»   » ಸುದೀಪ್ ಜನ್ಮದಿನದ ನೆಪದಲ್ಲಿ ಹಣ ವಸೂಲಿ: ಅಪ್ಪಿ-ತಪ್ಪಿಯೂ ದುಡ್ಡು ಕೊಡ್ಬೇಡಿ.!

ಸುದೀಪ್ ಜನ್ಮದಿನದ ನೆಪದಲ್ಲಿ ಹಣ ವಸೂಲಿ: ಅಪ್ಪಿ-ತಪ್ಪಿಯೂ ದುಡ್ಡು ಕೊಡ್ಬೇಡಿ.!

Posted By:
Subscribe to Filmibeat Kannada

ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ರವರ ಹುಟ್ಟುಹಬ್ಬ... ಸುದೀಪ್ ಬರ್ತಡೇಗೆ ಇನ್ನೂ ಒಂದುವರೆ ತಿಂಗಳು ಟೈಮ್ ಇದೆ. ಹೀಗಿರುವಾಗಲೇ, ಕೆಲ ಕಿಡಿಗೇಡಿಗಳು ಸುದೀಪ್ ಜನ್ಮದಿನ ಸೆಲೆಬ್ರೇಟ್ ಮಾಡಲು ಹಣ ವಸೂಲಿ ಮಾಡುತ್ತಿದ್ದಾರಂತೆ.

ಸುದೀಪ್ ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಟಿ-ಶರ್ಟ್ ಹಾಗೂ ಐಡಿ ಕಾರ್ಡ್ ಗಳನ್ನು ಮಾಡಿಸಲು ಕೆಲವರು ದುಡ್ಡು ಪೀಕುತ್ತಿರುವುದು ತಮ್ಮ ಗಮನಕ್ಕೆ ಬಂದ್ಮೇಲೆ ಟ್ವಿಟ್ಟರ್ ನಲ್ಲಿ ಸುದೀಪ್ ಗುಡುಗಿದ್ದಾರೆ.

Sudeep annoyed with few who are collecting money in the name of his birthday

'ನಲ್ಲ' ಸುದೀಪ್ ಅಭಿಮಾನಿಯ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ.?

''ಕೆಲವರು ನನ್ನ ಹುಟ್ಟುಹಬ್ಬಕ್ಕಾಗಿ ಟಿ-ಶರ್ಟ್ ಹಾಗೂ ಐಡಿ ಕಾರ್ಡ್ ಮಾಡಿಸಲು ಹಣ ಕಲೆಕ್ಟ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂಥವರು ಯಾರು ಎಂಬುದನ್ನ ನನಗೆ ತಿಳಿಸಿ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಸುದೀಪ್ ಹುಟ್ಟುಹಬ್ಬದ ಹೆಸರಿನಲ್ಲಿ ಯಾರೇ ದುಡ್ಡು ಕೇಳಿದರೂ, ದಯವಿಟ್ಟು ಕೊಡಬೇಡಿ ಎಂದು ಸುದೀಪ್ ಅಭಿಮಾನಿಗಳ ಸಂಘ ಕೂಡ ಟ್ವಿಟ್ಟರ್ ಮೂಲಕ ಮನವಿ ಮಾಡಿದೆ.

''ಅಭಿಮಾನಿಗಳ ಜೊತೆಗೆ ಸುದೀಪ್ ಕಾಲ ಕಳೆಯುವ ದಿನ ಅವರ ಹುಟ್ಟುಹಬ್ಬ. ಹೀಗಾಗಿ ಜನ್ಮದಿನದಂದು ಸುದೀಪ್ ಅಭಿಮಾನಿಗಳ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಾರೆ ಹೊರತು ಬೇರೇನೂ ಅಲ್ಲ. ನಿಮ್ಮ ಬೆವರು ಸುರಿಸಿ ಗಳಿಸಿರುವ ಹಣವನ್ನು 'ಸುದೀಪ್ ಹುಟ್ಟುಹಬ್ಬ' ಹೆಸರಿನಲ್ಲಿ ವಸೂಲಿ ಮಾಡುತ್ತಿರುವವರಿಗೆ ನೀಡಬೇಡಿ'' ಎಂದು ಸುದೀಪ್ ಫ್ಯಾನ್ಸ್ ಕ್ಲಬ್ ಎಲ್ಲರಲ್ಲಿಯೂ ಕೇಳಿಕೊಂಡಿದೆ.

ಅಭಿಮಾನದ ಮುಖವಾಡ ಧರಿಸಿ ಅವಕಾಶವಾದಿಗಳು ಏನೇನೆಲ್ಲಾ ಮಾಡಬಹುದು ಎನ್ನುವುದಕ್ಕೆ ಇದು ಉದಾಹರಣೆ ಅಷ್ಟೇ.!

English summary
Kiccha Sudeep has taken his twitter account to express his displeasure towards few who are collecting money in the name of his birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada