ಸುದೀಪ್ ವಿವಾಹ ವಾರ್ಷಿಕೋತ್ಸವ ದಿನವೆ ರಿಲೀಸ್ ಆಗಿತ್ತು 'ದಿ ವಿಲನ್'

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಸುದೀಪ್, ಪ್ರಿಯಾ ಕೈ ಹಿಡಿದು 18 ವರ್ಷ ತುಂಬಿದೆ. ವಾರ್ಷಿಕೋತ್ಸವದ ಸಂತಸದಲ್ಲಿರುವ ಕಿಚ್ಚ ದಂಪತಿ ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬದವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ವಿಶೇಷ ಅಂದ್ರೆ ಸುದೀಪ್ ಮದುವೆ ವಾರ್ಷಿಕೋತ್ಸವದ ದಿನವೆ ಬಾರಿ ಸದ್ದು ಸುದ್ದಿ ಮಾಡಿದ್ದ 'ದಿ ವಿಲನ್' ಸಿನಿಮಾ ರಿಲೀಸ್ ಆಗಿತ್ತು. ಅಂದ್ರೆ ದಿ ವಿಲನ್ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಇದೆ ದಿನ ಆಕ್ಟೋಬರ್ 18ರಂದು ವಿಲನ್ ಅದ್ದೂರಿಯಾಗಿ ತೆರೆಗೆ ಬಂದಿತ್ತು.

ವರ್ಷದ ಸಂಭ್ರಮದಲ್ಲಿ 'ದಿ ವಿಲನ್'

ವರ್ಷದ ಸಂಭ್ರಮದಲ್ಲಿ 'ದಿ ವಿಲನ್'

ನಿರ್ದೇಶಕ ಜೋಗಿ ಪ್ರೇಮ್ ಸಾರಥ್ಯದಲ್ಲಿ ಮೂಡಿ ಬಂದ 'ದಿ ವಿಲನ್' ಸಿನಿಮಾ ರಿಲೀಸ್ ಆಗಿ ಇವತ್ತಿಗೆ ಸರಿಯಾಗಿ ಒಂದು ವರ್ಷವಾಗಿದೆ. ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ಒಂದೆ ಸಿನಿಮಾದಲ್ಲಿ ಮಿಂಚಿದ್ದರು. ಇಬ್ಬರು ಸ್ಟಾರ್ಸ್ ಒಂದೆ ಸಿನಿಮಾದಲ್ಲಿ ಕಾಣಿಸಿಕೊಂಡ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದ್ದು. ಆದ್ರೆ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ದಿ ವಿಲನ್ ವಿಫಲವಾಗಿತ್ತು. ಕಲೆಕ್ಷನ್ ವಿಚಾರದಲ್ಲಿ ಭಾರಿ ಸದ್ದು ಮಾಡಿತ್ತು ದಿ ವಿಲನ್.

ಇಂದು ಸುದೀಪ್ ವಿವಾಹ ವಾರ್ಷಿಕೋತ್ಸವ

ಇಂದು ಸುದೀಪ್ ವಿವಾಹ ವಾರ್ಷಿಕೋತ್ಸವ

ಇಂದು ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ವಿವಾಹ ವಾರ್ಷಿಕೋತ್ಸವ. ಪ್ರಿಯಾ ಜೊತೆ ಸಪ್ತಪದಿ ತುಳಿದು 18 ವರ್ಷಗಳಾಗಿದೆ. ವಿವಾಹ ವಾರ್ಷಿಕೋತ್ಸವದ ಸಂಭ್ರಮದ ದಿನವೆ ದಿ ವಿಲನ್ ಸಿನಿಮಾ ಕೂಡ ರಿಲೀಸ್ ಆಗಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು.

ಬಿಗ್ ಬಾಸ್ ನಲ್ಲಿ ಪ್ರಿಯಾ ಸುದೀಪ್

ಬಿಗ್ ಬಾಸ್ ನಲ್ಲಿ ಪ್ರಿಯಾ ಸುದೀಪ್

ಈ ಬಾರಿಯ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ತಮ್ಮ ಪತ್ನಿ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿರುವ ಕಾರಣ ಈ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆಯಲಿದೆ. ಸುದೀಪ್ ಬದುಕಿನ ಈ ಸಂಭ್ರಮದ ಕ್ಷಣವನ್ನು 'ಬಿಗ್ ಬಾಸ್'ನಲ್ಲಿ ಆಚರಿಸಲು ಕಲರ್ಸ್ ಕನ್ನಡ ವಾಹಿನಿ ನಿರ್ಧಾರ ಮಾಡಿದೆ.

ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಇತ್ತ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ದಂಪತಿಗಳಿಗೆ ಶುಭಾಶಯಗಳು ಹರಿದು ಬರುತ್ತಿವೆ. ಸುದೀಪ್ ಅಭಿಮಾನಿಗಳ ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಧ ವಿಧವಾದ ಪೋಸ್ಟರ್ ಗಳ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಸುದೀಪ್ ಹಾಗೂ ಪ್ರಿಯಾ ಸುದೀಪ್ ಅಕ್ಟೋಬರ್ 18, 2000 ರಲ್ಲಿ ವಿವಾಹ ಆಗಿದ್ದರು. ಅವರಿಗೆ ಸಾನ್ವಿ ಎಂಬ ಮಗಳಿದ್ದಾರೆ.

More from Filmibeat

English summary
The Villain Cinema Release was the day of Sudeep's wedding anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X