»   » 'ದಿ ವಿಲನ್' ಪೋಸ್ಟರ್ ಆರೋಪಕ್ಕೆ ಬ್ರೇಕ್ ಹಾಕಿದ ಸುದೀಪ್ ಮತ್ತು ಪ್ರೇಮ್

'ದಿ ವಿಲನ್' ಪೋಸ್ಟರ್ ಆರೋಪಕ್ಕೆ ಬ್ರೇಕ್ ಹಾಕಿದ ಸುದೀಪ್ ಮತ್ತು ಪ್ರೇಮ್

Posted By:
Subscribe to Filmibeat Kannada
Sudeep

ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನೋಡಿ ಕನ್ನಡ ಚಿತ್ರ ಪ್ರೇಮಿಗಳು ಫುಲ್ ಖುಷ್ ಆಗಿದ್ದರು.

ಅಷ್ಟರಲ್ಲೇ ಈ ಪೋಸ್ಟರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂತು. 'ದಿ ವಿಲನ್' ಚಿತ್ರದ ಪೋಸ್ಟರ್ ಹಾಲಿವುಡ್ ಚಿತ್ರದಿಂದ ಕಾಪಿ ಮಾಡಲಾಗಿದೆ. ಬಹುಶಃ ಸಿನಿಮಾ ಕೂಡ ರೀಮೇಕ್ ಆಗಿರಬಹುದು ಎಂಬ ಚರ್ಚೆ ಶುರುವಾಯಿತು.

ಇದೀಗ, ಈ ಪೋಸ್ಟರ್ ವಿವಾದಕ್ಕೆ ನಿರ್ದೇಶಕ ಪ್ರೇಮ್ ಮತ್ತು ನಟ ಸುದೀಪ್ ಇಬ್ಬರು ಕೂಡ ಪ್ರತಿಕ್ರಿಯಿಸಿದ್ದು, ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ರೆ, ಪೋಸ್ಟರ್ ಬಗ್ಗೆ 'ದಿ ವಿಲನ್' ತಂಡ ಏನಂದ್ರು? ಮುಂದೆ ಓದಿ....

'ದಿ ವಿಲನ್' ರೀಮೇಕ್ ಅಲ್ಲ

'ದಿ ವಿಲನ್' ಚಿತ್ರದ ಹೊಸ ಪೋಸ್ಟರ್ ತಂದಿಟ್ಟಿದ್ದ ಗೊಂದಲದಿಂದ ಇದು ರೀಮೇಕ್ ಸಿನಿಮಾ ಇರಬಹುದು ಎಂಬ ಪ್ರಶ್ನೆ ಎದುರಾಗಿತ್ತು. ಆದ್ರೆ, ರೀಮೇಕ್ ಚಿತ್ರವಲ್ಲವೆಂದು ನಿರ್ದೇಶಕ ಮತ್ತು ನಟ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಇದರಿಂದ ಅಭಿಮಾನಿಗಳು ನಿರಾಳವಾಗಿದ್ದಾರೆ.

ನನ್ನ ಚಿತ್ರದ ಕಲ್ಪನೆ ತೋರಿಸಿದ್ದೇನೆ ಅಷ್ಟೇ

ನನ್ನ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ ವ್ಯಕ್ತಿಯೊಳಗಿನ ವ್ಯಕ್ತಿತ್ವವನ್ನು ತೋರಿಸಲು ನಾನು ಬಯಸಿದ್ದೇ, ಅದೇ ರೀತಿ ತೋರಿಸಿದ್ದೇನೆ. ಆದ್ರೆ, ಇದು ಯಾವ ಚಿತ್ರದ ಕಾಪಿಯೂ ಅಲ್ಲ ಎಂದಿದ್ದಾರೆ.

'ದಿ ವಿಲನ್' ಹೊಸ ಪೋಸ್ಟರ್ ವಿರುದ್ಧ ಹೀಗೊಂದು ಗಂಭೀರ ಆರೋಪ?

ಸುದೀಪ್ ಹೇಳಿದ್ದೇನು?

ಪತ್ರಕರ್ತರೊಬ್ಬರು ಟ್ವಿಟ್ಟರ್ ಮೂಲಕ 'ದಿ ವಿಲನ್' ಪೋಸ್ಟರ್ ನ ಟ್ಯಾಗ್ ಮಾಡಿ, ಇದು 'ಫೇಸ್ ಆಫ್' ಚಿತ್ರದ ಕಾಪಿನಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ''ಇದು ಅದಲ್ಲ'' ಎಂದು ಅನುಮಾನಕ್ಕೆ ತೆರೆ ಎಳೆದಿದ್ದಾರೆ.

ಮಂಗಳೂರಿನಲ್ಲಿ 'ದಿ ವಿಲನ್'

ಸದ್ಯ, 'ದಿ ವಿಲನ್' ಚಿತ್ರತಂಡ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ. ಸುದೀಪ್ ಮತ್ತು ನಟಿ ಆಮಿ ಜಾಕ್ಸನ್ ಅವರ ನಡುವಿನ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಬಹುತೇಕ ಶೂಟಿಂಗ್ ಮುಗಿಸಿರುವ 'ವಿಲನ್' ಮುಂದಿನ ವರ್ಷದ ಆರಂಭದಲ್ಲೇ ಅಬ್ಬರಿಸುವ ಸಾಧ್ಯತೆ ಇದೆ.

'ಫೇಸ್ ಆಫ್' ಚಿತ್ರ ಯಾವುದು?

ಚಿತ್ರದ ಹೆಸರು 'ಫೇಸ್ ಆಫ್'. 1997ರಲ್ಲಿ ಬಿಡುಗಡೆಯಾಗಿರುವ ಸೈನ್ಸ್ ಫಿಕ್ಷನ್ ಸಿನಿಮಾ. ಜಾನ್ ವೋ ನಿರ್ದೇಶನದ ಚಿತ್ರ. ಜಾನ್ ಟ್ರಾವಲ್ಟಾ, ನಿಕೋಲಸ್ ಕೇಜ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಟೈಟಲ್ ಹೇಳುವಾಗೆ ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ. ಪ್ರತಿಯೊಬ್ಬ ಮನುಷ್ಯನೊಳೆಗೆ ಇನ್ನೊಂದು ವ್ಯಕ್ತಿತ್ವ ಇರುತ್ತೆ ಎಂಬುದರ ಕಥಾಹಂದರ ಹೊಂದಿದೆ.

English summary
Director Prem has released the latest motion poster of his upcoming The Villain on Sudeep’s birthday. The critics said that the poster is a rip off of poster for Hollywood blockbuster, Face Off. now Sudeep and Prem Gaves Clarity on poster controversy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada