For Quick Alerts
  ALLOW NOTIFICATIONS  
  For Daily Alerts

  ಆಪ್ತಮಿತ್ರ ಸುದೀಪ್ ಎದುರಿಗೆ ದರ್ಶನ್ ಬರಲ್ಲ! ಯಾಕೆ?

  By ಹರಾ
  |

  ಸ್ಯಾಂಡಲ್ ವುಡ್ಡಿನ ಜ್ಯೂನಿಯರ್ ವಿಷ್ಣುವರ್ಧನ್ ಮತ್ತು ಅಂಬರೀಶ್ ಅಂತಲೇ ಪೋಸ್ ಕೊಡುತ್ತಿರುವ, ಮಾರ್ಡನ್ ಕುಚ್ಚಿಕ್ಕು ಗೆಳೆಯರಾಗಿರುವ ನಟರೇ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇಬ್ಬರ ನಡುವೆ ಅದ್ಹೇಗೆ ಅನ್ಯೋನ್ಯತೆ ಬೆಳೆಯಿತೋ ದೇವರೇ ಬಲ್ಲ. ಆದ್ರೆ, ಕೆಲ ವರ್ಷಗಳಿಂದ ಸುದೀಪ್ ಮತ್ತು ದರ್ಶನ್ ಆಪ್ತಮಿತ್ರರು.

  ಸುದೀಪ್ ಚಿತ್ರಗಳಿಗೆ ದರ್ಶನ್ ಭೇಟಿ ನೀಡುವುದು, ದರ್ಶನ್ ಚಿತ್ರಗಳ ಹಾಡುಗಳನ್ನು ಸುದೀಪ್ ರಿಲೀಸ್ ಮಾಡುವುದು ಒಂದ್ಕಾಲದಲ್ಲಿ ಮಾಮೂಲಾಗಿತ್ತು. ಇಬ್ಬರು ಒಟ್ಟಾಗಿ ಸಿನಿಮಾ ನೋಡುವುದು, ಸಿಸಿಎಲ್ ಮ್ಯಾಚ್ ಗಾಗಿ ಮೈದಾನದಲ್ಲಿ ಇಬ್ಬರು ಬೆವರಿಳಿಸುವುದು ಕೆಲ ತಿಂಗಳುಗಳ ಹಿಂದೆ ಅತಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ದೃಶ್ಯವಾಗಿರುತ್ತಿತ್ತು.

  ಆದ್ರೀಗ ಈ ಇಬ್ಬರು ಗೆಳೆಯರು ಒಟ್ಟಾಗಿ ಕಾಣಿಸಿಕೊಳ್ಳುವುದೇ ವಿರಳವಾಗಿದೆ. ಎಲ್ಲೇ ಹೋದರು ಗಳಸ್ಯ ಕಂಠಸ್ಯದಂತಿದ್ದ ಸ್ನೇಹಿತರು ಮುಖಾಮುಖಿಯಾಗುತ್ತಿಲ್ಲ. ಒಂದೇ ಕಾರ್ಯಕ್ರಮಕ್ಕೆ ಇಬ್ಬರೂ ಹಾಜರಾಗಬೇಕಾದ ಅನಿವಾರ್ಯತೆ ಇದ್ದರೂ, 'ಕಿಲಾಡಿ ಜೋಡಿ' ಬೇರೆ ಬೇರೆಯಾಗಿ ಬರುತ್ತಿದ್ದಾರೆ. [ಅಮರಜೀವಿ ರಾಜ್ ಹಬ್ಬದಲ್ಲಿ ಕಿಚ್ಚ, ದಚ್ಚು ಮಾಡಿದ್ದೇನು?]

  ಇದಕ್ಕೆ ಸಾಕ್ಷಿ ನಿನ್ನೆಯಷ್ಟೇ (ಡಿಸೆಂಬರ್ 14) ಸಿಸಿಎಲ್ 5 ನೇ ಆವೃತ್ತಿಯ ಕರ್ನಾಟಕ ಬುಲ್ದೋಜರ್ಸ್ ಜರ್ಸಿ ಲಾಂಚ್ ಸಮಾರಂಭದಲ್ಲಿ ನಡೆದ ಘಟನೆ. ಅಲ್ಲೇನಾಯ್ತು ಅನ್ನುವುದನ್ನ ತಿಳಿದುಕೊಳ್ಳುವುದಕ್ಕೆ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ...

  ಮುಖಾಮುಖಿಯಾಗಲಿಲ್ಲ ಕುಚ್ಚಿಕ್ಕು ಗೆಳೆಯರು

  ಮುಖಾಮುಖಿಯಾಗಲಿಲ್ಲ ಕುಚ್ಚಿಕ್ಕು ಗೆಳೆಯರು

  ಎಲ್ಲಾ ಊಹಾಪೋಹಗಳಿಗೆ ಪುಷ್ಠಿ ನೀಡುವ ಸರಕು ಸಿಸಿಎಲ್ 5 ನೇ ಆವೃತ್ತಿಯ ಕರ್ನಾಟಕ ಬುಲ್ದೋಜರ್ಸ್ ಜರ್ಸಿ ಲಾಂಚ್ ಸಮಾರಂಭದಲ್ಲಿ ಲಭಿಸಿತು. ಮಾಧ್ಯಮ ಮತ್ತು ಪತ್ರಿಕಾ ಮಿತ್ರರಿಗೆ ಬಂದಿದ್ದ ಆಹ್ವಾನದ ಪ್ರಕಾರ, ದರ್ಶನ್ ಮತ್ತು ಸುದೀಪ್ ಈ ಸಮಾರಂಭದಲ್ಲಿ ಒಟ್ಟಾಗಿ ಭಾಗವಹಿಸಬೇಕಾಗಿತ್ತು. ಆದ್ರೆ ಅಲ್ಲಾಗಿದ್ದೇ ಬೇರೆ....

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಎಂಟ್ರಿ' ಕೊಡಲಿಲ್ಲ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಎಂಟ್ರಿ' ಕೊಡಲಿಲ್ಲ!

  ಬಹು ದಿನಗಳ ನಂತ್ರ ಬೆಸ್ಟ್ ಫ್ರೆಂಡ್ಸ್ ನ ಒಂದೇ ಫ್ರೇಮ್ ನಲ್ಲಿ ಸೆರೆಹಿಡಿಯಬೇಕೆನ್ನುತ್ತಿದ್ದ ಪತ್ರಿಕಾ ಮಿತ್ರರ ಆಸೆಗೆ ಸುದೀಪ್ ಮತ್ತು ದರ್ಶನ್ ತಣ್ಣೀರೆರಚಿದರು. ಕರ್ನಾಟಕ ಬುಲ್ಡೋಜರ್ಸ್ ಪರವಾಗಿ ಸುದೀಪ್-ದರ್ಶನ್ ಒಟ್ಟಾಗಿ ಜರ್ಸಿ ಲಾಂಚ್ ಮಾಡಬೇಕಾಗಿತ್ತು. ಆದ್ರೆ, ಕಾರ್ಯಕ್ರಮ ಮುಗಿದರೂ, ಅಲ್ಲಿ ದರ್ಶನ್ ಸುಳಿವಿರಲಿಲ್ಲ. ವೇದಿಕೆ ಮೇಲೆ ಸುದೀಪ್ ಮತ್ತು ಫ್ಯಾಮಿಲಿ, ಕರ್ನಾಟಕ ಬುಲ್ಡೋಜರ್ಸ್ ತಂಡ ಮಾತ್ರ ಕಂಗೊಳಿಸಿತು. [ರಾಜ್ಯ ಪ್ರಶಸ್ತಿ: ಶ್ರೇಷ್ಠ ನಟ ದರ್ಶನ್, ನಟಿ ನಿರ್ಮಲಾ]

  ಸುದೀಪ್ 'ಎಕ್ಸಿಟ್', ದರ್ಶನ್ 'ಎಂಟ್ರಿ'..!

  ಸುದೀಪ್ 'ಎಕ್ಸಿಟ್', ದರ್ಶನ್ 'ಎಂಟ್ರಿ'..!

  ಕಾರ್ಯಕ್ರಮದಿಂದ ಬೇಕಂತಲೇ ದರ್ಶನ್ ಗೈರು ಹಾಜರಾಗಿದ್ದಾರೆ ಅಂತ ಎಲ್ಲರೂ ಮಾತನಾಡಿಕೊಳ್ಳುವ ಹೊತ್ತಿಗೆ ದರ್ಶನ್ ಎಂಟ್ರಿಕೊಟ್ಟರು. ಅಷ್ಟೊತ್ತಿಗೆ ಸುದೀಪ್, ತಮ್ಮ ಮನೆ ಕಡೆ ಮುಖ ಮಾಡಿದ್ದು, ಇದೀಗ ಗಾಂಧಿನಗರದ ಮಂದಿಗೆ ಬ್ರೇಕಿಂಗ್ ನ್ಯೂಸ್ ಆಗಿದೆ.

  ದರ್ಶನ್ ಬರುವವರೆಗೂ ಯಾರೂ ಕಾಯ್ಲಿಲ್ಲ!

  ದರ್ಶನ್ ಬರುವವರೆಗೂ ಯಾರೂ ಕಾಯ್ಲಿಲ್ಲ!

  ಕರ್ನಾಟಕ ಬುಲ್ದೋಜರ್ಸ್ ಜರ್ಸಿ ಲಾಂಚ್ ಸಮಾರಂಭ ಆರಂಭವಾದಾಗಿನಿಂದಲೂ ದರ್ಶನ್ ಈಗ ಬರುತ್ತಾರೆ, ಆಗ ಬರುತ್ತಾರೆ ಅಂತ ವೇದಿಕೆಯ ಮೇಲೆ ಅನೌನ್ಸ್ ಮೆಂಟ್ ಆಗುತ್ತಲೇ ಇತ್ತು. ಆದ್ರೂ, ಅವರು ಬರುವ ಮುನ್ನವೇ ಸಮಾರಂಭ ಮುಗಿದು ಹೋಯ್ತು. ಸಮಾರಂಭದ ಕರೆಕ್ಟ್ ಸಮಯ ದರ್ಶನ್ ಗೆ ಗೊತ್ತಿರಲಿಲ್ಲವೋ, ಅಥವಾ ಅವರು ಬಂದಮೇಲೆ ಎಲ್ಲರು ಒಟ್ಟಾಗಿ ಜರ್ಸಿ ಲಾಂಚ್ ಮಾಡುವ ತಾಳ್ಮೆ ಅಲ್ಲಿದ್ದವರಿಗೆ ಇರಲಿಲ್ಲವೋ, ಗೊತ್ತಿಲ್ಲ. ಆದ್ರೆ, ಅಲ್ಲಿ ಅಂದುಕೊಂಡಿದ್ದು ಆಗಲಿಲ್ಲ ಅನ್ನುವುದೇ ಎಲ್ಲರ ಬೇಸರಕ್ಕೆ ಕಾರಣವಾಗಿದೆ.

  ಟೀಮ್ ನಲ್ಲಿಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್!

  ಟೀಮ್ ನಲ್ಲಿಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್!

  ಜರ್ಸಿ ಲಾಂಚ್ ಆದ್ಮೇಲೆ ಇಡೀ ಕರ್ನಾಟಕ ಬುಲ್ಡೋಜರ್ಸ್ ತಂಡ ವೇದಿಕೆ ಮೇಲೆ ನಿಂತು ಪೋಸ್ ಕೊಟ್ಟರು. ಅದ್ರಲ್ಲಿ ಮಿಸ್ ಆಗಿದ್ದು ದಾಸ ದರ್ಶನ್ ಒಬ್ಬರೇ. ಎಷ್ಟೇ ಆಗಲಿ, ದರ್ಶನ್ ಟೀಮ್ ಮೆಂಬರ್, ಟೀಮ್ ಸ್ಪಿರಿಟ್ ಅಲ್ಲಿದ್ದರೂ, ಅದರಲ್ಲಿ ದರ್ಶನ್ ಇರಲಿಲ್ಲ.

  ಬೂದಿ ಮುಚ್ಚಿದ ಕೆಂಡದಂತಿದೆ ಇಬ್ಬರ ವೈಷಮ್ಯ?

  ಬೂದಿ ಮುಚ್ಚಿದ ಕೆಂಡದಂತಿದೆ ಇಬ್ಬರ ವೈಷಮ್ಯ?

  ಇಬ್ಬರು ಬೇರೆಬೇರೆ ಎಂಟ್ರಿಕೊಡುತ್ತಿರುವ ಸಂಗತಿ ಇದೇ ಮೊದಲಲ್ಲ, ಡಾ.ರಾಜ್ ಕುಮಾರ್ ಸ್ಮರಣಾರ್ಥ ನಡೆದ ಮನರಂಜನಾ ಸಮಾರಂಭದಲ್ಲಿ ಒಂದೇ ಹಾಡಿಗೆ ಹೆಜ್ಜೆ ಹಾಕ್ಬೇಕಾಗಿದ್ದರೂ, ಇಬ್ಬರು ವೇದಿಕೆ ಮೇಲೆ ಒಟ್ಟಿಗೆ ಬರಲಿಲ್ಲ. ಡ್ಯಾನ್ಸ್ ಅಂತೂ ಆಡಲೇ ಇಲ್ಲ. ಹಾಡು ಶುರುವಾದಾಗ ಸುದೀಪ್ ಬಂದು ಕೈಬೀಸಿ ಹೋದ್ರೆ, ಹಾಡು ಮುಗಿಯುವ ಹೊತ್ತಿಗೆ ಬುಲ್ಲೆಟ್ ಪ್ರಕಾಶ್ ಜೊತೆ ಬಂದ ದರ್ಶನ್, ಎಲ್ಲರಿಗೂ ಕೈಮುಗಿದು ಬಂದ ದಾರಿಯಲ್ಲೇ ಸಾಗಿದರು.

  ಶಿವಣ್ಣ ಜೊತೆ ಪೋಸ್ ಕೊಟ್ಟ ದರ್ಶನ್

  ಇದೇ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣನನ್ನ ಭೇಟಿಮಾಡಿದ ದರ್ಶನ್, ಅವರೊಂದಿಗೆ ಪೋಸ್ ಕೊಟ್ಟು ಫೋಟೋ ಕೂಡ ಹಿಡಿಸಿಕೊಂಡಿದ್ದರು. ಇದಕ್ಕೆ ''ಇಡೀ ಸ್ಯಾಂಡಲ್ ವುಡ್ ಒಂದಾಗಿದೆ'' ಅಂತ ಸುಮಲತಾ ಅಂಬರೀಶ್ ಫೋಟೋ ಹಾಕಿ ಟ್ವೀಟ್ ಹಾಕಿದ್ದರು. ಆದ್ರೆ, ಆ ಫೋಟೋದಲ್ಲಿ ಸುದೀಪ್ ಇಲ್ಲದಿರುವುದು, ಸುದೀಪ್ ಜೊತೆ ದರ್ಶನ್ ಕಾಣಿಸಿಕೊಳ್ಳದಿದ್ದದ್ದು ಮತ್ತೊಂದು ಸುತ್ತಿನ ಗಾಸಿಪ್ ಗೆ ಕಾರಣವಾಯ್ತು.

  ಸುದೀಪ್-ದರ್ಶನ್ ಮಧ್ಯೆ ಎಲ್ಲವೂ ಸರಿಯಲ್ಲ?

  ಸುದೀಪ್-ದರ್ಶನ್ ಮಧ್ಯೆ ಎಲ್ಲವೂ ಸರಿಯಲ್ಲ?

  ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಗಾಂಧಿನಗರದಲ್ಲಿ ಹಬ್ಬಿದ ಸುದ್ದಿಯ ಪ್ರಕಾರ ಸುದೀಪ್ ಮತ್ತು ದರ್ಶನ್ ಮಧ್ಯೆ ಬಿರುಕು ಮೂಡಿದೆ. ಮುಂಚಿನ ಅನ್ಯೋನ್ಯತೆ ಈಗ ಇಬ್ಬರ ನಡುವೆ ಇಲ್ಲ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗಾಗುತ್ತಿಲ್ಲ ಅನ್ನುವ ಅಂತೆ-ಕಂತೆಗಳು ರೆಕ್ಕೆಪುಕ್ಕ ಕಟ್ಟಿಕ್ಕೊಂಡು ಗಾಂಧಿನಗರದಲ್ಲಿ ಹರಿದಾಡಿತ್ತು.

  ನಾವಿಬ್ಬರು ಚೆನ್ನಾಗಿದ್ದೀವಿ ಅಂತ ಸುದೀಪ್ ಸ್ಪಷ್ಟನೆ

  ''ನಮ್ಮಿಬ್ಬರ ನಡುವೆ ಅಂಥದ್ದೇನಾಗಿಲ್ಲ, ನಾವಿಬ್ಬರು ಚೆನ್ನಾಗೇ ಇದ್ದೀವಿ'' ಅಂತ ಸುದೀಪ್ ಸ್ಪಷ್ಟನೆ ನೀಡಿದ್ದರು. ಹೀಗಿದ್ದರೂ, ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಯಾಕೆ ಅನ್ನುವುದಕ್ಕೆ ಅವರೇ ಬಾಯ್ಬಿಟ್ಟು ಹೇಳಬೇಕು. [ಕುಚುಕು ಸ್ನೇಹಿತರ ನಡುವೆ ವಿರಸ: ಸುದೀಪ್ ಸ್ಪಷ್ಟನೆ]

  ಸುದೀಪ್ ಶಸ್ತ್ರ, ಆಟಗಾರರು ಬುಲ್ಲೆಟ್ ಗಳು..!

  ಸುದೀಪ್ ಶಸ್ತ್ರ, ಆಟಗಾರರು ಬುಲ್ಲೆಟ್ ಗಳು..!

  ಕರ್ನಾಟಕ ಬುಲ್ದೋಜರ್ಸ್ ತಂಡದ ನಾಯಕನಾಗಿರುವ ಸುದೀಪ್ ಶಸ್ತ್ರಾಸ್ತ್ರವಿದ್ದಂತೆ ಅಂತ ಅಶೋಕ್ ಖೇಣಿ ಹೇಳಿಕೆ ನೀಡಿದ್ದಾರೆ. ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, ''ನಾನು ಶಸ್ತ್ರಾಸ್ತ್ರ ನಿಜ, ಆದ್ರೆ, ನಮ್ಮ ತಂಡದ ಆಟಗಾರರು ಬುಲ್ಲೆಟ್ ಇದ್ದಂತೆ'', ಅಂತ ಹೇಳಿದ್ದಾರೆ. ಅದ್ರಲ್ಲಿ 'ದರ್ಶನ್' ಅನ್ನುವ ಬುಲ್ಲೆಟ್ ಸಿಸಿಎಲ್ 5ನೇ ಆವೃತ್ತಿಯಲ್ಲಿ ಸಿಡಿಯುತ್ತೋ, ಇಲ್ಲಾ ಠುಸ್ ಪಟಾಕಿ ಆಗುತ್ತೋ ನೋಡಬೇಕು.

  English summary
  Challenging Star Darshan is in controversy again by not sharing stage with Kichcha Sudeep in CCL season 5 Karnataka Bulldozers Jersey launch program. Is there something fishy between Darshan and Kichcha Sudeep?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X