'ಪ್ರೀಮಿಯರ್ ಪದ್ಮಿನಿ' ಮೆಚ್ಚಿದ ಸುದೀಪ್: ಸಣ್ಣ ಪದದಲ್ಲಿ ಧನ್ಯವಾದ ಹೇಳಿದ ಜಗ್ಗೇಶ್

Recommended Video

ಜಗ್ಗೇಶ್ ನಟನೆಯ ಪ್ರೀಮಿಯರ್ ಪದ್ಮಿನಿ ಸಿನಿಮಾ ನೋಡಿ ಮೆಚ್ಚಿದ ಸುದೀಪ್ | FILMIBEAT KANNADA

ನವರಸ ನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ನಿನ್ನೆ (ಏಪ್ರಿಲ್ 26) ತೆರೆಕಂಡಿದೆ. ಭಾವನಾತ್ಮಕ ಮನರಂಜನೆ ಮೂಲಕ ಪ್ರೇಕ್ಷಕರನ್ನ ಸೆಳೆಯುತ್ತಿರುವ ಈ ಚಿತ್ರವನ್ನ ನಟ ಕಿಚ್ಚ ಸುದೀಪ್ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅಭಿನಯ ಚಕ್ರವರ್ತಿ, ''ಪ್ರೀಮಿಯರ್ ಪದ್ಮಿನಿ ಒಳ್ಳೆಯ ಸಿನಿಮಾ. ಭಾವನಾತ್ಮಕವಾಗಿ ಪ್ರೇಕ್ಷಕರ ಮನಸ್ಸು ಮುಟ್ಟುವ ಸಿನಿಮಾ. ಜಗ್ಗೇಶ್ ಅವರು ಹೊಸದಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಮೂಲಕ ಹೃದಯ ಸ್ಪರ್ಶಿಸುವಂತಹ ಅಭಿನಯ ನೀಡಿದ್ದಾರೆ. ಚಿತ್ರದ ಎಲ್ಲ ಕಲಾವಿದರು, ತಂತ್ರಜ್ಞರ ಕೆಲಸ ಮೆಚ್ಚುವಂತಹದ್ದು'' ಎಂದು ಸವಿವರವಾಗಿ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ''ದೂರದ ಹೈದರಾಬಾದಿನ ಚಿತ್ರೀಕರಣದ ನಡುವೆಯು ಬಿಡುವು ಮಾಡಿಕೊಂಡು ನೋಡಿ ಚಿತ್ರತಂಡಕ್ಕೆ ಹಾರೈಸಿದ್ದು ಕಂಡು

Sudeep appreciate to premier padmini

ಕನ್ನಡ ಚಿತ್ರರಂಗದ ಬಗ್ಗೆ ನಿಮಗಿರುವ ಬದ್ಧತೆ ಪ್ರೀತಿ ನಿರೂಪಿಸಿದ್ದೀರಿ

ಧನ್ಯವಾದಗಳು ಸಣ್ಣಪದ..I just say i love you...

ನಿಮ್ಮ ಸರ್ವಕಾರ್ಯ ಜಯಪ್ರಧವಾಗಲಿ.. ಶುಭದಿನ...'' ಎಂದು ಟ್ವಿಟ್ಟರ್ ನಲ್ಲಿ ಥ್ಯಾಂಕ್ಸ್ ಹೇಳಿದ್ದಾರೆ.

ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಸುದೀಪ್ ಮುಂದಿನ ವಾರದಿಂದ ದಬಾಂಗ್ 3 ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಸತತ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು ಸಮಯ ಬಿಡುವು ಮಾಡಿಕೊಂಡು ಜಗ್ಗೇಶ್ ಅವರ ಸಿನಿಮಾ ನೋಡಿರುವುದು ನಿಜಕ್ಕೂ ವಿಶೇಷ.

ಇನ್ನುಳಿದಂತೆ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಜಗ್ಗೇಶ್ ಜೊತೆ ಮಧುಬಾಲ, ಸುಧಾರಾಣಿ, ಪ್ರಮೋದ್, ವಿವೇಕ್ ಸಿಂಹ, ಹಿತಾ ಚಂದ್ರಶೇಖರ್ ಸೇರಿದಂತೆ ಹಲವರು ನಟಿಸಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದು, ರಾಜೇಶ್ ಇಂದಿರಾ ನಿರ್ದೇಶಿಸಿದ್ದಾರೆ.

More from Filmibeat

English summary
Kannada actor kiccha sudeep watched jaggesh starrer premier padmini movie and he appreciated full team for good movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X