ಕನ್ನಡದಲ್ಲಿ ಮಾತನಾಡಿದ ಸಲ್ಮಾನ್ ಖಾನ್ ನೋಡಿ ಸುದೀಪ್ ಹೇಳಿದ್ದೇನು?
Recommended Video
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದ್ದಾರೆ. ಅಂದ್ರೆ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷೆಯ 'ದಬಾಂಗ್-3' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳುತ್ತಿರು ಸಿನಿಮಾ.
ವಿಶೇಷ ಅಂದ್ರೆ ದಬಾಂಗ್-3 ಚಿತ್ರದ ಮೋಷನ್ ಪೋಸ್ಟರ್ ಕನ್ನಡದಲ್ಲೂ ತೆರೆಗೆ ಬಂದಿದೆ. ಹಿಂದಿ, ತಮಿಳು ಮತ್ತು ತೆಲುಗು ಜೊತೆಗೆ ಕನ್ನಡದಲ್ಲೂ ದಬಾಂಗ್-3 ರಿಲೀಸ್ ಆಗುತ್ತಿರುವುದು ಕಿಚ್ಚನ ಅಭಿಮಾನಿಗಳಿಗೆ ಸಂತಸದ ವಿಚಾರ.
ಚುಲ್ ಬುಲ್ ಪಾಂಡೆ "ಟೈಂ ನಂದೂ ತಾರಿಖು ನಂದು" ಎಂದು ಕನ್ನಡದಲ್ಲೂ ಮಾತನಾಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ. "ನಾವು ಕನ್ನಡಿಗರು ನಿಮ್ಮನ್ನು ಹೃದಯಪೂರ್ವಕ ಸ್ವಾಗತ ಮಾಡುತ್ತಿದ್ದೇವೆ ಸಲ್ಮಾನ್ ಸರ್. ಇಲ್ಲಿಯ ಜನ ಯಾವಾಗಲು ನಿಮ್ಮನ್ನು ಇಷ್ಟಪಡುತ್ತಾರೆ. ಈಗ ಕನ್ನಡ ಮಾತನಾಡುತ್ತಿರುವುದರಿಂದ ನಿಮ್ಮ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ" ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಸುದೀಪ್ ಸಿಕಂದರ್ ಭಾರದ್ವಾಜ್ ಪಾತ್ರದಲ್ಲಿ ಸುದೀಪ್ ಮಿಂಚಿದ್ದಾರೆ. ಸಲ್ಮಾನ್ ಖಾನ್ ಮುಂದೆ ವಿಲನ್ ಆಗಿ ಕಾಣಿಸಿಕೊಂಡಿರುವ ಸುದೀಪ್ ಲುಕ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದಬಾಂಗ್-3 ಕನ್ನಡ ವರ್ಷನ್ ಗೆ ಸುದೀಪ್ ಪಾತ್ರಕ್ಕೆ ಕಿಚ್ಚನೆ ಡಬ್ ಮಾಡುತ್ತಿದ್ದಾರೆ.


Click it and Unblock the Notifications











