For Quick Alerts
  ALLOW NOTIFICATIONS  
  For Daily Alerts

  ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಅವರನ್ನು ಭೇಟಿಯಾಗಿದ್ದೇಕೆ ಸುದೀಪ್ ದಂಪತಿ?

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಸದ್ಯ ಕೇರಳದಲ್ಲಿ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಬೀಡುಬಿಟ್ಟಿರುವ ಸುದೀಪ್ ದಂಪತಿ ಮಲಯಾಳಂನ ಸ್ಟಾರ್ ನಟಿ ಮಂಜು ವಾರಿಯರ್ ಅವರನ್ನು ಭೇಟಿಯಾಗಿದ್ದಾರೆ.

  ಹೌದು, ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್, ಖ್ಯಾತ ನಟಿ ಮಂಜು ವಾರಿಯರ್ ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಸುದೀಪ್, ಪತ್ನಿ ಪ್ರಿಯಾ ಸುದೀಪ್ ಮತ್ತು ಮಂಜು ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ವಿಡಿಯೋ ವೈರಲ್: ಸುದೀಪ್ 'ಫ್ಯಾಂಟಮ್' ಸಿನಿಮಾದ ಹಾಡಿನಲ್ಲಿ ವಿಶೇಷ ಅತಿಥಿ; ಯಾರದು?ವಿಡಿಯೋ ವೈರಲ್: ಸುದೀಪ್ 'ಫ್ಯಾಂಟಮ್' ಸಿನಿಮಾದ ಹಾಡಿನಲ್ಲಿ ವಿಶೇಷ ಅತಿಥಿ; ಯಾರದು?

  ಅಂದಹಾಗೆ ಸುದೀಪ್ ಪತ್ನಿ ಪ್ರಿಯಾ ಮೂಲತಹ ಕೇರಳದವರು. ಸದ್ಯ ತನ್ನ ತವರಿನಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಅವರಿಗೆ ತುಂಬಾ ಸಂತಸ ತಂದಿದೆ. ಇದೇ ಸಮಯದಲ್ಲಿ ಸ್ಟಾರ್ ನಟಿ ಮಂಜು ವಾರಿಯರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಂಜು ವಾರಿಯರ್ ಭೇಟಿಯಾಗಿರುವ ಫೋಟೋವನ್ನು ಪ್ರಿಯಾ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಮಂಜು ವಾರಿಯರ್ ಜೊತೆ ಸಮಯ ಕಳೆದಿರುವುದು ಅದ್ಭುತ ಕ್ಷಣ ಎಂದು ಹೇಳಿದ್ದಾರೆ. ಪ್ರಿಯಾಗೆ ಪ್ರತಿಕ್ರಿಯೆ ನೀಡಿರುವ ಮಂಜು ವಾರಿಯರ್, ಪ್ರಿಯಾ ಅವರನ್ನು ಭೇಟಿ ಆಗಿರುವುದು ಸಂತಸದ ವಿಚಾರ. ಜೊತೆಗೆ ಸುದೀಪ್ ಸರ್ ಜೊತೆಯೂ ಸಮಯ ಕಳೆದಿರುವುದು ಸುಂದರವಾಗಿತ್ತು' ಎಂದಿದ್ದಾರೆ.

  ಕುಂಬಳ ಕಾಯಿ ಹೊಡೆದ ಪ್ರಶಾಂತ್ ನೀಲ್ ಅಂಡ್ ಟೀಮ್ | Filmibeat Kannada

  ಇನ್ನು ನಟ ಸುದೀಪ್ ಸಹ ಟ್ವೀಟ್ ಮಾಡಿ, 'ನಿಜಕ್ಕೂ ತುಂಬಾ ಸಂತೋಷವಾಗಿದೆ ಮೇಡಮ್. ನಿಮ್ಮ ಕೆಲಸವನ್ನು ಯಾವಾಗಲು ಇಷ್ಟಪಡುತ್ತೇನೆ. ತುಂಬಾ ಸರಳತೆಯ ವ್ಯಕ್ತಿಯನ್ನು ಭೇಟಿಯಾಗಿರುವುದು ಸಂತೋಷವಾಗಿದೆ' ಎಂದು ಬರೆದುಕೊಂಡಿದ್ದಾರೆ.

  English summary
  Kannada Actor Sudeep and his wife meets Malayalam Actress Manju warrier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X