ಕಿಚ್ಚ ಮೆಚ್ಚಿದ 'ಮಮ್ಮಿ': 'ನಾನು ನೋಡಲೇಬೇಕು' ಎಂದ ಸುದೀಪ್
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ 'ಮಮ್ಮಿ ಸೇವ್ ಮಿ'. ಬರಿ ಟ್ರೈಲರ್ ನಿಂದಲೇ ಮೋಡಿ ಮಾಡುತ್ತಿರುವ ಈ ಚಿತ್ರವನ್ನ ನೋಡಲೇಬೇಕೆಂದು ಚಿತ್ರಪ್ರೇಮಿಗಳು ಮಾತ್ರವಲ್ಲ, ನಮ್ಮ ಸ್ಟಾರ್ ಗಳು ಕೂಡ ಕಾಯುತ್ತಿದ್ದಾರೆ.
ಹೀಗೆ, 'ಮಮ್ಮಿ ಸೇವ್ ಮಿ' ಚಿತ್ರಕ್ಕಾಗಿ ಕಾಯುತ್ತಿರುವ ಸ್ಯಾಂಡಲ್ ವುಡ್ ಸ್ಟಾರ್ ಗಳ ಪೈಕಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊದಲಿಗರು ಅಂದ್ರೆ ತಪ್ಪಾಗಲಾರದು. ಹೌದು, ಮಮ್ಮಿ ಚಿತ್ರದ ಟ್ರೈಲರ್ ನೋಡಿರುವ ಸುದೀಪ್, ಈ ಚಿತ್ರವನ್ನ ನೋಡಲೇಬೇಕು ಎಂದಿದ್ದಾರೆ.['ಮಮ್ಮಿ ಸೇವ್ ಮಿ' ಚಿತ್ರತಂಡದ ಕಡೆಯಿಂದ ಬಂದ ಇಂಟ್ರೆಸ್ಟಿಂಗ್ ನ್ಯೂಸ್]

ಸುದೀಪ್ ಹೇಳಿದ್ದೇನು?
''ಸಾಮಾನ್ಯವಾಗಿ ನಾನು ಹಾರರ್ ಸಿನಿಮಾ ನೋಡುವುದಿಲ್ಲ. ಸಿಕ್ಕಾಪಟ್ಟೆ ಭಯ ಆಗುತ್ತೆ. ಆ ಜಾನರ್ ಗೂ ನನಗೂ ಆಗಲ್ಲ. ಉಪೇಂದ್ರ ಅವರ 'ಶ್' ಸಿನಿಮಾನೇ ಲಾಸ್ಟ್, ಮತ್ತೆಂದೂ ಹಾರರ್ ಸಿನಿಮಾ ನೋಡಬಾರದು ಎಂದುಕೊಂಡಿದ್ದೆ. ಆದ್ರೆ, 'ಮಮ್ಮಿ ಸೇವ್ ಮಿ' ಚಿತ್ರದ ಟ್ರೈಲರ್ ನೋಡಿದಾಗ ವಿಷ್ಯುಯಲಿ ತುಂಬಾ ಇಂಟ್ರೆಸ್ಟಿಂಗ್ ಆಗಿತ್ತು. ಚಿತ್ರವನ್ನ ಶೂಟ್ ಮಾಡಿರೋ ರೀತಿ ಬಹಳ ಹಿಡಿಸಿತು. ಸಿನಿಮಾಟೋಗ್ರಾಫರ್ ವೇಣು ಎಕ್ಸಲೆಂಟ್ ವರ್ಕ್ ಮಾಡಿದ್ದಾರೆ. ಸಂಕಲನ ಮತ್ತು ಸೌಂಡ್ ಎಫೆಕ್ಟ್ ಕೂಡಾ ಚೆನ್ನಾಗಿದೆ. ಚಿತ್ರ ನೋಡಲೇ ಬೇಕು ಎನಿಸುತ್ತಿದೆ'' ಎಂದಿದ್ದಾರೆ ಸುದೀಪ್. [ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಹೊಸ ಟ್ರೈಲರ್ ]

''ಚಿತ್ರದ ಟ್ರೇಲರ್ ನಲ್ಲಿ ನಿರ್ದೇಶಕ ಲೋಹಿತ್ ಕಾಣ್ತಿದ್ದಾರೆ. ಅವರ ಪ್ರತಿಭೆಗೆ ನಾನು ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ತನ್ನ ಮಗುವನ್ನ ಕಾಪಾಡಿಕೊಳ್ಳುವ ತಾಯಿಯೊಬ್ಬಳ ಹೋರಾಟದ ಪಾತ್ರದಲ್ಲಿ ಪ್ರಿಯಾಂಕ ನಟನೆ ಚೆನ್ನಾಗಿ ಮೂಡಿಬಂದಿದೆ. ಕನ್ನಡಕ್ಕೆ ಇದು ವಿಶೇಷ ಸಿನಿಮಾ ಆಗುವುದರಲ್ಲಿ ಅನುಮಾನವೇ ಇಲ್ಲ'' ಎಂದು ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. [ಕನ್ನಡದ 'ಮಮ್ಮಿ' ತೆಲುಗಿನಲ್ಲಿ 'ಚಿನ್ನಾರಿ']

ಕೇವಲ ಸುದೀಪ್ ಮಾತ್ರವಲ್ಲದೇ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಹರಿಪ್ರಿಯಾ, ಮಯೂರಿ, ರಾಗಿಣಿ, ತಾರಾ ಸೇರಿದಂತೆ ಕನ್ನಡದ ಬಹುತೇಕ ಕಲಾವಿದರು ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತಡಪಿಸಿದ್ದಾರೆ.

ಅಂದ್ಹಾಗೆ, 'ಮಮ್ಮಿ ಸೇವ್ ಮಿ' ಡಿಸೆಂಬರ್ 2 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಯುವ ನಿರ್ದೇಶಕ ಲೋಹಿತ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ, ನಟಿ ಪ್ರಿಯಾಂಕ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಪ್ರಿಯಾಂಕ ಅವರ ಮಗಳ ಪಾತ್ರದಲ್ಲಿ ಖ್ಯಾತ ಬಾಲ ನಟಿ ಯುವಿನಾ ಅಭಿನಯಿಸಿದ್ದಾರೆ.['ಮಮ್ಮಿ-ಸೇವ್ ಮಿ' ಚಿತ್ರದ ರಿಲೀಸ್ ಡೇಟ್ ಕನ್ ಫರ್ಮ್]


Click it and Unblock the Notifications











