twitter
    For Quick Alerts
    ALLOW NOTIFICATIONS  
    For Daily Alerts

    ಡಾ.ವಿಷ್ಣು ಸ್ಮಾರಕ ವಿವಾದ ಬಗೆಹರಿಸಲು ಸುದೀಪ್ ನೀಡಿದ 4 ಸಲಹೆಗಳು

    By Bharath Kumar
    |

    Recommended Video

    ವಿಷ್ಣು ಸ್ಮಾರಕ ವಿವಾದ ಬಗೆಹರಿಸಲು ಸುದೀಪ್ ಕೊಟ್ಟ 4 ಸಲಹೆಗಳು ಇವೆ | Filmibeat Kannada

    ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕನ್ನಡದ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ.

    ವಿಷ್ಣು ಸ್ಮಾರಕದ ವಿವಾದವನ್ನ ಬಗೆಹರಿಸುವ ಬಗ್ಗೆ ಸಿಎಂ ಜೊತೆ ಮಾತನಾಡಿದ ಸುದೀಪ್ 4 ಪ್ರಮುಖ ಸಲಹೆಗಳನ್ನ ಸರ್ಕಾರಕ್ಕೆ ನೀಡಿದ್ದಾರೆ. ಸುದೀಪ್ ಹಾಗೂ ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ನೀಡಿರುವ ಈ ಸಲಹೆಗಳನ್ನ ಸರ್ಕಾರ ಅನುಸರಿಸಿದ್ದಲ್ಲಿ, ವಿಷ್ಣು ಸ್ಮಾರಕ ವಿವಾದ ಅಂತ್ಯವಾಗಿ ಸ್ಮಾರಕ ನಿರ್ಮಾಣ ಕಾರ್ಯ ಸುಗಮವಾಗಬಹುದು ಎಂಬ ಆಶಯ ಕಿಚ್ಚ ಸುದೀಪ್ ಅವರದ್ದು.

    ಡಾ.ವಿಷ್ಣು ಸ್ಮಾರಕ ಸಂಬಂಧ ಸಿಎಂ ಅವರನ್ನ ಭೇಟಿ ಮಾಡಿದ ಸುದೀಪ್ಡಾ.ವಿಷ್ಣು ಸ್ಮಾರಕ ಸಂಬಂಧ ಸಿಎಂ ಅವರನ್ನ ಭೇಟಿ ಮಾಡಿದ ಸುದೀಪ್

    ಇದರ ಜೊತೆಗೆ ಸುದೀಪ್ ಅವರು ಕೆಲವು ಮನವಿಯನ್ನ ಕೂಡ ಮಾಡಿದ್ದಾರೆ. ಹಾಗಿದ್ರೆ, ಸರ್ಕಾರಕ್ಕೆ ಸುದೀಪ್ ನೀಡಿರುವ ಆ ಸಲಹೆಗಳೇನು? ಮುಂದೆ ಓದಿ...

    ಒಂದು ಎಕರೆ ಜಾಗ ಸಾಕು

    ಒಂದು ಎಕರೆ ಜಾಗ ಸಾಕು

    ಸಲಹೆ-1: ಅಭಿಮಾನ್ ಸ್ಟುಡಿಯೋದಲ್ಲಿ ಸರ್ಕಾರ ನೀಡಿರುವ ಎರಡು ಎಕರೆ ಬದಲು, ಒಂದು ಅಥವಾ ಅರ್ಧ ಎಕರೆ ಜಾಗವನ್ನ ಮಂಜೂರು ಮಾಡುವುದು.

    'ಹೃದಯವಂತ' ಡಾ.ವಿಷ್ಣುವರ್ಧನ್ ಬಗ್ಗೆ ಸುದೀಪ್ ಮನದ ಮಾತು'ಹೃದಯವಂತ' ಡಾ.ವಿಷ್ಣುವರ್ಧನ್ ಬಗ್ಗೆ ಸುದೀಪ್ ಮನದ ಮಾತು

    ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಿ

    ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಿ

    ಸಲಹೆ-2: ದಿ.ಬಾಲಕೃಷ್ಣ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವುದು. ಅಭಿಮಾನ್ ಸ್ಟುಡಿಯೋ ಜಾಗಕ್ಕೆ ಸರ್ಕಾರವೇ ಪರಿಹಾರ ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲವೆನ್ನುವುದಾರೇ, ಆ ಜಾಗವನ್ನ ಕೊಂಡುಕೊಳ್ಳಲು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡುವುದು.

    'ವಿಷ್ಣುವರ್ಧನ್ ಅವರ ಸ್ಥಾನ ತುಂಬಿದ ನಟ ಸುದೀಪ್' ಅಂದಿದ್ದು ಯಾರು?'ವಿಷ್ಣುವರ್ಧನ್ ಅವರ ಸ್ಥಾನ ತುಂಬಿದ ನಟ ಸುದೀಪ್' ಅಂದಿದ್ದು ಯಾರು?

    ಸರ್ಕಾರದ ಮೊಕದ್ದಮೆ ವಾಪಸ್ ಪಡೆಯುವುದು

    ಸರ್ಕಾರದ ಮೊಕದ್ದಮೆ ವಾಪಸ್ ಪಡೆಯುವುದು

    ಸಲಹೆ-3: ಅಭಿಮಾನ್ ಸ್ಟುಡಿಯೋದ ಮೇಲೆ ಸರ್ಕಾರ ಹೂಡಿರುವ ಮೊಕದ್ದಮೆಗಳನ್ನ ವಾಪಸ್ಸು ಪಡೆಯುವುದು.

    'ಮೈಸೂರು ರತ್ನ' ಬಿರುದು ವಿಷ್ಣುದಾದಾಗೆ ಮಾತ್ರ ಮೀಸಲು: ಬೇರೆ ಯಾರಿಗೂ ಅಲ್ಲ.!'ಮೈಸೂರು ರತ್ನ' ಬಿರುದು ವಿಷ್ಣುದಾದಾಗೆ ಮಾತ್ರ ಮೀಸಲು: ಬೇರೆ ಯಾರಿಗೂ ಅಲ್ಲ.!

    ಒಂದು ಸಭೆ ಮಾಡಬಹುದು

    ಒಂದು ಸಭೆ ಮಾಡಬಹುದು

    ಸಲಹೆ-4: ಈ ಸಂಬಂಧ ತಾವೆ ಖುದ್ದು ಬಾಲಕೃಷ್ಣ ಅವರ ಕುಟುಂಬದ ಜೊತೆ ಒಂದು ಸಭೆ ಮಾಡಿದ್ರೆ, ಖಂಡಿತಾ ಅವರು ಒಪ್ಪುತ್ತಾರೆ ಎಂಬುದು ನನ್ನ ಖಚಿತ ನಿಲುವು'' ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ

    ಸ್ಮಾರಕ ಮೈಸೂರಿನಲ್ಲಿಯೇ ಆಗಲಿ

    ಸ್ಮಾರಕ ಮೈಸೂರಿನಲ್ಲಿಯೇ ಆಗಲಿ

    ಭಾರತಿ ವಿಷ್ಣುವರ್ಧನ್ ಅವರ ಕೋರಿಕೆಯ ಮೆರೆಗೆ ಡಾ ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿಯೇ ಆಗಲಿ. ಅದ್ರೆ, ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರವಾದ ಸ್ಥಳವನ್ನ 'ಡಾ ವಿಷ್ಣುವರ್ಧನ್ ಪುಣ್ಯಭೂಮಿ' ಎಂದು ಘೋಷಿಸಿ, ಅದನ್ನ ಅಭಿವೃದ್ಧಿ ಪಡಿಸಿ'' ಎಂದು ಮನವಿ ಮಾಡಿಕೊಂಡಿದ್ದಾರೆ.

    ಡಾ.ವಿಷ್ಣುವರ್ಧನ್ ಪರ ನಿಂತ ರಾಕಿಂಗ್ ಸ್ಟಾರ್ ಯಶ್ಡಾ.ವಿಷ್ಣುವರ್ಧನ್ ಪರ ನಿಂತ ರಾಕಿಂಗ್ ಸ್ಟಾರ್ ಯಶ್

    ಸರ್ಕಾರಕ್ಕೆ ಕಷ್ಟವಾದ್ರೆ ಅಭಿಮಾನಿಗಳಿಗೆ ಅವಕಾಶ ಕೊಡಿ

    ಸರ್ಕಾರಕ್ಕೆ ಕಷ್ಟವಾದ್ರೆ ಅಭಿಮಾನಿಗಳಿಗೆ ಅವಕಾಶ ಕೊಡಿ

    ಒಂದು ಕಡೆ ಸ್ಮಾರಕ ಮತ್ತೊಂದೆಡೆ ಪುಣ್ಯಭೂಮಿ ಎಂದು ಅಭಿವೃದ್ದಿ ಪಡಿಸುವುದು ಸರ್ಕಾರಿ ನಿಯಮಗಳಿಗೆ ವಿರುದ್ಧವೆನ್ನುವುದಾದರೇ, ಒಂದು ಎಕರೆ ಜಾಗವನ್ನ ಕೊಟ್ಟರೆ, ಅಭಿಮಾನಿಗಳು ಮತ್ತು ಹಿತೈಷಿಗಳಾದ ನಾವು ಆ ಸ್ಥಳವನ್ನ ಅಭಿವೃದ್ಧಿ ಪಡಿಸುತ್ತೇವೆ ಎಂದು ಲಿಖಿತ ರೂಪದಲ್ಲಿ ಒಪ್ಪುತ್ತಿದ್ದೇವೆ. ಡಿಸೆಂಬರ್ 30 ರಂದು ವಿಷ್ಣುವರ್ಧನ್ ಅವರ ಪುಣ್ಯ ಸ್ಮರಣೆ. ಹಾಗಾಗಿ, ದಯವಿಟ್ಟು ಅದಕ್ಕು ಮುಂಚೆ ಈ ಸಮಸ್ಯೆಯನ್ನ ಬಗೆಹರಿಸಿ, ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕಾಗಿ ಸುದೀಪ್ ಅವರು ಮನವಿ ಮಾಡಿಕೊಂಡಿದ್ದಾರೆ.

    ನೊಂದಿರುವ ಅಭಿಮಾನಿಗಳನ್ನ ನೋಯಿಸಬೇಡಿ ಯಶ್: ವಿಷ್ಣು ಅಭಿಮಾನಿಯ ಪತ್ರನೊಂದಿರುವ ಅಭಿಮಾನಿಗಳನ್ನ ನೋಯಿಸಬೇಡಿ ಯಶ್: ವಿಷ್ಣು ಅಭಿಮಾನಿಯ ಪತ್ರ

    English summary
    Kannada Actor Sudeep met chief minister Siddaramaiah and discuss about dr vishnuvardhan memorial.
    Monday, December 11, 2017, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X