ಸುದೀಪ್ ಬರ್ತಡೇಗೆ ಸಿಕ್ಕಿರುವ ಭರ್ಜರಿ ಉಡುಗೊರೆಗಳು

By Bharath Kumar

Recommended Video

ಕಿಚ್ಚನ ಹುಟ್ಟುಹಬ್ಬಕ್ಕೆ ಸಿಕ್ಕ ಸೂಪರ್ ಗಿಫ್ಟ್ ಇವು..! | Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ಜೊತೆ ತಮ್ಮ 45ನೇ ಜನುಮದಿನವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ಆಚರಣೆ ಜೋರಾಗಿದ್ದು, ಕಿಚ್ಚನ ಮನೆಮುಂದೆ ಅಭಿಮಾನಿಗಳ ಸಾಗರವೇ ಸೇರಿದೆ. ಅಭಿಮಾನಿಗಳನ್ನ ನಿಯಂತ್ರಿಸಲು ಕಷ್ಟವಾದಾಗ ಪೊಲೀಸರು ಲಘು ಲಾಠಿ ಪ್ರಹಾರ ಕೂಡ ಮಾಡಬೇಕಾಯಿತು.

ಈ ವಿಶೇಷ ದಿನ ಪ್ರಯುಕ್ತ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಭರ್ಜರಿ ಉಡುಗೊರೆಗಳನ್ನ ನೀಡಿದೆ. ಸುದೀಪ್ ಅಭಿನಯಿಸುತ್ತಿರುವ ಹೊಸ ಹೊಸ ಸಿನಿಮಾಗಳ ಟೀಸರ್, ಪೋಸ್ಟರ್ ಹಾಗೂ ಫಸ್ಟ್ ಲುಕ್ ಬಹಿರಂಗವಾಗಿದೆ.

ಒಂದಕ್ಕಿಂತ ಮತ್ತೊಂದು ಟೀಸರ್, ಪೋಸ್ಟರ್ ವಿಭಿನ್ನವಾಗಿ ವಿಶೇಷವಾಗಿದೆ. ಕಿಚ್ಚನ ಅಭಿಮಾನಿಗಳಂತೂ ಫುಲ್ ಥ್ರಿಲ್ ಆಗಿದ್ದಾರೆ. ಹಾಗಿದ್ರೆ, ಕಿಚ್ಚನ ಹುಟ್ಟುಹಬ್ಬದ ವಿಶೇಷವಾಗಿ ಯಾವೆಲ್ಲ ಉಡುಗೊರೆಗಳು ಸಿಕ್ಕಿವೆ, ಯಾವುದು ಹೇಗಿದೆ ಎಂಬುದನ್ನ ತಿಳಿಯಲು ಮುಂದೆ ಓದಿ....

'ಪೈಲ್ವಾನ್' ಟೀಸರ್

'ಪೈಲ್ವಾನ್' ಟೀಸರ್

ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡುತ್ತಿರುವ 'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ರೀತಿ ಪಾತ್ರದಲ್ಲಿ ಸುದೀಪ್ ಅವರನ್ನ ಈ ಹಿಂದೆ ನೋಡಿರಲಿಲ್ಲ. ಇದೀಗ, ಪೈಲ್ವಾನ್ ಟೀಸರ್ ರಿಲೀಸ್ ಆಗಿದ್ದು, ಸುದೀಪ್ ಅವರ ಲುಕ್, ಗೆಟಪ್, ಅವರ ಹಾರ್ಡ್ ವರ್ಕ್ ಎಲ್ಲವೂ ಚಿಂದಿ ಎನಿಸುತ್ತಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಪೈಲ್ವಾನ್ ಭರ್ಜರಿ ಗಿಫ್ಟ್.

ಬಾಲಿವುಡ್ ಮಾದರಿಯಲ್ಲಿ 'ಕೋಟಿಗೊಬ್ಬ'

ಬಾಲಿವುಡ್ ಮಾದರಿಯಲ್ಲಿ 'ಕೋಟಿಗೊಬ್ಬ'

ಬಾಲಿವುಡ್ ನಲ್ಲಿ ಧೂಮ್, ಕ್ರಿಶ್, ಅಂತಹ ಸಿನಿಮಾಗಳಲ್ಲಿ ನೋಡಿ ನಮ್ಮಲ್ಲೂ ಈ ರೀತಿಯ ಚಿತ್ರಗಳು ಬರಬೇಕು ಎಂದುಕೊಂಡಿದ್ದ ಪ್ರೇಕ್ಷಕರಿಗೆ ಕೋಟಿಗೊಬ್ಬ 3 ಪಕ್ಕಾ ಟ್ರೀಟ್. ಅದು ಸುದೀಪ್ ಬರ್ತಡೇ ಸ್ಪೆಷಲ್ ರಿಲೀಸ್ ಆಗಿರುವ ಟೀಸರ್ ಪ್ರೂವ್ ಮಾಡಿದೆ. ಇನ್ನು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ.

ಸೈರಾ ನರಸಿಂಹ ರೆಡ್ಡಿಯ ಖಡಕ್ ರಾಜ

ಸೈರಾ ನರಸಿಂಹ ರೆಡ್ಡಿಯ ಖಡಕ್ ರಾಜ

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ರಾಜನಾಗಿ ಅಭಿನಯಿಸುತ್ತಿದ್ದಾರೆ. ಆದ್ರೆ, ಇದುವರೆಗೂ ಸುದೀಪ್ ಅವರ ಲುಕ್ ಬಹಿರಂಗವಾಗಿರಲಿಲ್ಲ. ಇದೀಗ, ಕಿಚ್ಚನ ಜನುಮದಿನದ ವಿಶೇಷವಾಗಿ ಸುದೀಪ್ ಫಸ್ಟ್ ಲುಕ್ ರಿವಿಲ್ ಆಗಿದೆ. ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಡ್ರೆಸ್ ನಲ್ಲಿ ಕಿಚ್ಚನ ಲುಕ್ ಕಿಲ್ಲಿಂಗ್ ಎನಿಸುತ್ತಿದೆ.

ಅಂಬಿಯ ಕ್ಲಾಸ್ ಸುದೀಪ್

ಅಂಬಿಯ ಕ್ಲಾಸ್ ಸುದೀಪ್

ಇನ್ನು ಅಂಬರೀಶ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ಪಾತ್ರ ನರ್ವಹಿಸುತ್ತಿರುವ ಸುದೀಪ್ ತುಂಬಾ ಕ್ಲಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ಸುದೀಪ್ ಅವರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

'ದಿ ವಿಲನ್' ಕಡೆಯಿಂದ ಸಿನಿಮಾನೇ ಗಿಫ್ಟ್

'ದಿ ವಿಲನ್' ಕಡೆಯಿಂದ ಸಿನಿಮಾನೇ ಗಿಫ್ಟ್

ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಸಿನಿಮಾದಿಂದ ಯಾವುದೇ ವಿಶೇಷ ಉಡುಗೊರೆ ನೀಡಿಲ್ಲ. ಆದ್ರೆ, ಇದೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ಕಿಚ್ಚನ ಅಭಿಮಾನಿಗಳ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಲಿದ್ದಾರೆ.

More from Filmibeat

English summary
Kannada Actor Kiccha Sudeep celebrates his 45th Birthday with fans. pailwan movie teaser, kotigobba 3 movie teaser, ambi ning vayassaytho movie poster, sye raa narasimha reddy movie poster are released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X