ಡಾಲಿಯ 'ಭೈರವ' ಲುಕ್ ಗೆ ಥ್ರಿಲ್ ಆದ ಸುದೀಪ್ ಹೇಳಿದ್ದೇನು.?

By Bharath Kumar

Recommended Video

ಡಾಲಿಯ ಭೈರವನ ಲುಕ್ ಸುದೀಪ್‌ಗೆ ಇಷ್ಟ ಆಯ್ತಾ..? | Filmibeat Kannada

'ಡಾಲಿ' ಧನಂಜಯ್ ಅಭಿನಯಿಸುತ್ತಿರುವ ಮೊದಲ ತೆಲುಗು ಸಿನಿಮಾ 'ಭೈರವ-ಗೀತಾ'. ಯುವ ಪ್ರತಿಭೆ ಸಿದ್ಧಾರ್ಥ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದು, ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡ್ತಿದ್ದಾರೆ.

ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೊಸ್ಟರ್ ಬಿಡುಗಡೆಯಾಗಿದ್ದು, ದಕ್ಷಿಣ ಚಿತ್ರರಂಗ ಮೆಚ್ಚುಗೆ ವ್ಯಕ್ತಪಡಿಸಿದೆ. ಅದರಲ್ಲೂ ಸ್ಯಾಂಡಲ್ ವುಡ್ ಕಲಾವಿದರು, ನಟ ಧನಂಜಯ್ ಅವರನ್ನ ಹಾಡಿ ಹೊಗಳಿದ್ದಾರೆ.

ಇದೀಗ, ಧನಂಜಯ್ ಅವರ 'ಭೈರವ' ಗೆಟಪ್ ಗೆ ಕಿಚ್ಚ ಸುದೀಪ್ ಮನಸೋತಿದ್ದಾರೆ. 'ಡಾಲಿ'ಯ ಹೊಸ ಖದರ್ ಗೆ ಅಭಿನಯ ಚಕ್ರವರ್ತಿ ಫಿದಾ ಆಗಿದ್ದು, ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ಅಷ್ಟ ಅಲ್ಲದೇ ಧನಂಜಯ್ ಅವರ ಭವಿಷ್ಯದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ, ಕಿಚ್ಚ ಏನಂದ್ರು.? ಮುಂದೆ ಓದಿ.....

ನಿಮ್ಮ ಬಗ್ಗೆ ಖುಷಿ ಇದೆ

ನಿಮ್ಮ ಬಗ್ಗೆ ಖುಷಿ ಇದೆ

'ಭೈರವ ಗೀತಾ' ಚಿತ್ರದ ಫಸ್ಟ್ ಲುಕ್ ನೋಡಿ ಕಾಮೆಂಟ್ ಮಾಡಿರುವ ಸುದೀಪ್ ''ನಿಮ್ಮ ಬಗ್ಗೆ ನನಗೆ ತುಂಬಾ ಖುಷಿ ಆಗ್ತಿದೆ. ನೀವು ಇದಕ್ಕೆ ಸಂಪೂರ್ಣವಾಗಿ ಅರ್ಹರಾಗಿದ್ದು, ಖಂಡಿತವಾಗಿಯೂ ನೀವು ಗುರಿ ಮುಟ್ಟುವಿರಿ. ಅದಕ್ಕಾಗಿ ನೀವು ದೊಡ್ಡ ಮಟ್ಟದ ಪ್ರಯತ್ನ ಮಾಡಿ ಮತ್ತು ನಿಮ್ಮ ನಂಬಿಕೆಯನ್ನ ಹೆಚ್ಚಿಸಿಕೊಳ್ಳಿ'' ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ.

ವರ್ಮಾ ಜೊತೆ ಸಿನಿಮಾ ಒಳ್ಳೆಯ ಆಯ್ಕೆ

ವರ್ಮಾ ಜೊತೆ ಸಿನಿಮಾ ಒಳ್ಳೆಯ ಆಯ್ಕೆ

''ರಾಮ್ ಗೋಪಾಲ್ ವರ್ಮಾ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಅವರು ನಿಮ್ಮನ್ನ ಪರಿಚಯಿಸುತ್ತಿದ್ದಾರೆ. ಇದಕ್ಕಿಂತ ಉತ್ತಮವಾದ ಅವಕಾಶ ನಿಮಗೆ ಬೇರೊಂದು ಇಲ್ಲ ಎನಿಸುತ್ತಿದೆ. ಆಲ್ ದಿ ಬೆಸ್ಟ್ ಮೈ ಫ್ರೆಂಡ್'' ಎಂದು ಸುದೀಪ್ ಶುಭಕೋರಿದ್ದಾರೆ.

ಕಿಚ್ಚನ ಮಾತಿಗೆ ಖುಷ್ ಆದ ಡಾಲಿ

ಇನ್ನು ಸುದೀಪ್ ಅವರು ಹೇಳಿರುವ ಉತ್ತೇಜನದ ಮಾತುಗಳನ್ನ ಕೇಳಿದ ಧನಂಜಯ್, ಸುದೀಪ್ ಗೆ ಹೃದಯಪೂರ್ವಕ ಧನ್ಯವಾದಗಳನ್ನ ತಿಳಿಸಿದ್ದಾರೆ.

ಶೂಟಿಂಗ್ ನಡೆಯುತ್ತಿದೆ

ಶೂಟಿಂಗ್ ನಡೆಯುತ್ತಿದೆ

ಅಂದ್ಹಾಗೆ, 'ಭೈರವ-ಗೀತಾ' ಸಿನಿಮಾ ಒಂದು ನೈಜ ಕಥೆಯಾಗಿದ್ದು, ಹಿಂಸಾತ್ಮಕ ಲವ್ ಸ್ಟೋರಿಯಾಗಿದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದ್ದು, ಬಾಸ್ಕರ್ ರಿಷಿ ಮತ್ತು ವರ್ಮಾ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Kannada actor kiccha sudeep has taken his twitter account to appreciate Daali dhananjay for Bhairava geetha first look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X