ಕುಟುಂಬದ ಮದುವೆ ಸಂಭ್ರಮದಲ್ಲಿ ಕಿಚ್ಚ ಸುದೀಪ್ ದಂಪತಿ; ಫೋಟೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ಕೆಲಸಗಳ ಜೊತೆಗೆ ತನ್ನ ಕುಟುಂಬಕ್ಕೂ ಅಷ್ಟೆ ಸಮಯ ಮೀಸಲಿಡುತ್ತಾರೆ. ಪತ್ನಿ ಪ್ರಿಯಾ ಸುದೀಪ್ ಮತ್ತು ಮಗಳು ಸಾನ್ವಿ ಜೊತೆ ಸುಂದರ ಸಮಯ ಕಳೆಯುತ್ತಿರುವ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಕಿಚ್ಚ ತನ್ನ ಪ್ರೀತಿಯ ಕುಟುಂಬದ ಜೊತೆ ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸುದೀಪ್ ಇತ್ತೀಚಿಗೆ ತನ್ನ ಸೋದರ ಸಂಬಂಧಿಯ ಮದುವೆ ಸಂಭ್ರಮಕ್ಕೆ ಹಾಜರಾಗಿದ್ದರು. ಪತ್ನಿ ಪ್ರಿಯಾ, ಮಗಳು ಸಾನ್ವಿ, ಸುದೀಪ್ ಸಹೋದರಿ ಮತ್ತು ಸಹೋದರಿಯ ಮಗ ಸೇರಿದಂತೆ ಇಡೀ ಕುಟುಂಬ ಸಂಭ್ರಮದಲ್ಲಿ ಭಾಗಿಯಾಗಿರುವ ಸುಂದರ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಸಾಂಪ್ರದಾಯಿಕ ಉಡುಪಿನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಪತ್ನಿ ಪ್ರಿಯಾ ಸೀರೆಯಲ್ಲಿ ಮಿಂಚಿದ್ದಾರೆ. ಸ್ಯಾಂಡಲ್ ವುಡ್ ನ ಸುಂದರ ಜೋಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಹರಿದುಬರುತ್ತಿದೆ.

ಅಂದಹಾಗೆ ಸುದೀಪ್ ಇತ್ತೀಚಿಗಷ್ಟೆ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಚಂದನವನದ ಸ್ಟೈಲಿಶ್ ಸ್ಟಾರ್ ಕಿಚ್ಚ ಹೊಸ ಕೇಶವಿನ್ಯಾಸ ಮಾಡಿಸಿಕೊಂಡು ಮತ್ತಷ್ಟು ಸ್ಟೈಲಿಶ್ ಆಗಿ ಮಿಂಚುತ್ತಿದ್ದಾರೆ. ಅಂದಹಾಗೆ ಕಿಚ್ಚನ ಈ ಹೊಸ ಲುಕ್ ಯಾವ ಸಿನಿಮಾಗೆ ಎನ್ನುವ ಕುತೂಹಲ ಮೂಡಿಸಿದೆ.

Sudeep and his family attend their cousin marriage, photo goes viral on social media

ನಿರ್ದೇಶಕ ಪ್ರೇಮ್ ಹೊಸ ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಪ್ರೇಮ್ ಸಿನಿಮಾದಲ್ಲಿ ಕಿಚ್ಚ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಜೊತೆಗೆ ಧ್ರುವ ಸರ್ಜಾ ಹೆಸರು ಸಹ ಕೇಳಿಬರುತ್ತಿದೆ. ಇಬ್ಬರಲ್ಲಿ ಪ್ರೇಮ್ ಯಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವುದು ಆಗಸ್ಟ್ 24ರಂದು ಬಹಿರಂಗವಾಗಲಿದೆ.

ಇನ್ನು ಸುದೀಪ್ ನಟನೆಯ ಬಹು ನಿರೀಕ್ಷೆಯ ಎರಡು ಸಿನಿಮಾಗಳು ಬಿಡುಗಡೆ ಸಿದ್ಧವಾಗಿವೆ. ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ. ಇತ್ತೀಚಿಗಷ್ಟೆ ಕೋಟಿಗೊಬ್ಬ-3 ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ಅಪ್ ಡೇಟ್ ಹೊರಬಿದ್ದಿದ್ದು, ಸಿನಿಮಾದ ಹೊಸ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. 'ಕೋಟಿಗೊಬ್ಬ-3' ಚಿತ್ರದ ಹೊಸ ರಿಲೀಸ್ ದಿನಾಂಕ ಈಗ ವೈರಲ್ ಆಗಿದ್ದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

Sudeep and his family attend their cousin marriage, photo goes viral on social media

ಶಿವ ಕಾರ್ತಿಕ್ ಚೊಚ್ಚಲ ನಿರ್ದೇಶನದ ಕೋಟಿಗೊಬ್ಬ-3ಗೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ. ಕೋಟಿಗೊಬ್ಬ ಪ್ರಾಂಚೈಸಿಯ 3ನೇ ಸರಣಿ ಇದಾಗಿದ್ದು, ಚಿತ್ರದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೂಲಗಳ ಪ್ರಕಾರ ಸುದೀಪ್ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14ಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಇನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ ಸುದೀಪ್ ಹುಟ್ಟುಹಬ್ಬದ ದಿನ ಚಿತ್ರತಂಡ ಕೋಟಿಗೊಬ್ಬ-3 ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸುವ ಪ್ಲಾನ್ ಮಾಡಿದೆ ಸಿನಿಮಾತಂಡ ಎನ್ನುವ ಮಾಹಿತಿ ತಿಳಿದುಬಂದಿದೆ.

ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಭರ್ತಿಗೆ ಅವಕಾಶ ಸಿಕ್ಕರೆ ಕೋಟಿಗೊಬ್ಬ-3 ಅಕ್ಟೋಬರ್ 14ಕ್ಕೆ ತೆರೆಗೆ ಬರುವುದು ಬಹುತೇಕ ಖಚಿತ ಎನ್ನುವ ಸುದ್ದಿ ಕೇಳಿಬರುತ್ತಿದೆ. ಚಿತ್ರದಲ್ಲಿ ಸುದೀಪ್ ಗೆ ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ಸುದೀಪ್ ಗೆ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ಸಖತ್ ಉತ್ಸುಕರಾಗಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Sudeep and his family attend their cousin marriage, photo goes viral on social media

ಅಂದಹಾಗೆ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ. ಸೆಪ್ಟಂಬರ್ 2 ಕಿಚ್ಚ ಸುದೀಪ್ ಹುಟ್ಟಿದ ದಿನ. ಹುಟ್ಟುಹಬ್ಬದ ದಿನ ಕಿಚ್ಚನ ಕಡೆಯಿಂದ ಸಾಕಷ್ಟು ಸರ್ಪ್ರೈಸ್ ಗಳು ಅಭಿಮಾನಿಗಳಿಗೆ ಸಿಗುವ ನಿರೀಕ್ಷೆ ಇದೆ. ಕೋಟಿಗೊಬ್ಬ-3 ಸಿನಿಮಾದ ಬಿಡುಗಡೆ ದಿನಾಂಕ ಸೇರಿದಂತೆ, ವಿಕ್ರಾಂತ ರೋಣನ ಟೀಸರ್ ಅಥವಾ ಅಪ್ ಡೇಟ್ ಮತ್ತು ಸುದೀಪ್ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.

More from Filmibeat

English summary
Actor Sudeep and his family attend their cousin marriage, photo goes viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X