ಗಿರಿಜಾ ಲೋಕೇಶ್ ಜೀವನ ಚರಿತ್ರೆ 'ಗಿರಿಜಾ ಪರಸಂಗ' ಪುಸ್ತಕ ಬಿಡುಗಡೆ ಮಾಡಿದ ಸುದೀಪ್

ಸ್ಯಾಂಡಲ್ ವುಡ್ ನ ಹಿರಿಯ ನಟಿ ಗಿರಿಜಾ ಲೋಕೇಶ್ ಹುಟ್ಟಹಬ್ಬವನ್ನು ಆಚರಣೆ ಮಾಡಲಾಗಿದೆ. 70ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಗಿರಿಜಾ ಲೋಕೇಶ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ವಿಶೇಷ ಎಂದರೆ ಅವರ ಹುಟ್ಟುಹಬ್ಬದ ದಿನವೇ 'ಗಿರಿಜಾ ಪರಸಂಗ' ಜೀವನ ಕಥನ ರಿಲೀಸ್ ಮಾಡಲಾಗಿದೆ.

ಹೌದು, ಇತ್ತೀಚಿಗಷ್ಟೆ ಹಿರಿಯ ನಟಿ ಗಿರಿಜಾ ಲೋಕೇಶ್ ಚಿತ್ರರಂಗದವರ ಪಾಲಿನ ಪ್ರೀತಿಯ ಗಿರಿಜಮ್ಮ್ ಅವರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಮಾಡಲಾಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಭಾಗಿಯಾಗಿಯಾಗಿದ್ದರು.

'ಗಿರಿಜಾ ಪರಸಂಗ' ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್ 'ತುಂಬ ಕಡಿಮೆ ಜನಕ್ಕೆ 70ನೇ ವಯಸ್ಸು ನೋಡೋಕೆ ಸಿಗುತ್ತೆ. ಅವರ ಹುಟ್ಟುಹಬ್ಬವನ್ನು ಇಷ್ಟು ಜನ ಸೇರಿ, ಇಷ್ಟೆಲ್ಲ ಸ್ನೇಹಿತರು ಭಾಗಿಯಾಗಿ ಸಂಭ್ರಮಿಸಲಾಗುತ್ತಿದೆ. ಆದರೆ ಇದಕ್ಕೆಲ್ಲ ಕೇಳಿಕೊಂಡು ಬಂದಿರಬೇಕು. ಗಿರಿಜಮ್ಮ್ ಎಲ್ಲಾ ಕೇಳಿಕೊಂಡು ಬಂದಿದ್ದಾರೆ. ನಮ್ಮ ಹೆಸರಿನಲ್ಲಿ ಪುಸ್ತಕ ಬಂದಾಗ ಜೀವನ ಸಾರ್ಥಕ ಎನಿಸುತ್ತೆ' ಎಂದು ಸುದೀಪ್ ಹೇಳಿದ್ದಾರೆ.

 Sudeep at the launch of biography of senior actress Girija Lokesh

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ನಟಿ ಜಯಮಾಲ ಕೂಡ ಹಾಜರಿದ್ದರು. ಇನ್ನು ಗಿರಿಜಾ ಲೋಕೇಶ್ ಪುತ್ರ ನಟ ಸೃಜನ್ ಲೋಕೇಶ್ ದಂಪತಿ ಸೇರಿದಂತೆ ಅನೇಕ ಸ್ನೇಹಿತರು ಭಾಗಿಯಾಗಿ ಗಿರಿಜಾ ಲೋಕೇಶ್ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಇನ್ನು ನಟಿ ಗಿರಿಜಾ ಲೋಕೇಶ್ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಬೆಳ್ಳಿ ಪರದೆ ಜೊತೆಗೆ ಕಿರುತೆರೆಯಲ್ಲೂ ಮಿಂಚಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಗಿರಿಜಾ ಲೋಕೇಶ್ ನಟಿಸಿದ್ದಾರೆ. ಅನೇಕ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

Recommended Video

ಸಲಗ ಚಿತ್ರದ ಬಗ್ಗೆ ನಾಳೆ ಸಿಗುತ್ತಾ ಬಿಗ್ ಅಪ್ಡೇಟ್ | Duniya Vijay | Filmibeat Kannada

More from Filmibeat

English summary
Actor Sudeep at the launch of biography of senior actress Girija Lokesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X