»   » ಕಿಚ್ಚ ಸುದೀಪ್ ಬ್ಯಾಟಿಂಗ್, ಸೆಂಚುರಿ ಸ್ಟಾರ್ ಶಿವಣ್ಣ ಬೌಲಿಂಗ್

ಕಿಚ್ಚ ಸುದೀಪ್ ಬ್ಯಾಟಿಂಗ್, ಸೆಂಚುರಿ ಸ್ಟಾರ್ ಶಿವಣ್ಣ ಬೌಲಿಂಗ್

Posted By:
Subscribe to Filmibeat Kannada
ಕಿಚ್ಚ ಸುದೀಪ್ ಬ್ಯಾಟಿಂಗ್, ಸೆಂಚುರಿ ಸ್ಟಾರ್ ಶಿವಣ್ಣ ಬೌಲಿಂಗ್ | Filmibeat Kannada

ಐಪಿಎಲ್ ಅಬ್ಬರದ ನಡುವೆ ಸ್ಯಾಂಡಲ್ ವುಡ್ ನಲ್ಲಿ ಕೆಸಿಸಿ (ಕನ್ನಡ ಚಲನಚಿತ್ರ ಕಪ್) ಟೂರ್ನಮೆಂಟ್ ಆರಂಭವಾಗುತ್ತಿದೆ. ಏಪ್ರಿಲ್ 7 ಮತ್ತು 8 ರಂದು ಸ್ಯಾಂಡಲ್ ವುಡ್ ತಾರೆಯರೆಲ್ಲ ಕ್ರಿಕೆಟ್ ಮೈದಾನಕ್ಕೀಳಿಯಲಿದ್ದಾರೆ. ಹೀಗಾಗಿ, ಕಳೆದ ಒಂದು ವಾರದಿಂದ ಸತತವಾಗಿ ಅಭ್ಯಾಸ ಮಾಡ್ತಿದ್ದಾರೆ.

ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ದಿಗಂತ್ ಸೇರಿದಂತೆ ಹಲವು ನಟರು ಕೆಸಿಸಿ ಆಡಲಿದ್ದು, ಎಲ್ಲರೂ ಪ್ರಾಕ್ಟೀಸ್ ಮಾಡ್ತಿದ್ದಾರೆ.

ಇಂದಿನ ಪ್ರಾಕ್ಟೀಸ್ ನಲ್ಲಿ ವಿಶೇಷವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಿಚ್ಚ ಸುದೀಪ್ ಗಮನ ಸೆಳೆದರು. ನೆಟ್ ಪ್ರಾಕ್ಟೀಸ್ ಮಾಡಿದ ಇಬ್ಬರು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿ ಖುಷಿ ಪಟ್ಟರು. ಶಿವಣ್ಣ ಮಾಡಿದ ಬೌಲಿಂಗ್ ಗೆ ಕಿಚ್ಚ ಸುದೀಪ್ ಬ್ಯಾಟಿಂಗ್ ಮಾಡಿದ್ದು ಎಲ್ಲರಿಗೂ ಖುಷಿ ಕೊಟ್ಟಿತ್ತು.

Sudeep and shiva rajkumar cricket practice

ಸ್ಯಾಂಡಲ್ ವುಡ್ ನಲ್ಲಿ 'T-10' ಕ್ರಿಕೆಟ್ ಟೂರ್ನಿ

ಮತ್ತೊಂದೆಡೆ ಅದೇ ದಿನ ಐಪಿಎಲ್ 11ನೇ ಆವೃತ್ತಿ ಕೂಡ ಆರಂಭವಾಗುತ್ತಿದ್ದು, 'ಬೆಂಗಳೂರು ರಾಯಲ್ ಚಾಲೆಂಜರ್ಸ್' ತಂಡಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ರಾಯಭಾರಿ ಆಗಿದ್ದಾರೆ.

ಕಿಚ್ಚ ಸುದೀಪ್ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದು ಯಾಕೆ?

ಒಟ್ನಲ್ಲಿ, ಸತತ ಸಿನಿಮಾಗಳಿಂದ ಅಭಿಮಾನಿಗಳನ್ನ ರಂಜಿಸುತ್ತಿದ್ದ ಶಿವಣ್ಣ ಈಗ ಬ್ಯಾಟ್ ಹಿಡಿದು ಕ್ರೀಡಾಂಗಣದಲ್ಲಿ ಎಂಟರ್ ಟೈನ್ ಮಾಡಲಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಕೆಸಿಸಿ ಉದ್ಘಾಟನೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುವ ಸಾಧ್ಯತೆ ಇದೆ.

English summary
Kannada actor sudeep and hatrick hero shiva rajkumar playing kannada chalachitra cup cricket tournament in april 7th and 8th at bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X