ಮುಲಾಜೇ ಇಲ್ಲ.. ಉತ್ತರ ಭಾರತದವರಿಗೆ ಯಶ್- ಸುದೀಪ್ ಕನ್ನಡ ಪಾಠ!

ನಮ್ಮ ಕನ್ನಡ ಭಾಷೆ ನಮ್ಮ ಹೆಮ್ಮೆ. ಯಾವುದೇ ಕಾರಣಕ್ಕೂ ನಮ್ಮ ಭಾಷೆಯನ್ನು ಬಿಟ್ಟುಕೊಡುವುದಕ್ಕೆ ಸಾಧ್ಯವಿಲ್ಲ. ಕನ್ನಡ ನಟರು ಸಹ ಭಾಷಾಭಿಮಾನದ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಕಿಚ್ಚ ಸುದೀಪ್ ಹಿಂದಿ ನಿರೂಪಕಿಗೆ ಕನ್ನಡ ಉಚ್ಛಾರಣೆಯ ಪಾಠ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಯಶ್ ಸಹ ಇದೇ ರೀತಿ ವೇದಿಕೆಯಲ್ಲಿ ಕನ್ನಡ ಪಾಠ ಮಾಡಿದ್ದರು. ಕನ್ನಡಾಭಿಮಾನವನ್ನು ಸಾರಿದ್ದರು.

ಉತ್ತರ ಭಾರತದ ಜನರಿಗೆ ಅದೇನೋ ಗೊತ್ತಿಲ್ಲ. ಕನ್ನಡ ಅನ್ನುವುದಕ್ಕೆ ಬರುವುದಿಲ್ಲ. ಕನ್ನಡವನ್ನು 'ಕನ್ನಡ್​' ಅನ್ನುವ ವಿಚಿತ್ರ ಕಾಯಿಲೆ. ಇತ್ತೀಚೆಗೆ ವೇದಿಕೆಗಳಲ್ಲೂ ಇದನ್ನೇ ಮುಂದುವರೆಸಿದ್ದಾರೆ. ಆದರೆ ಇದನ್ನು ಕೇಳಿದ ತಕ್ಷಣವೇ ಹಿಂದು ಮುಂದು ನೋಡದೇ ಅಲ್ಲೇ ಸರಿ ಮಾಡುವ ಕೆಲಸ ಈಗ ನಡೀತಿದೆ. ಕೆಲ ದಿನಗಳ ಹಿಂದೆ 'ಕೆಜಿಎಫ್-2' ಸಿನಿಮಾ ಟ್ರೈಲರ್ ಲಾಂಚ್ ವೇದಿಕೆಯಲ್ಲಿ ಯಶ್ ಇದೇ ವಿಚಾರವಾಗಿ ಮಾತನಾಡಿದ್ದರು. ಹಿಂದಿ ಪತ್ರಕರ್ತೆರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ನಮ್ಮ ಇಂಡಸ್ಟ್ರಿಯನ್ನು ಕೆಲವರು 'ಕನ್ನಡ್‌' ಇಂಡಸ್ಟ್ರಿ ಅನ್ನುತ್ತಾರೆ. ಅದು 'ಕನ್ನಡ್' ಅಲ್ಲ ಕನ್ನಡ ಎಂದು ಹೇಳಿದ್ದಾರೆ.

ಯಶ್ ನಂತರ ಸುದೀಪ್ ಸಹ ಎರಡೆರಡು ಬಾರಿ ಇದೇ ರೀತಿ ಉತ್ತರ ಭಾರತದ ಮಂದಿಗೆ ಕನ್ನಡ ಪಾಠ ಮಾಡಿದ್ದಾರೆ. ಕೆಲ ದಿನಗಳ ಹಿಂದೆ 'ವಿಕ್ರಾಂತ್ ರೋಣ' ಚಿತ್ರ ಸುದ್ದಿಗೋಷ್ಠಿಯ ವೇದಿಕೆಯಲ್ಲೂ ಇಂತಹ ಪ್ರಸಂಗ ನಡೆದಿತ್ತು. ಅಂದು ತಮ್ಮ ಜೊತೆಗೆ ಕೂತಿದ್ದವರು ಮಾತನಾಡುತ್ತಾ 'ಕನ್ನಡ್‌' ಅಂದಿದ್ದನ್ನು ಕೇಳಿ ತಕ್ಷಣವೇ ಅದನ್ನು ಸರಿ ಮಾಡಿದ್ದರು. ಅವರು ಕ್ಷಮೆ ಕೇಳಿ ಕನ್ನಡ ಎಂದು ಮಾತು ಮುಂದುವರೆಸಿದ್ದರು. ಹಿಂದಿ ನಿರೂಪಕಿ ಕೂಡ ಕ್ಷಮೆ ಕೇಳಿದ್ರು, ಬಿಡದೇ ಇನ್ಮುಂದೆ ಯಾರು 'ಕನ್ನಡ್' ಅನ್ನಬಾರದು ಆ ರೀತಿ ಸುದೀಪ್ ತಿಳಿ ಹೇಳಿದ್ದಾರೆ.

 ಸುದ್ದಿಗೋಷ್ಠಿಯಲ್ಲೂ ಕಿಚ್ಚನ ಕನ್ನಡಾಭಿಮಾನ

ಸುದ್ದಿಗೋಷ್ಠಿಯಲ್ಲೂ ಕಿಚ್ಚನ ಕನ್ನಡಾಭಿಮಾನ

ಇನ್ನು 'ವಿಕ್ರಾಂತ್ ರೋಣ' ಚಿತ್ರಕ್ಕೆ ಎನ್‌ಎಫ್‌ಟಿ ಟೆಕ್ನಾಲಜಿ ಬಳಸಿಕೊಳ್ಳಲಾಗಿದೆ. ಇದರ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಅಂದು ಎನ್‌ಎಫ್‌ಟಿ ಬ್ಲಾಕ್ ಟಿಕೆಟ್ಸ್‌ನ ಸಂಸ್ಥಾಪಕ ಅಭಿನವ್ ಗಾರ್ಗ್‌ ಕೂಡ ಮಾತನಾಡುತ್ತಾ ಕನ್ನಡವನ್ನು 'ಕನ್ನಡ್‌' ಎಂದಿದ್ದರು. ಪಕ್ಕದಲ್ಲೇ ಕೂತಿದ್ದ ಕಿಚ್ಚ ಕನ್ನಡ ಎಂದು ತಿಳಿ ಹೇಳಿದ್ದರು. ಗಾರ್ಗ್‌ ಕ್ಷಮೆ ಕೇಳಿ ಕನ್ನಡ ಎಂದು ಮಾತು ಮುಂದುವರೆಸಿದ್ದರು.

 ನಿರೂಪಕಿಗೆ ಕಿಚ್ಚನ ತಿರುಗೇಟು

ನಿರೂಪಕಿಗೆ ಕಿಚ್ಚನ ತಿರುಗೇಟು

ಇತ್ತಿಚೆಗೆ ಹಿಂದಿ ಸಂದರ್ಶನವೊಂದರಲ್ಲಿ ನಿರೂಪಕಿ ತೆಲುಗು, ತಮಿಳು, ಮಲಯಾಳಂ, 'ಕನ್ನಡ್‌' ಎನ್ನುತ್ತಿದ್ದಂತೆ ಸುದೀಪ್, "ಕನ್ನಡ್ ಅಲ್ಲ ಮೇಡಂ ಕನ್ನಡ. ಹೇಗೆ ಹಿಂದಿ 'ಹಿಂದ್' ಆಗಲ್ವೋ ಅದೇ ತರ ಕನ್ನಡ 'ಕನ್ನಡ್" ಆಗಲ್ಲ. ನೀವು ನಮ್ಮ ಭಾಷೆ ಕಲಿರಿ. ಭಾಷೆ ಬಿಡಿ ಅದರ ಹೆಸರನ್ನಾದರೂ ಸರಿಯಾಗಿ ಹೇಳಿ. ತಮಿಳು ಸರಿಯಾಗಿ ಹೇಳ್ತಿರಿ, ತೆಲುಗು ಸರಿಯಾಗಿ ಹೇಳ್ತಿರಿ. ಆದರೆ ಕನ್ನಡವನ್ನು 'ಕನ್ನಡ್' ಅಂತೀರಾ. 'ಕನ್ನಡ್' ಅಲ್ಲ ಕನ್ನಡ" ಎಂದು ನಿರೂಪಕಿಗೆ ತಿರುಗೇಟು ನೀಡಿದ್ದಾರೆ.

Recommended Video

YASH | ಹೊಸ ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಥ್ | Independence Day | Filmibeat Kannada

ವಿಡಿಯೋ ಫುಲ್ ವೈರಲ್

ಕನ್ನಡದ ಸ್ಟಾರ್ ನಟರಿಬ್ಬರು ಉತ್ತರ ಭಾರತದ ಮಂದಿಗೆ ಮುಲಾಜೇ ಇಲ್ಲದೇ ಕನ್ನಡ ಪಾಠ ಮಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಿಂದಿ ರಾಷ್ಟ್ರಭಾಷೆ ಎಂದು ಬಂದಿದ್ದ ಬಾಲಿವುಡ್ ನಟ ಅಜಯ್‌ ದೇವಗನ್‌ಗೂ ಸುದೀಪ್ ತಿರುಗೇಟು ನೀಡಿದ್ದರು. 'ಕನ್ನಡ್' ಎನ್ನುವವರು ಇನ್ನು ಮುಂದೆ ಆದರೂ ಎಚ್ಚೆತ್ತುಕೊಳ್ಳಬೇಕಿದೆ.

More from Filmibeat

English summary
Sudeep And Yash teaches How to Pronounce Kannada, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X