Kichcha 50: ಹುಟ್ಟುಹಬ್ಬದಂದು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಶನಿವಾರ (ಸೆಪ್ಟೆಂಬರ್ 2) ತಮ್ಮ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ್‌ಗೆ ಸೆಪ್ಟೆಂಬರ್ 1 ರಿಂದಲೇ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಎರಡು ದಿನಗಳು ಕಿಚ್ಚನ ಅಭಿಮಾನಿಗಳು ಸಂಭ್ರಮಿಸಿದ್ದರು.

ಸುದೀಪ್ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳನ್ನು ಮನೆಯ ಬಳಿಗೆ ಬಂದು ನೋಡುವುದು ಬೇಡ ಎಂದು ಹೇಳಿದ್ದರು. ಆದರೂ ನೂರಾರು ಮಂದಿ ಮನಡಯ ಬಳೀ ಬಂದು ಜಮಾಯಿಸಿದ್ದರು. ಸುದೀಪ್ ಕೂಡ ಇನ್ನೇನು ಮಾಡಲಾಗದೇ, ದೂರದಿಂದ ಬಂದ ಅಭಿಮಾನಿಗಳನ್ನು ನೋಡಲು ಭದ್ರತೆ ನಡುವೆ ವ್ಯವಸ್ಥೆ ಮಾಡಿಕೊಂಡಿದ್ದರು.

kichcha-sudeep-apologises-his-fans

ಸುದೀಪ್ ಅವರಿಗೆ ಶೇಕ್ ಹ್ಯಾಂಡ್ ಕೊಟ್ಟು ವಿಶ್ ಮಾಡಬೇಕು ಎಂಬ ಅಭಿಮಾನಿಗಳ ಆಸೆಯಿಂದ ಬ್ಯಾರಿಕೇಡ್ ಹಾಕಿ, ಸೂಕ್ರ ಭದ್ರತೆ ಮಾಡಲಾಗಿತ್ತು. ಆದರೆ, ಆದರೆ, ಜನ ಜಾಸ್ತಿಯಾದ ಕಾರಣ ಅಭಿಮಾನಿಗಳ ನೂಕು ನುಗ್ಗಲು ಹೆಚ್ಚಾಗಿ ಬ್ಯಾರಿಕೇಡ್ ಮುರಿದು ಹಾಕಲಾಗಿದೆ. ಹೀಗಾಗಿ ಭದ್ರತಾ ಕಾರಣಗಳಿಂದಾಗಿ ಅಭಿಮಾನಿಗಳೊಂದಿಗೆ ಕಿಚ್ಚ ಸುದೀಪ್ ಭೇಟಿ ರದ್ದುಗೊಳಿಸಲಾಯಿತು.

ಫ್ಯಾನ್ಸ್ ಭೇಟಿ ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಕಿಚ್ಚ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ನಲ್ಲಿ ಕ್ಷಮೆಯಾಚಿಸಿದ್ದಾರೆ. ವಿಡಿಯೋ ಹಂಚಿಕೊಂಡಿರುವ ನಟ, ಭೇಟಿ ರದ್ದು ಮಾಡಿದ್ದಕ್ಕೆ ಕಾರಣ ವಿವರಿಸಿ ಕ್ಷಮೆ ಕೇಳಿದ್ದಾರೆ.

"ಮನೆ ಹತ್ತಿರ ಬಂದಿದ್ದ ಎಲ್ಲರಿಗೂ ನನ್ನ ಭೇಟಿಯಾಗಬೇಕು ಎಂಬ ಆಸೆಯಿತ್ತು. ನಾನು ಕೂಡ ಬೆಳಗ್ಗೆಯೆ ನಿಂತುಕೊಂಡೆ. ನಾರ್ಮಲ್ ಆಗಿ ಇರುವ ಹಾಗೇಯೇ ಎಲ್ಲಾ ಸೆಕ್ಯೂರಿಟಿ ವ್ಯವಸ್ಥೆ ಆಗಿತ್ತು. ಆದರೂ ಕೂಡ, ಜನ ಜಾಸ್ತಿಯಾಗಿ ಬ್ಯಾರಿಕೇಡ್ ಎಲ್ಲಾ ಮುರಿದು, ಅಲ್ಲಿಂದ ಹೋಗಲು ದಾರಿಯುಲ್ಲದಂತಾಯಿತು. ಹೀಗಾಗಿ ಭದ್ರತಾ ಕಾರಣದಿಂದ ಭೇಟಿಯಾಗುವುದನ್ನು ನಿಲ್ಲಿಸಬೇಕಾಯಿತು ಕ್ಷಮೆಯಿರಲಿ" ಎಂದಿದ್ದಾರೆ.

ಜೊತೆಗೆ "ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಎಲ್ಲಾ ಬ್ಯಾರಿಕೇಡ್‌ಗಳು ಮುರಿದು ಹೋಗಿದ್ದರಿಂದ. ವಿಶೇಷವಾಗಿ ಎಲ್ಲಾ ಮಕ್ಕಳು ಉಸಿರುಗಟ್ಟಲು ಪ್ರಾರಂಭಿಸಿದ್ದರಿಂದ ಭದ್ರತೆ ದೃಷ್ಟಿಯಿಂದ ಕಾರ್ಯಕ್ರಮ ಹಿಂತೆಗೆದುಕೊಳ್ಳಲಾಯಿತು. ಉತ್ತಮ ಭದ್ರತಾ ವ್ಯವಸ್ಥೆಗಳೊಂದಿಗೆ ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ" ಎಂದು ಬರೆದಿದ್ದಾರೆ.

kichcha-sudeep-apologises-his-fans

ಕಿಚ್ಚ ಸುದೀಪ್ ಮುಂಬರುವ ಸಿನಿಮಾಗಳು

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವು ಸಿನಿಮಾಗಳು ಘೋಷಣೆಯಾಗಿವೆ. ಒಂಬತ್ತು ವರ್ಷಗಳ ನಂತರ ಮತ್ತೆ ನಿರ್ದೇಶಕನ ಕ್ಯಾಪ್ ತೊಡಲು ನಟ ಸಿದ್ಧರಾಗಿದ್ದಾರೆ. ಕೆಆರ್‌ಜಿ ಸ್ಟುಡಿಯೋ ನಿರ್ಮಿಸುತ್ತಿರುವ ಸಿನಿಮಾಗೆ ಕಿಚ್ಚ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕುತೂಹಲ ಕೆರಳಿಸಲು ಈಗಾಗಲೇ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಇದರ ಜೊತೆಗೆ 'ಮ್ಯಾಕ್ಸ್' ನಿರ್ಮಾಪಕರು ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಇನ್ನು, ಮಗಧೀರ, ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಕಥೆಗಾರ ವಿ .ವಿಜಯೇಂದ್ರ ಪ್ರಸಾದ್ ಅವರು ನಿರ್ದೇಶಕ ಆರ್ ಚಂದ್ರು ಅವರ ಆರ್.ಸಿ ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯಲಿದ್ದು, ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಆರ್. ಚಂದ್ರು ನಿರ್ದೇಶನವಿರಲಿದೆ.

More from Filmibeat

English summary
Kichcha Sudeep apologises his fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X