ದುಬೈನಲ್ಲಿ ಚೆನ್ನೈ-ಮುಂಬೈ ಪಂದ್ಯ ವೀಕ್ಷಿಸಿದ ಕಿಚ್ಚ ಸುದೀಪ್ ದಂಪತಿ

ಐಪಿಎಲ್ 2021 ಮತ್ತೆ ಆರಂಭವಾಗಿದೆ. ಕೋವಿಡ್ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿ ದುಬೈನಲ್ಲಿ ಸೆಕೆಂಡ್ ಹಾಫ್ ಶುರು ಮಾಡಿದೆ. ಸೆಕೆಂಡ್ ಇನ್ನಿಂಗ್ಸ್‌ನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದಿದೆ. ಭಾನುವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ವಿರುದ್ಧ ಚೆನ್ನೈ ತಂಡ ಭರ್ಜರಿ ಗೆಲುವು ಸಾಧಿಸಿದೆ.

Recommended Video

RCB ಗೆ ಸಪೋರ್ಟ್ ಮಾಡಲು ದುಬೈಗೆ ಹೋದ ಸುದೀಪ್

ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡು ಸರ್ಪ್ರೈಸ್ ಕೊಟ್ಟಿದ್ದಾರೆ. ಹೌದು ನಿನ್ನೆ ನಡೆದ ಐಪಿಎಲ್ ಪಂದ್ಯವನ್ನು ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ಸ್ಟೇಡಿಯಂನಲ್ಲಿ ವೀಕ್ಷಿಸಿದ್ದಾರೆ.

ದುಬೈನಲ್ಲಿ ಸುದೀಪ್ ಮತ್ತು ಪ್ರಿಯಾ ಪಂದ್ಯ ವೀಕ್ಷಣೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

ಆರ್‌ಸಿಬಿ ಪಂದ್ಯ ನೋಡ್ತಾರೆ ಸುದೀಪ್?

ಆರ್‌ಸಿಬಿ ಪಂದ್ಯ ನೋಡ್ತಾರೆ ಸುದೀಪ್?

ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಸೋಮವಾರ ರಾತ್ರಿ 7 ಗಂಟೆಗೆ ದುಬೈನಲ್ಲಿ ಪಂದ್ಯ ನಡೆಯಲಿದ್ದು, ಬಹುಶಃ ಆರ್‌ಸಿಬಿ ಪಂದ್ಯವನ್ನು ಸುದೀಪ್ ವೀಕ್ಷಣೆ ಮಾಡಬಹುದು ಎನ್ನುವ ನಿರೀಕ್ಷೆ ಇದೆ.

ಬುರ್ಜ್ ಖಲೀಫಾ ನೆನಪಿಸಿಕೊಂಡ ಸುದೀಪ್

ಬುರ್ಜ್ ಖಲೀಫಾ ನೆನಪಿಸಿಕೊಂಡ ಸುದೀಪ್

ಕಳೆದ ಎರಡು ದಿನದಿಂದ ಕಿಚ್ಚ ಸುದೀಪ್ ದುಬೈನಲ್ಲಿ ನೆಲೆಸಿದ್ದಾರೆ. ದುಬೈಗೆ ಹೋದ ಬಳಿಕ ಬುರ್ಜ್ ಖಲೀಫಾ ಕಟ್ಟಡದ ಫೋಟೋ ಹಂಚಿಕೊಂಡು ಹಳೆಯ ನೆನಪು ಮೆಲುಕು ಹಾಕಿದ್ದರು. ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಪ್ರದರ್ಶನವಾಗಿತ್ತು. ಕನ್ನಡ ಚಿತ್ರರಂಗದಲ್ಲಿ 25 ವರ್ಷದ ಪೂರೈಸಿದ ಸಂದರ್ಭದಲ್ಲಿ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಸುದೀಪ್ ಸಿನಿಮಾದ ಟೀಸರ್ ಪ್ರದರ್ಶನ ಮಾಡಲಾಗಿತ್ತು. ಈಗ ದುಬೈಗೆ ಹೋದ ಹಿನ್ನೆಲೆ ಆ ನೆನಪು ಹಂಚಿಕೊಂಡಿದ್ದಾರೆ ಸುದೀಪ್. ಜೊತೆಗೆ ಐಪಿಎಲ್ ಪಂದ್ಯಗಳನ್ನು ವೀಕ್ಷಣೆ ಮಾಡಲಿದ್ದೇವೆ ಎಂದು ಟ್ವೀಟ್ ಮಾಡಿ ಮಾಹಿತಿ ಸಹ ಹಂಚಿಕೊಂಡಿದ್ದಾರೆ. ಆದರೆ ಎಷ್ಟು ಪಂದ್ಯ ವೀಕ್ಷಿಸಲಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಡಬ್ಬಿಂಗ್ ಶುರು ಮಾಡ್ತೇನೆ

ಡಬ್ಬಿಂಗ್ ಶುರು ಮಾಡ್ತೇನೆ

ದುಬೈನಿಂದ ಭಾರತಕ್ಕೆ ಹಿಂತಿರುಗಿದ ನಂತರ ವಿಕ್ರಾಂತ್ ರೋಣ ಸಿನಿಮಾದ ಡಬ್ಬಿಂಗ್ ಕೆಲಸ ಆರಂಭಿಸಲಿದ್ದೇನೆ ಎಂದು ಕಿಚ್ಚ ಮಾಹಿತಿ ನೀಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ಕನ್ನಡ ವರ್ಷನ್‌ಗೆ ಸುದೀಪ್ ಡಬ್ಬಿಂಗ್ ಮುಗಿಸಿದ್ದಾರೆ. ಆದರೆ, ಬೇರೆ ಭಾಷೆಯಲ್ಲಿ ಡಬ್ಬಿಂಗ್ ಮಾಡಬೇಕಿದೆ. ಹಾಗಾಗಿ, ದುಬೈನಿಂದ ವಾಪಸ್ ಬಂದಮೇಲೆ ಇತರೆ ಭಾಷೆಯಲ್ಲಿ ಡಬ್ಬಿಂಗ್ ಮಾಡ್ತೇನೆ ಎಂದು ಸುದೀಪ್ ಹೇಳಿದ್ದಾರೆ.

ದಸರಾ ಹಬ್ಬಕ್ಕೆ ಕೋಟಿಗೊಬ್ಬ 3

ದಸರಾ ಹಬ್ಬಕ್ಕೆ ಕೋಟಿಗೊಬ್ಬ 3

ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾದಲ್ಲಿ ನೀತಾ ಅಶೋಕ್, ನಿರೂಪ್ ಭಂಡಾರಿ, ರವಿಶಂಕರ್ ಗೌಡ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್ ಪ್ರೊಡಕ್ಷನ್ ಕೆಲಸ ಮಾತ್ರ ಬಾಕಿಯಿದೆ. ಅದಕ್ಕೂ ಮುಂಚೆ ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಸಿನಿಮಾ ತೆರೆಗೆ ಬರಲಿದೆ. ಸದ್ಯದ ಮಾಹಿತಿ ಪ್ರಕಾರ ದಸರಾ ಹಬ್ಬದ ಪ್ರಯುಕ್ತ ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗಲಿದೆ ಎನ್ನಲಾಗಿದೆ. ಆದರೆ ಚಿತ್ರತಂಡದ ಕಡೆಯಿಂದ ಈ ಸುದ್ದಿ ಅಧಿಕೃತವಾಗಿಲ್ಲ. ಆರ್ ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ನಾಯಕನಾಗಿ ನಟಿಸಿರುವ ಕಬ್ಜ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇನ್ನು ಮಾಡಿಲ್ಲ.

More from Filmibeat

English summary
Kannada actor Sudeep and his wife Priya Watched Yesterday MI vs CSK IPL Match in Dubai stadium.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X