್ ಚಾರಿಟೇಬಲ್ ಟ್ರಸ್ಟ್ ದತ್ತು ಪಡೆಯುತ್ತಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪತ್ರ ಮುಖೇನ ಅನುಮತಿಯನ್ನು ಸಹ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಗಳು ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್‌ಗೆ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  ಶಾಲೆಗಾಗಿ ನಾವು-ನೀವು ಯೋಜನೆಯಡಿ ಈ ಐತಿಹಾಸಿಕ ಶಾಲೆಯನ್ನು ಸುದೀಟ ಚಾರಿಟೇಬಲ್ ಸೊಸೈಟಿಗೆ ಶಿಕ್ಷಣ ಇಲಾಖೆಯು ದತ್ತು ನೀಡಿದ್ದು, ಶಾಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳು ಶಿಕ್ಷಣ ಇಲಾಖೆಯ ಪರವಾಗಿ ಹೇಳಿದ್ದಾರೆ.

  ಕೊರೊನಾ ಕಾಲದಲ್ಲಿ ಸಾಕಷ್ಟು ಸಹಾಯ

  ಕೊರೊನಾ ಕಾಲದಲ್ಲಿ ಸಾಕಷ್ಟು ಸಹಾಯ

  ಸುದೀಪ್ ಚಾರಿಟೇಬಲ್ ಸೊಸೈಟಿಯು ಸುದೀಪ್ ಅವರ ಅಭಿಮಾನಿಗಳು, ಸುದೀಪ್ ಮಾರ್ಗದರ್ಶನದಲ್ಲಿ ನಡೆಸುತ್ತಿರುವ ಸಂಘವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಕೊರೊನಾ ಕಾಲದಲ್ಲಿ ಈ ಸೊಸೈಟಿಯು ಸಾಕಷ್ಟು ಜನರಿಗೆ ಸಹಾಯ ಮಾಡಿದೆ.

  ವಸತಿ ಶಾಲೆ ಮಕ್ಕಳಿಗೆ ನೆರವು

  ವಸತಿ ಶಾಲೆ ಮಕ್ಕಳಿಗೆ ನೆರವು

  ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಪೃಥ್ವಿ ವಸತಿ ಶಾಲೆ ಮಳೆಯಿಂದ ಸೋರುತ್ತಿತ್ತು. ಅಲ್ಲದೆ ಲಾಕ್ ಡೌನ್‌ನಿಂದ ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 40 ಕ್ಕೂ ಹೆಚ್ಚು ಮಕ್ಕಳಿರುವ ಈ ಶಾಲೆಗೆ ಕಿಚ್ಚ ಸುದೀಪ್ ನೆರವು ನೀಡಿದ್ದರು. ಕಿಚ್ಚ ಸುದೀಪ್ ಚಾರಿಟೇಬಲ್ ರಾಜ್ಯ ಮುಖಂಡ ರಮೇಶ್ ಕಿಟ್ಟಿ ಹಾಗೂ ಜಿಲ್ಲಾ ಮುಖಂಡರಾದ ಸೋಮ ನಾಯಕ, ಪರಶಿವ ಅವರ ತಂಡ ಶಾಲೆಗೆ ಭೇಟಿ ನೀಡಿ, ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ವಿತರಿಸಿ ವಸತಿ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿ ಮಾಡಲೂ ನೆರವು ನೀಡುವುದಾಗಿ ಭರವಸೆ ನೀಡಿದ್ದರು.

  ಹಿರಿಯ ನಟರಿಗೆ ಸುದೀಪ್ ನೆರವು

  ಹಿರಿಯ ನಟರಿಗೆ ಸುದೀಪ್ ನೆರವು

  ಅದಕ್ಕೂ ಮುನ್ನಾ, ಕೋವಿಡ್ ಎರಡನೇ ಅಲೆ ಉಚ್ರಾಯದಲ್ಲಿದ್ದ ಸಂದರ್ಭದಲ್ಲಿ ಚಿತ್ರರಂಗದ ಹಿರಿಯ ನಟರ ಮನೆಗಳಿಗೆ ದಿನಸಿ, ಔಷಧಗಳನ್ನು ಕಿಚ್ಚ ಸುದೀಪ್ ನೀಡಿದ್ದರು. ಜೊತೆಗೆ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ನೆರವು ನೀಡುವುದಾಗಿಯೂ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ನಿರ್ಧರಿಸಿತ್ತು. ಸಂಕಷ್ಟದಲ್ಲಿರುವ ಶಿಕ್ಷಕರ ಖಾತೆಗಳಿಗೆ 2000 ಹಣ ಹಾಕುವ ಯೋಜನೆ ಬಗ್ಗೆ ಸೊಸೈಟಿ ಸದಸ್ಯರು ಪ್ರಕಟಿಸಿದ್ದರು.

  ಎರಡು ಸಿನಿಮಾಗಳು ಬಿಡುಗಡೆಗೆ ತಯಾರು

  ಎರಡು ಸಿನಿಮಾಗಳು ಬಿಡುಗಡೆಗೆ ತಯಾರು

  ಇನ್ನು ಸುದೀಪ್ ಅವರ ಸಿನಿಮಾಗ ವಿಷಯಕ್ಕೆ ಬರುವುದಾದರೆ ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಅದರ ಜೊತೆಗೆ ಇತ್ತೀಚೆಗಷ್ಟೆ 'ವಿಕ್ರಾಂತ್ ರೋಣ' ಸಿನಿಮಾದ ಚಿತ್ರೀಕರಣ ಮುಗಿದಿದ್ದು ಅದೂ ಸಹ ಬಿಡುಗಡೆಗೆ ತಯಾರಾಗಿದೆ. ಇದೀಗ ಉಪೇಂದ್ರ ಜೊತೆ 'ಕಬ್ಜ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.

  English summary
  Actor Sudeep adopts 133 year old Kannada school in Shivamogga through his charitable society.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X