For Quick Alerts
  ALLOW NOTIFICATIONS  
  For Daily Alerts

  'ಲಂಡನ್ ನಲ್ಲಿ ಲಂಬೋದರ'ನನ್ನು ಮೆಚ್ಚಿದ ಕಿಚ್ಚ ಸುದೀಪ್

  |

  'ಬಿಗ್ ಬಾಸ್' ಖ್ಯಾತಿಯ ಶ್ರುತಿ ಪ್ರಕಾಶ್ ಅಭಿನಯದ ಚೊಚ್ಚಲ ಸಿನಿಮಾ 'ಲಂಡನ್ ನಲ್ಲಿ ಲಂಬೋದರ' ಸಿನಿಮಾ ತೆರೆಗೆ ಬರೋದಕ್ಕೆ ಸಿದ್ದವಾಗಿದೆ. ಈ ಮಧ್ಯೆ ಚಿತ್ರದ ಟೀಸರ್ ನೋಡಿರುವ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯ ಫಿನಾಲೆ ವೇದಿಕೆಯಲ್ಲಿ ಲಂಡನ್ ಲಂಬೋದರ ಚಿತ್ರತಂಡವನ್ನ ಆಹ್ವಾನಿಸಿ, ಚಿತ್ರದ ಬಗ್ಗೆ ಪ್ರಶಂಸಿದ್ದರು. ಟೀಸರ್ ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿದ್ದರು.

  ಬಿಗ್ ಬಾಸ್ ಶೃತಿ ಪ್ರಕಾಶ್ ಈಗ ಸ್ಯಾಂಡಲ್ ವುಡ್ ನಾಯಕಿ ಬಿಗ್ ಬಾಸ್ ಶೃತಿ ಪ್ರಕಾಶ್ ಈಗ ಸ್ಯಾಂಡಲ್ ವುಡ್ ನಾಯಕಿ

  ಕಾಮಿಡಿ ಕಮ್ ಲವ್ ಸ್ಟೋರಿ ಕಥಾಹಂದರವನ್ನು ಹೊಂದಿರುವ ಲಂಡನ್ ನಲ್ಲಿ ಲಂಬೋದರ ಚಿತ್ರದ ಮೂಲಕ ನವ ನಾಯಕ ಸಂತೋಷ್ ಸ್ಯಾಂಡಲ್ ವುಡ್ ನಾಯಕನಾಗಿ ಎಂಟ್ರಿ ಕೊಡ್ತಿದ್ದಾನೆ. ಈ ಚಿತ್ರದಲ್ಲಿ ಶ್ರುತಿ ಪ್ರಕಾಶ್ ಬಬ್ಲಿ ಪಾತ್ರದಲ್ಲಿ ನಟಿಸಿದ್ದು ಸದ್ಯ ಟೀಸರ್ ನಲ್ಲಿರೋ ಡೈಲಾಗ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

  ಇನ್ನೂ ಮೊದಲ ಸಿನಿಮಾ ಮುಗಿದಿಲ್ಲ, ಅಷ್ಟು ಬೇಗ ಇನ್ನೊಂದು ಚಾನ್ಸ್ ಪಡೆದ ಶ್ರುತಿ.! ಇನ್ನೂ ಮೊದಲ ಸಿನಿಮಾ ಮುಗಿದಿಲ್ಲ, ಅಷ್ಟು ಬೇಗ ಇನ್ನೊಂದು ಚಾನ್ಸ್ ಪಡೆದ ಶ್ರುತಿ.!

  ಸ್ಪೆಷಲ್ ಅಂದ್ರೆ ಶ್ರುತಿ ಚಿತ್ರದಲ್ಲಿ ಕನ್ನಡದ ಪ್ರೇಮಿ ಆಗಿ ಕಾಣಿಸಿಕೊಂಡಿದ್ದಾರೆ. ಲಂಡನ್ ನಲ್ಲಿ ಲಂಬೋದರ ಚಿತ್ರದ ಎರಡು ಹಾಡುಗಳಿಗೆ ಶ್ರುತಿ ದನಿಯಾಗುವ ಮೂಲಕ ಈ ಫಿಲ್ಮಂ ಮುಖಾಂತರ ಸಿಂಗರ್​ ಆಗಿಯೂ ಶ್ರುತಿ ಸ್ಯಾಂಡಲ್​ವುಡ್​ಗೆ ಎಂರ್ಟಿ ಕೊಡ್ತಿದ್ದಾರೆ...

  ಕನ್ನಡ ಸ್ಟಾರ್ ನಿರ್ದೇಶಕರ ಬಳಿ ಕೆಲಸ ಮಾಡಿದ್ದ ರಾಜ್ ಸೂರ್ಯ 'ಲಂಡನ್ ನಲ್ಲಿ ಲಂಬೋದರ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪ್ರೇಕ್ಷಕರೆದುರು ಬರ್ತಿದ್ದಾರೆ.

  ಅಂದ್ಹಾಗೆ, ಲಂಬೋದರ ಸಿನಿಮಾದ ಬಹುತೇಕ ಶೂಟಿಂಗ್​ ಲಂಡನ್​ನ ಸುಂದರ ತಾಣಗಳಲ್ಲಿ ಚಿತ್ರೀಕರಿಸಿದ್ದು, ಲಂಡನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಲಂಡನ್​ನಲ್ಲಿ ಅನಿವಾಸಿ ಭಾರತೀಯ ಸ್ನೇಹಿತರೆಲ್ಲ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ.

  English summary
  Kannada actor kiccha sudeep has appreciate to londonalli lambodhara. the movie starring bigg boss fame shruthi prakash in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X