ವೃದ್ಧಾಶ್ರಮ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸುದೀಪ್ ಪತ್ನಿ
ಇಂದು (ಸೆಪ್ಟೆಂಬರ್ 02) ಸುದೀಪ್ ಜನ್ಮದಿನ. ಈ ದಿನದಂದು ಸುದೀಪ್ ಅವರ ಬಹುವರ್ಷದ ಕನಸಿಗೆ ನನಸಾಗುವ ಸಮಯ ಒದಗಿದೆ.
Recommended Video
ಹೌದು, ಸುದೀಪ್ ಹುಟ್ಟುಹಬ್ಬದ ದಿನದಂದು, ಉತ್ತಮ ಸೇವಾಕಾರ್ಯಕ್ಕೆ ಚಾಲನೆ ದೊರಕಿದೆ. ವೃದ್ಧಾಶ್ರಮ ನಿರ್ಮಿಸಬೇಕೆಂಬ ಸುದೀಪ್ ಕನಸಿಗೆ ಅವರ ಪತ್ನಿ ಇಂದು ಚಾಲನೆ ನೀಡಿದ್ದಾರೆ.
ಸುದೀಪ್ ಅವರು ಶಾಂತಿನಿವಾಸ ಹೆಸರಿನ ವೃದ್ಧಾಶ್ರಮ ನಿರ್ಮಿಸುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ಇಂದು ಸುದೀಪ್ ಪತ್ನಿ ಪ್ರಿಯಾ ಸುದೀಪ್ ಭೂಮಿ ಪೂಜೆ ನೆರವೇರಿಸಿದ್ದಾರೆ.

ಹಲವು ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದ್ದಾರೆ ಸುದೀಪ್
ಮೊದಲಿನಿಂದಲೂ ಸುದೀಪ್, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಇದ್ದಾರೆ. ಇದರ ಪಟ್ಟಿಗೆ ವೃದ್ಧಾಶ್ರಮ ಹೊಸ ಸೇರ್ಪಡೆ ಆಗಲಿದೆ.

ಸುದೀಪ್ ಚಾರಿಟೇಬಲ್ ಟ್ರಸ್ಟ್‌ನಿಂದ ಸಾಮಾಜಿಕ ಕಾರ್ಯ
ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ ಸುದೀಪ್. ಇದಲ್ಲದೆ, ಶಾಲೆ ಮಕ್ಕಳಿಗೆ ಫೀಸು ತುಂಬುದು ಸೇರಿದಂತೆ ಇನ್ನೂ ಕೆಲವು ಕಾರ್ಯಗಳನ್ನು ಇತ್ತೀಚೆಗೆ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮಾಡಿದೆ.

ಹುಟ್ಟುಹಬ್ಬ ಆಚರಣೆ ಬೇಡವೆಂದ ಸುದೀಪ್
ಈ ಬಾರಿಯ ಹುಟ್ಟುಹಬ್ಬ ಸಾರ್ವಜನಿಕ ಆಚರಣೆ ಬೇಡವೆಂದು ಸುದೀಪ್ ಈಗಾಗಲೇ ಹೇಳಿದ್ದಾರೆ. ಅಭಿಮಾನಿಗಳ, ಪೋಷಕರ ಆರೋಗ್ಯದ ದೃಷ್ಟಿಯಿಂದ ಹುಟ್ಟುಹಬ್ಬ ಆಚರಣೆ ಬೇಡವೆಂದು ಸುದೀಪ್ ಮನವಿ ಮಾಡಿದ್ದಾರೆ.

Click it and Unblock the Notifications