ಸೆಪ್ಟಂಬರ್ 2ಕ್ಕೆ ಸರ್ಪ್ರೈಸ್, ಸುದೀಪ್ ವೃತ್ತಿ ಜೀವನದಲ್ಲಿ ಇದು ಮೊದಲು.!
ಸೆಪ್ಟಂಬರ್ 2, ಕಿಚ್ಚ ಸುದೀಪ್ ಅಭಿಮಾನಿಗಳಿಗೆ ವಿಶೇಷವಾದ ದಿನ. ಯಾಕಂದ್ರೆ ಆ ದಿನ ಸುದೀಪ್ ಅವರ ಹುಟ್ಟುಹಬ್ಬ. ಆದ್ರೆ, ಈ ವರ್ಷದಿಂದ ಸುದೀಪ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲವೆಂದು ಘೋಷಿಸಿಕೊಂಡಿದ್ದಾರೆ. ಹೀಗಿದ್ದರೂ, ಈ ಭಾರಿಯ ಹುಟ್ಟುಹಬ್ಬ ಮತ್ತಷ್ಟು ಅದ್ಧೂರಿ ಆಗುವುದಂತೂ ಖಂಡಿತ.
ಅದಕ್ಕೆ ಕಾರಣ 'ಹೆಬ್ಬುಲಿ' ನಿರ್ದೇಶಕ ಕೃಷ್ಣ. ಹೌದು, 'ಹೆಬ್ಬುಲಿ' ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಸೆಪ್ಟಂಬರ್ 2 ಕ್ಕೆ ಫಸ್ಟ್ ಲುಕ್ ಬಿಡುಗಡೆ ಮಾಡುವ ತಯಾರಿ ನಡೆಸಿದ್ದಾರಂತೆ.
ಸುದೀಪ್ ಈ ಚಿತ್ರದಲ್ಲಿ ಇದುವರೆಗೂ ಕಾಣಿಸಿಕೊಳ್ಳದ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಇದು ಕಿಚ್ಚ ವೃತ್ತಿ ಜೀವನದಲ್ಲಿ ವಿಶೇಷವಾಗಿರಲಿದೆ. ಹಾಗಿದ್ರೆ, ಆ ಪಾತ್ರ ಯಾವುದು? ಈ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಏನಿದೆ? ಮುಂದೆ ಓದಿ.....

ಸುದೀಪ್ ಮುಂದಿನ ಸಿನಿಮಾ ಘೋಷಣೆ
'ದಿ ವಿಲನ್' ಚಿತ್ರದ ನಂತರ ಸುದೀಪ್ ಮುಂದಿನ ಸಿನಿಮಾ ಯಾವುದು ಎಂಬ ನಿರೀಕ್ಷೆಗೆ ಉತ್ತರ ಸಿಕ್ಕಿದ್ದು, ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಲಿದ್ದಾರೆ. ಈ ವಿಷ್ಯವನ್ನ ಗೌರಿ-ಗಣೇಶ ಹಬ್ಬದ ಪ್ರಯುಕ್ತ ತಮ್ಮ ಟ್ವಿಟ್ಟರ್ ನಲ್ಲಿ ಕೃಷ್ಣ ಖಚಿತ ಪಡಿಸಿದ್ದಾರೆ.

ಸೆಪ್ಟಂಬರ್ 2 ಕ್ಕೆ ಫಸ್ಟ್ ಲುಕ್
ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಮಾಡಿರುವ ಕೃಷ್ಣ ಅಂಡ್ ಟೀಮ್, ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟಂಬರ್-2 ರಂದು ತಮ್ಮ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಫೋಟೋಶೂಟ್ ಪ್ಲಾನ್ ನಡೆದಿದ್ದು, ಕಿಚ್ಚನ ಬರ್ತ್ ಡೇಗೆ ಅವರ ಫ್ಯಾನ್ಸ್ ಗೆ ಗಿಫ್ಟ್ ಆಗಿ ನೀಡಲಿದ್ದಾರೆ.

ಕ್ರೀಡೆಯ ಸುತ್ತಾ ಕಥೆ
ಅಂದ್ಹಾಗೆ, ಸುದೀಪ್ ಮತ್ತು ಕೃಷ್ಣ ಜೋಡಿಯ ಈ ಚಿತ್ರ ಕ್ರೀಡೆಯ ಸುತ್ತ ಹಣೆಯಲಾಗಿದೆ. ಇದೊಂದು ಸ್ಪೋರ್ಟ್ಸ್ ಸಿನಿಮಾವಾಗಿದ್ದು, ಪಕ್ಕಾ ಕಮರ್ಷಿಯಲ್ ಆಗಿ ತಯಾರು ಮಾಡಲಿದ್ದಾರಂತೆ.

ಸುದೀಪ್ ಪಾತ್ರವೇನು?
ಈ ಕ್ರೀಡಾ ಆಧಾರಿತ ಚಿತ್ರದಲ್ಲಿ ಸುದೀಪ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಬಾಕ್ಸಿಂಗ್ ತರಬೇತಿ ಕೂಡ ಸುದೀಪ್ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸುದೀಪ್ ವೃತ್ತಿಜೀವನದಲ್ಲಿ ಇದು ಮೊದಲು
ಇಂತಹ ಪಾತ್ರ ಸುದೀಪ್ ಇದುವರೆಗೂ ಮಾಡಿಲ್ಲ, ಹೀಗಾಗಿ, ಈ ಚಿತ್ರದ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಇದೊಂದು ರೀತಿಯಲ್ಲಿ ಸುದೀಪ್ ಅವರ ಸಿನಿ ಜರ್ನಿಯಲ್ಲಿ ವಿಶೇಷವಾದ ಸಿನಿಮಾ ಆಗಲಿದೆ.

ಕೃಷ್ಣ ಅವರ ಪತ್ನಿ ನಿರ್ಮಾಣ
ನಿರ್ದೇಶಕ ಕೃಷ್ಣ ಅವರು ಈ ಚಿತ್ರದ ಮೂಲಕ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಚೊಚ್ಚಲ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಕೃಷ್ಣ ಅವರ ಪತ್ನಿ ಸ್ವಪ್ನ ಅವರು ಈ ಚಿತ್ರದ ನಿರ್ಮಾಪಕರು. ಚಿತ್ರದ ಪ್ರೀ-ಪ್ರೊಡಕ್ಷನ್ ಮುಗಿಸುತ್ತಿರುವ ಚಿತ್ರತಂಡ ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರೆ.


Click it and Unblock the Notifications











