ಬಾಲಿವುಡ್ನ ಈ ನಟಿಗೆ ಸುದೀಪ್ ಬಹುದೊಡ್ಡ ಫ್ಯಾನ್ ಅಂತೆ

Recommended Video

ಈ ಬಾಲಿವುಡ್ ನಟಿಗೆ ಸುದೀಪ್ ದೊಡ್ಡ ಫ್ಯಾನ್ ಅಂತೆ | FILMIBEAT KANNADA

ಕಿಚ್ಚ ಸುದೀಪ್ ಅಂದ್ರೆ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ, ಹೊರರಾಜ್ಯಗಳಲ್ಲೂ ಚಿರಪರಿಚಿತ. ಪರಭಾಷೆಗಳಲ್ಲಿ ನಟಿಸಿರುವ ಸುದೀಪ್ ಆಯಾ ಭಾಷೆಯಲ್ಲೂ ಅಭಿಮಾನಿಗಳನ್ನ ಹೊಂದಿದ್ದಾರೆ. ಸಾಮಾನ್ಯ ಅಭಿಮಾನಿಗಳ ಜೊತೆ ಸೆಲೆಬ್ರಿಟಿಗಳು ಕೂಡ ಸುದೀಪ್ ಅವರ ಯಾವುದೋ ಒಂದು ಗುಣಕ್ಕೆ ಅಭಿಮಾನಿಯಾಗಿರ್ತಾರೆ.

ಇದನ್ನ ಹಲವು ತಾರೆಯರು ಹಲವು ಸಲ ವ್ಯಕ್ತಪಡಿಸಿರುವುದುಂಟು. ತೆಲುಗು, ತಮಿಳು, ಹಿಂದಿ ಇಂಡಸ್ಟ್ರಿಯಲ್ಲಿ ಗತ್ತು ಉಳಿಸಿಕೊಂಡಿರುವ ಸುದೀಪ್ ಬಾಲಿವುಡ್ ನಲ್ಲಿ ಈ ನಟಿಗೆ ಬಹುದೊಡ್ಡ ಫ್ಯಾನ್ ಅಂತೆ.

ಹೀಗಂತ ಬೇರೆ ಯಾರೂ ಹೇಳಿಲ್ಲ. ಸ್ವತಃ ಸುದೀಪ್ ಅವರ ಪತ್ನಿಯೇ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾರೆ. ಇತ್ತೀಚಿಗಷ್ಟೆ ಬಾಲಿವುಡ್ ಸ್ಟಾರ್ ನಟರೊಬ್ಬರನ್ನ ಭೇಟಿ ಮಾಡಿರುವ ಸುದೀಪ್, ಈ ಬಗ್ಗೆ ಫೋಟೋ ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾ, ಕಿಚ್ಚನ ಕಾಲೆಳೆದು ರಹಸ್ಯ ವಿಷ್ಯವೊಂದನ್ನ ಹೊರಹಾಕಿದ್ದಾರೆ. ಅಷ್ಟಕ್ಕೂ, ಬಾಲಿವುಡ್ ಯಾವ ನಟಿಗೆ ಸುದೀಪ್ ಅಭಿಮಾನಿ? ಮುಂದೆ ಓದಿ.....

ಅಜಯ್ ದೇವಗನ್ ಭೇಟಿ ಮಾಡಿದ ಸುದೀಪ್

ಅಜಯ್ ದೇವಗನ್ ಭೇಟಿ ಮಾಡಿದ ಸುದೀಪ್

ಸದ್ಯ ಕೋಟಿಗೊಬ್ಬ-3 ಸಿನಿಮಾ ಚಿತ್ರೀಕರಣ ಮಾಡುತ್ತಿರುವ ಕಿಚ್ಚ ಸುದೀಪ್ ಅವರು ಇತ್ತೀಚಿಗಷ್ಟೆ ಬಾಲಿವುಡ್ ನಟ ಅಜಯ್ ದೇವಗನ್ ಅವರ ಭೇಟಿ ಮಾಡಿದ್ದಾರೆ. ಈ ಫೋಟೋ ಸ್ವತಃ ಸುದೀಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಕಿಚ್ಚನ ಕಾಲೆಳೆದ ಪ್ರಿಯಾ

ಕಿಚ್ಚನ ಕಾಲೆಳೆದ ಪ್ರಿಯಾ

ಸುದೀಪ್ ಮತ್ತು ಅಜಯ್ ದೇವಗನ್ ಭೇಟಿಯಾಗಿರುವ ಫೋಟೋಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾ ಸುದೀಪ್ ''ನನಗೆ ಗೊತ್ತು ನೀವು ಅಜಯ್ ದೇವಗನ್ ಪತ್ನಿಯನ್ನ ಭೇಟಿ ಮಾಡಿದ್ರೆ ಇನ್ನು ಖುಷಿ ಪಡ್ತಿದ್ರಿ'' ಎಂದು ಕಾಲೆಳೆದಿದ್ದಾರೆ.

ಕಾಜೋಲ್ ಗೆ ದೊಡ್ಡ ಫ್ಯಾನ್ ಅಂತೆ ಸುದೀಪ್

ಕಾಜೋಲ್ ಗೆ ದೊಡ್ಡ ಫ್ಯಾನ್ ಅಂತೆ ಸುದೀಪ್

ಪ್ರಿಯಾ ಹೇಳಿರುವ ಪ್ರಕಾರ ಕಾಜೋಲ್ ಗೆ ಸುದೀಪ್ ಬಹುದೊಡ್ಡ ಫ್ಯಾನ್ ಅಂತೆ. ಹಾಗಾಗಿ, ಅವರನ್ನ ಭೇಟಿ ಮಾಡಿದ್ರೆ ಹೆಚ್ಚು ಖುಷಿ ಪಡ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ದಬಾಂಗ್ 3 ನಲ್ಲಿ ಸುದೀಪ್

ದಬಾಂಗ್ 3 ನಲ್ಲಿ ಸುದೀಪ್

ಪೈಲ್ವಾನ್ ಮುಗಿಸಿ ಕೋಟಿಗೊಬ್ಬ-3 ಮಾಡುತ್ತಿರುವ ಸುದೀಪ್ ಈ ನಡುವೆ ಸಲ್ಮಾನ್ ಖಾನ್ ಜೊತೆ ದಬಾಂಗ್-3 ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಸಲ್ಲು ಜೊತೆ ವಿಶೇಷ ಪಾತ್ರವೊಂದರಲ್ಲಿ ನಟಿಸಿರುವ ಸುದೀಪ್ ಬಹಳ ವರ್ಷದ ನಂತರ ಮತ್ತೆ ಬಾಲಿವುಡ್ ಗೆ ಹೋಗಿರುವುದು ವಿಶೇಷ.

More from Filmibeat

English summary
Recently, Kannada actor kiccha Sudeep has meet ajay devagan and he shared photos in twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X