ಹ್ಯಾಪಿ ಸುದೀಪ್, ಹ್ಯಾಪಿ ಪ್ರಿಯಾ ಕಾರಣ ಮಗಳು ಸಾನ್ವಿ

By Naveen

Recommended Video

ಸುದೀಪ್ ದಂಪತಿಯ ಖುಷಿಗೆ ಕಾರಣ ಯಾರು ಗೊತ್ತಾ | Filmibeat Kannada

ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿ ಈಗ ಸಿಕ್ಕಾಪಟ್ಟೆ ಸಂತೋಷದಲ್ಲಿ ಇದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ಪ್ರೀತಿಯ ಮಗಳು ಸಾನ್ವಿ.

ಸುದೀಪ್ ಪುತ್ರಿ ಸಾನ್ವಿ ಈಗ 14 ವರ್ಷಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಅವರ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಆಚರಣೆ ಮಾಡಲಾಗಿದೆ. ಸುದೀಪ್ ಮತ್ತು ಪ್ರಿಯಾ ಇಬ್ಬರು ಮಗಳಿಂದ ಕೇಕ್ ಕಟ್ ಮಾಡಿಸಿ ಖುಷಿ ಪಟ್ಟಿದ್ದಾರೆ. ಮಗಳಿಗಾಗಿ ಸುದೀಪ್ ಸ್ಪೆಷಲ್ ಆದ ಕೇಕ್ ಮಾಡಿಸಿದ್ದು, ಗಿಟಾರ್ ಚಿತ್ರದ ಮ್ಯೂಸಿಕ್ ಥೀಮ್ ಕೇಕ್ ಇದಾಗಿದೆ. ಸಿನಿಮಾಗಳ ಕೆಲಸ ಎಷ್ಟೇ ಇದ್ದರೂ ಕುಟುಂಬಕ್ಕೆ ಸಮಯ ನೀಡುವ ಸುದೀಪ್ ಮತ್ತೆ ತನ್ನೊಬ್ಬ ಬೆಸ್ಟ್ ತಂದೆ ಅಂತ ತೋರಿಸಿದ್ದಾರೆ.

ಇನ್ನು ತಮ್ಮ ಕುಟುಂಬದ ಈ ಸುಂದರ ಕ್ಷಣವನ್ನು ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಅನು ಪ್ರಭಾಕರ್ ಕೂಡ ಸುದೀಪ್ ಮಗಳಿಗೆ ವಿಶ್ ಮಾಡಿದ್ದಾರೆ. ಸಾನ್ವಿ ಎಷ್ಟು ಎತ್ತರ ಬೆಳೆದುಬಿಟ್ಟಿದ್ದಾಳೆ ಎಂದಿದ್ದಾರೆ. ಜೊತೆಗೆ ಕಿಚ್ಚನ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.

Sudeep and Priya Sudeep celebrated their daughter birthday

ಉಳಿದಂತೆ, ಸುದೀಪ್ ಈಗ ತಮ್ಮ ಅನೇಕ ಸಿನಿಮಾಗಳಲ್ಲಿ ಬಿಜಿ ಇದ್ದಾರೆ. 'ದಿ ವಿಲನ್', 'ಕೋಟಿಗೊಬ್ಬ 3', 'ಅಂಬಿ ನಿಂಗೆ ವಯಸ್ಸಾಯ್ತೋ' ಸುದೀಪ್ ಅವರ ಮುಂದಿನ ಸಿನಿಮಾಗಳಾಗಿವೆ.

More from Filmibeat

English summary
Kannada actor Kiccha Sudeep and Priya Sudeep celebrated their daughter Saanvi birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X