twitter
    For Quick Alerts
    ALLOW NOTIFICATIONS  
    For Daily Alerts

    4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಕಿಚ್ಚ ಸುದೀಪ್

    |

    ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿರುವುದು ಕಳವಳದ ಸಂಗತಿಯಾಗಿದೆ. ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಆಭಿಯಾನದಲ್ಲಿ ಅನೇಕರು ಕೈಜೋಡಿಸುತ್ತಿದ್ದಾರೆ. ಇತ್ತೀಚಿಗೆ ಸ್ಯಾಂಡಲ್ ವುಡ್ ನಿರ್ದೇಶಕ ರಿಷಬ್ ಶಿಟ್ಟಿ, ನಟಿ ಪ್ರಣೀತಾ, ಅಕುಲ್ ಬಾಲಾಜಿ ಸೇರಿದ್ದಂತೆ ಅನೇಕರು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ದಿ ಪಡಿಸುವ ಕೆಲಸ ಮಾಡಿದ್ದಾರೆ.

    Recommended Video

    Kiccha Sudeep Adopts 4 Government School | Filmibeat Kannada

    ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 4 ಶಾಲೆಯನ್ನು ದತ್ತು ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಪಿ. ಒಬವನಹಳ್ಳಿ, ಚಳ್ಳಕೆರೆ ಶಾಲೆ, ಪರುಶರಾಂಪುರ ಶಾಲೆ ಮತ್ತು ಚಿತ್ರದುರ್ಗದ ಶಾಲೆಯನ್ನುದತ್ತು ಪಡೆದು ಶಾಲೆಯ ಸಂಪೂರ್ಣ ಅಭಿವೃದ್ಧಿಯನ್ನು ವಹಿಸಿಕೊಂಡಿದ್ದಾರೆ.

    ಅಭಿಮಾನಿಯ ಅಳಲಿಗೆ ಕರಗಿ ವಿಡಿಯೋ ಕಾಲ್ ಮಾಡಿ ಮಾತನಾಡಿದ ಕಿಚ್ಚ ಸುದೀಪ್ಅಭಿಮಾನಿಯ ಅಳಲಿಗೆ ಕರಗಿ ವಿಡಿಯೋ ಕಾಲ್ ಮಾಡಿ ಮಾತನಾಡಿದ ಕಿಚ್ಚ ಸುದೀಪ್

    ಶಾಲೆಯ ಮೂಲ ಸೌಕರ್ಯ, ಪೀಠೋಪಕರಣ, ಗುಣಮಟ್ಟದ ಶಿಕ್ಷಣ ಸೇರಿದ್ದಂತೆ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಕರೆತರುವ ಪ್ರಯತ್ನ ಈ ಮೂಲಕ ಮಾಡಲಾಗುತ್ತಿದೆ. ಜೊತೆಗೆ ಅನೇಕ ಯೋಜನೆಗಳನ್ನು ಟ್ರಸ್ಟ್ ಹಮ್ಮಿಕೊಂಡಿದೆ.

    Sudeep Adopt 4 Government School In Chitradurga

    ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸಾಕಷ್ಟು ಸಮಾಜಮುಖಿ ಕೆಲಗಳನ್ನು ಮಾಡುತ್ತಿದೆ. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಜನರ ಕಷ್ಟಕ್ಕೂ ಟ್ರಸ್ಟ್ ನೆರವಾಗಿದೆ. ಆಹಾರ, ದಿನಸಿ ಹಂಚುವ ಮೂಲಕ ಕಷ್ಟದಲ್ಲಿದ್ದರ ನೆರವಿಗೆ ದಾವಿಸಿತ್ತು.

    ಇತ್ತೀಚಿಗೆ ಮುಸ್ಲಿಂ ಯುವತಿಯೊಬ್ಬರ ಮದುವೆಗೂ ಸುದೀಪ್ ಚಾರಿಟೇಬಲ್ ಟ್ರಸ್ಟ್ ಹಣಕಾಸಿನ ನೆರವು ನೀಡಿತ್ತು. ಹೀಗೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಸುದೀಪ್ ಚಾರಿಟೇಬಲ್ ಟ್ರಸ್ಟ್ ಈಗ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವುದು ಖುಷಿಯ ವಿಚಾರ. ಈ ಟ್ರಸ್ಟ್ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎನ್ನುವುದು ಅಭಿಮಾನಿಗಳ ಆಶಯ.

    English summary
    Kannada Actor Sudeep Adopt 4 Government School in Chitradurga.
    Wednesday, July 15, 2020, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X