ಮುಂಬೈನಲ್ಲಿ ಪಾರ್ಟಿ ಮಾಡಿದ ಅಲ್ಲು ಅರ್ಜುನ್, ಸುದೀಪ್, ರಕುಲ್, ಪೂಜಾ ಹೆಗ್ಡೆ
ದಕ್ಷಿಣ ಚಿತ್ರರಂಗದ ಸ್ಟಾರ್ ನಟರಾದ ಅಲ್ಲು ಅರ್ಜುನ್ ಮತ್ತು ಕಿಚ್ಚ ಸುದೀಪ್ ಮುಂಬೈನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದಾರೆ. ಇದೇ ಪಾರ್ಟಿಯಲ್ಲಿ ಸೌತ್ ನಟಿಯರಾದ ರಕುಲ್ ಪ್ರೀತ್ ಸಿಂಗ್, ಪೂಜಾ ಹೆಗ್ಡೆ ಕೂಡ ಕಾಣಿಸಿಕೊಂಡಿದ್ದಾರೆ.
ಪೈಲ್ವಾನ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ಸುದೀಪ್ ಇತ್ತೀಚಿಗಷ್ಟೆ ಮುಂಬೈಗೆ ಹೋಗಿದ್ದರು. ಹಿಂದಿಯಲ್ಲಿ ಸಿನಿಮಾ ತೆರೆಕಾಣುತ್ತಿರುವುದರಿಂದ ಅಲ್ಲಿ ಪ್ರಚಾರ ಮಾಡ್ತಿದ್ದಾರೆ. ಈ ನಡುವೆ ಪಾರ್ಟಿಯೊಂದಕ್ಕೆ ಹೋಗಿದ್ದ ಸುದೀಪ್, ಬಾಲಿವುಡ್ ಸ್ಟಾರ್ ಗಳ ಜೊತೆ ಕಾಣಿಸಿಕೊಂಡಿದ್ದಾರೆ.
ಅಷ್ಟಕ್ಕೂ, ಮುಂಬೈನಲ್ಲಿ ನಡೆದ ಆ ಪಾರ್ಟಿ ಯಾವುದು? ಅಲ್ಲು ಅರ್ಜುನ್, ಸುದೀಪ್ ಮುಖಾಮುಖಿಯಾದ್ರಾ? ಮುಂದೆ ಓದಿ....

ಯಾರೆಲ್ಲ ಇದ್ದರು ಆ ಪಾರ್ಟಿಯಲ್ಲಿ
ಕಿಚ್ಚ ಸುದೀಪ್, ಅಲ್ಲು ಅರ್ಜುನ್, ರಕುಲ್ ಪ್ರೀತ್ ಸಿಂಗ್, ನಿಧಿ ಅಗರ್ ವಾಲ್, ಪೂಜಾ ಹೆಗ್ಡೆ, ಅರ್ಬಾಜ್ ಖಾನ್, ಅಲ್ಲು ಸಿರೀಶ್, ಜಾನ್ ಅಬ್ರಾಹಿಂ, ಕರಣ್ ಜೋಹರ್, ಸೋನಾಕ್ಷಿ ಸಿನ್ಹಾ, ಜೆನಿಲಿಯಾ, ರಿತೇಶ್ ದೇಶಮುಖ್, ಅರ್ಜುನ್ ಕಪೂರ್, ಸೋಹಿಲ್ ಖಾನ್, ಅರ್ಜುನ್ ರಾಂಪಾಲ್, ಚಿತ್ರಾಂಗದ ಸಿನ್ಹಾ ಸೇರಿದಂತೆ ಇನ್ನು ಹಲವರು ಭಾಗಿಯಾಗಿದ್ದರು.

ಯಾಕೆ ಪಾರ್ಟಿ ಮಾಡಿದ್ದು?
ನಿರ್ದೇಶಕ ನಿಖಿಲ್ ಅಡ್ವಾಣಿ ಅವರ ಮಾಲೀಕತ್ವದ ''Emmay Entertainment'' ಸಂಸ್ಥೆ ಸ್ಥಾಪನೆಯಾಗಿ 8 ವರ್ಷ ಆಗಿದೆ. 8ನೇ ವರ್ಷದ ಸಂಭ್ರಮಕ್ಕೆ ಈ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಹಾಗಾಗಿ, ಬಾಲಿವುಡ್ ಸ್ಟಾರ್ ಗಳ ಜೊತೆ ಸೌತ್ ಸ್ಟಾರ್ ಗಳು ಕಾಣಿಸಿಕೊಂಡಿದ್ದು ವಿಶೇಷ.

Emmay Entertainment ಚಿತ್ರಗಳು
'Emmay Entertainment' ನಿರ್ಮಾಣದ ಚಿತ್ರಗಳನ್ನ ನೋಡುವುದಾದರೇ, ಡಿ ಡೇ, ಕಟ್ಟಿ ಬಟ್ಟಿ, ಹೀರೋ, ಏರ್ ಲಿಫ್ಟ್, ಸತ್ಯ ಮೇವ ಜಯತೆ, ಬಜಾರ್, ಮರ್ಜಾವಾನ್ ಎಂಬ ಚಿತ್ರಗಳ ಜೊತೆ ಟೆಲಿ ಫಿಲಂಗಳನ್ನ ಕೂಡ ನಿರ್ಮಿಸಿದ್ದಾರೆ.

ಹಿಂದಿಯಲ್ಲಿ ಸುದೀಪ್ ಪರಿಚಿತ
ಅಂದ್ಹಾಗೆ, ಸುದೀಪ್ ಅವರಿಗೆ ಹಿಂದಿ ಇಂಡಸ್ಟ್ರಿಯಲ್ಲಿ ಹೆಚ್ಚು ಸ್ನೇಹಿತರಿದ್ದಾರೆ. ಸಿನಿಮಾ, ಸಿಸಿಎಲ್ ಕಾರ್ಯಕ್ರಮದಿಂದ ಹೆಚ್ಚು ಆತ್ಮೀಯತೆ ಬೆಳೆದಿದೆ. ಅರ್ಬಾಜ್ ಖಾನ್, ಸೋಹಿಲ್ ಖಾನ್, ರಿತೇಶ್ ಅವರ ಜೊತೆ ಕಿಚ್ಚ ಹೆಚ್ಚು ಆತ್ಮೀಯ. ರಣ್, ಫೋಂಕ್, ದಬಾಂಗ್ 3, ಫೋಂಕ್-2, ರಕ್ತ ಚರಿತ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಪೈಲ್ವಾನ್ ಸಿನಿಮಾ ಕೂಡ ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ.


Click it and Unblock the Notifications











