'ಪ್ರೇಮ ಬರಹ'ಕ್ಕೆ ಮನಸೋತ ಸುದೀಪ್ ಗೆ ಇಷ್ಟವಾಗಿದ್ದೇನು?
ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಅಭಿನಯದ ಮೊಟ್ಟ ಮೊದಲ ಕನ್ನಡ ಸಿನಿಮಾ 'ಪ್ರೇಮ ಬರಹ' ರಾಜ್ಯದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿ ಅಭಿಮಾನಿಗಳು ಸಿನಿ ತಾರೆಯರು ಹೀಗೆ ಎಲ್ಲರು ಮೆಚ್ಚಿಕೊಂಡ 'ಪ್ರೇಮ ಬರಹ' ಮೂರನೇ ವಾರಕ್ಕೆ ಸನಿಹದಲ್ಲಿದೆ.
ನಿನ್ನೆಯಷ್ಟೇ ಕಿಚ್ಚ ಸುದೀಪ್ 'ಪ್ರೇಮ ಬರಹ' ಚಿತ್ರವನ್ನ ನೋಡುತ್ತಿದ್ದಾರೆ ಎಂದು ಫಿಲ್ಮಿಬೀಟ್ ಕನ್ನಡದಲ್ಲಿ ಸುದ್ದಿ ಪ್ರಕಟವಾಗಿತ್ತು. ಬರಿ ಸಿನಿಮಾ ನೋಡುವ ಸುದ್ದಿ ಕೊಟ್ರೆ ಸಾಕಾ.? ಸಿನಿಮಾ ನೋಡಿದ್ಮೇಲೆ ಸುದೀಪ್ ಏನಂದ್ರು ಎನ್ನುವುದು ಕೂಡ ಬೇಕು ಅಲ್ವಾ.!
ಎಸ್, ಪ್ರೇಮ ಬರಹ ಚಿತ್ರವನ್ನ ನೋಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಪ್ರೇಮ ಬರಹ ಚಿತ್ರಕ್ಕೆ ಸುದೀಪ್ ಮನಸೋತ್ರಾ.? ಚಿತ್ರದಲ್ಲಿ ಏನಿಷ್ಟ ಆಯ್ತು? ಮುಂದೆ ಓದಿ.....

ಪ್ರೀತಿ ಮತ್ತು ಜೀವನದ ಪ್ರೇಮ ಬರಹ
''ಜೀವನ ಮತ್ತು ಪ್ರೀತಿಯ ಉತ್ತಮ ಮಿಶ್ರಣ 'ಪ್ರೇಮ ಬರಹ' ಸಿನಿಮಾ. ಇಬ್ಬರ ಯುವ ಪ್ರೇಮಿಗಳ ಪ್ರೀತಿ ಮತ್ತು ನಮ್ಮ ಯೋಧರ ಜೀವನದ ಬಗ್ಗೆ ಬಹಳ ಚೆನ್ನಾಗಿ ಚಿತ್ರೀಸಿದ್ದಾರೆ''

ಐಶ್ವರ್ಯ ದಿ ಬೆಸ್ಟ್
''ಐಶ್ವರ್ಯ ಸರ್ಜಾ ಅವರ ಪಾತ್ರ ನಿಜಕ್ಕೂ ಅದ್ಭುತ. ಅದಕ್ಕೆ ತಕ್ಕ ಅಭಿನಯ ಅವರದ್ದು. ಈ ಪಾತ್ರದಲ್ಲಿ ಎಲ್ಲರ ಗಮನವನ್ನ ಸೆಳೆಯುತ್ತಾರೆ.''

ಚಂದನ್ ಅಭಿನಯದ ಸೂಪರ್
''ಚಂದನ್ ನೋಡಲು ಬಹಳ ಚೆನ್ನಾಗಿ ಕಾಣ್ತಾರೆ. ತೆರೆಮೇಲೆ ಅವರ ನಟನೆ ಅಮೋಘವಾಗಿದೆ. ನನಗೆ ಚಂದನ್ ಪಾತ್ರ ತುಂಬ ಇಷ್ಟ ಆಯ್ತು. ನಿಜಕ್ಕೂ ವಾಹ್ಹ್ ಎನ್ನುವ ಕೆಲವು ಅಂಶಗಳು ಚಿತ್ರದಲ್ಲಿದೆ.''

ಪ್ರೇಮ ಬರಹ ಚಿತ್ರದ ಬಗ್ಗೆ....
ಅರ್ಜುನ್ ಸರ್ಜಾ ನಿರ್ದೇಶನ ಮತ್ತು ನಿರ್ಮಾಣದ ಸಿನಿಮಾ. ಐಶ್ವರ್ಯ ಅವರ ಮೊದಲ ಕನ್ನಡ ಸಿನಿಮಾ. ಸುಹಾಸಿನಿ, ಕೆ.ವಿಶ್ವನಾಥ್, ಸಾಧುಕೋಕಿಲ, ರಂಗಾಯಣ ರಘು, ಪ್ರಕಾಶ್ ರೈ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಂದು ಹಾಡಿನಲ್ಲಿ ನಟ ದರ್ಶನ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಕೂಡ ಬಂದು ಹೋಗುತ್ತಾರೆ.


Click it and Unblock the Notifications










