»   » ದರೋಡೆಕೋರ ಕಿಚ್ಚ ಕೋಟಿಗೊಬ್ಬ ಆಗೋಕೆ ಸಾಧ್ಯಾನಾ?

ದರೋಡೆಕೋರ ಕಿಚ್ಚ ಕೋಟಿಗೊಬ್ಬ ಆಗೋಕೆ ಸಾಧ್ಯಾನಾ?

Posted By: ಜೀವನರಸಿಕ
Subscribe to Filmibeat Kannada

ಕಿಚ್ಚ ಸುದೀಪ್ ಮುಂದಿನ ಸಿನಿಮಾ ತಮಿಳು ಮತ್ತು ಕನ್ನಡ ಭಾಷೆಯಲ್ಲಿ ತೆರೆಗೆ ಬರ್ತಿದೆ. ಚಿತ್ರದ ಟೈಟಲ್ 'ಇವನ್ ಮುಡಿಂಜಾ ಪುಲಿ' ಅಂದ್ರೆ 'ತಾಕತ್ತಿದ್ರೆ ನನ್ನನ್ನ ಹಿಡೀರಿ'! ಅರ್ಥ ಆಗೋ ತರಹ ಹೇಳ್ಬೇಕು ಅಂದ್ರೆ ಕ್ಯಾಚ್ ಮಿ ಇಫ್ ಯೂ ಕ್ಯಾನ್!

ಚಿತ್ರದಲ್ಲಿ ಕಿಚ್ಚ ಒಬ್ಬ ಕಳ್ಳ, ದರೋಡೆಕೋರ. ಬ್ಯಾಂಕ್ ಒಂದರಿಂದ ಕಿಚ್ಚ ಅಂಡ್ ಖಿಲಾಡಿ ಟೀಂ ಹೇಗೆ ದೊಡ್ಡ ಮೊತ್ತದ ಹಣವನ್ನ ಲಪಟಾಯಿಸುತ್ತೆ ಅನ್ನೋದೇ ಕಥೆ. ಕ್ಷಣ ಕ್ಷಣಕ್ಕೂ ಥ್ರಿಲ್ ಕೊಡೋ ಕಥೆಯ ಇನ್ನೊಂದು ಶೇಡ್ನಲ್ಲಿ ಕಿಚ್ಚ ಗುಣವಂತ, ಸಿರಿವಂತ. ಒಂದು ರೀತಿಯಲ್ಲಿ ಆಧುನಿಕ ರಾಬಿನ್ ಹುಡ್ ಇದ್ದಂತೆ.[ಫೇರ್ ಅಂಡ್ ಲವ್ಲೀ ಸುಂದರಿಗೆ ಕಿಚ್ಚನ ಜೊತೆ ನಟಿಸುವ ಆಸೆಯಂತೆ!]

Sudeep as bank robberer in Tamil movie

ಸೋ ಇಲ್ಲಿ ಒಂದು ಕಡೆ ಕಿಚ್ಚನ ಪಾಸಿಟೀವ್ ಶೆಡ್ ಇದ್ರೂ ಮತ್ತೊಂದು ಕಡೆ ಕಿಚ್ಚ ಹೆಚ್ಚು ಹೈಲೈಟ್ ಆಗೋದು ನೆಗೆಟೀವ್ ಶೇಡ್ನಲ್ಲಿ. ಸೋ ಇಂತಹಾ ಅರ್ಧ ನೆಗೆಟೀವ್ ಶೇಡ್ ಇರೋ ಚಿತ್ರಕ್ಕೆ ಸ್ವತಃ ವಿಷ್ಣು ದೊಡ್ಡ ಅಭಿಮಾನಿಯಾಗಿರೋ ಕಿಚ್ಚ ಒಪ್ಪೋದಿಲ್ಲ.[ಕಿಚ್ಚ ಸುದೀಪ್ ರನ್ನ ಕಿಚಾಯ್ಸಿದ್ರಾ ಗೀತಸಾಹಿತಿ ಹೃದಯಶಿವ?]

ಇನ್ನು ಕಥೆಯೂ ದರೋಡೆಕೋರನ ಕಥೆಯಾಗಿದ್ದು, ಸಖತ್ ಥ್ರಿಲ್ಲರ್ ಆಗಿರೋದ್ರಿಂದ ಕೋಟಿಗೊಬ್ಬ ಅನ್ನೋ ಹೀರೋಯಿಸಂ ಟೈಟಲ್ ಹೊಂದಾಣಿಕೆ ಅಗೋದಿಲ್ಲ. ಸೋ ಕನ್ನಡದಲ್ಲಿ ಕೋಟಿಗೊಬ್ಬ ಇರೋದು ನೂರಕ್ಕೆ ನೂರು ಡೌಟು..

English summary
Kiccha Sudeep's next movie was suppose to be in Tamil and Kannada. The story revolves around a robberer, who is good and bad qualities. But, since the story and negative shade of the character does not suit Sudeep as Kannada actor. So, it is doubtful in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada