Sudeep Birthday: ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಹಾಡಿನ ಉಡುಗೊರೆ ನೀಡಲಿದೆ ರಾಜಸ್ಥಾನ್ ರಾಯಲ್ಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳು ಸುದೀಪ್ ಅವರ ಜನ್ಮದಿನವನ್ನು ಆಚರಿಸಲು ತುದಿಗಾಲಿನಲ್ಲಿ ನಿಂತಿದ್ದು, ಸೆಪ್ಟೆಂಬರ್ 2 ರಂದು ನಡೆಯಲಿರುವ ಹುಟ್ಟಹಬ್ಬಕ್ಕೆ ಟ್ವಿಟರ್‌ನಲ್ಲಿ ಈಗಾಗಲೇ ಹಲವು ಶುಭಕೋರುವ ಪೋಸ್ಟರ್‌ಗಳು ರಾರಾಜಿಸುತ್ತಿವೆ.

ಸುದೀಪ್ ಸಿನಿಮಾದಷ್ಟೇ ಪ್ರೀತಿಸುವುದು ಕ್ರಿಕೆಟ್ ಆಟವನ್ನು. ಭಾರತೀಯ ಕ್ರಿಕೆಟಿಗರೊಂದಿಗೆ ಹಲವು ಬಾರಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನ ಹಿಂದಿನ ಆವೃತ್ತಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ಅನ್ನು ಪ್ರತಿನಿಧಿಸಿರುವ ಪೈಲ್ವಾನ್ ಉತ್ತಮ ಬ್ಯಾಟ್ಸ್‌ಮನ್ ಎಂದು ಹೆಸರು ಗಳಿಸಿದ್ದಾರೆ.

Sudeep Birthday: Rajasthan Royals To Release Tribute Song

ವಿಶೇಷ ಗಿಫ್ಟ್ ಕೊಡಲಿದೆ ರಾಜಸ್ಥಾನ ರಾಯಲ್ಸ್!

ಕರುನಾಡಿನ ಕಿಚ್ಚನ ಹುಟ್ಟುಹಬ್ಬಕ್ಕೆ ಪ್ರತಿವರ್ಷದಂತೆ ಈ ವರ್ಷವೂ ರಾಜಸ್ಥಾನ ರಾಯಲ್ಸ್ ವಿಶೇಷ ಉಡುಗೊರೆ ನೀಡಲಿದೆ. ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಪ್ರತಿ ಬಾರಿಯೂ ಹೊಸ ರೀತಿಯಲ್ಲಿ ಉಡುಗೊರೆ ನೀಡುವ ತಂಡ ಈ ಬಾರಿಯೂ ಅದನ್ನು ಮುಂದುವರೆಸಲಿದೆ.

ಕಿಚ್ಚನ ಮೇಲೆ ಒಲವಿಟ್ಟುಕೊಂಡಿರುವ ಐಪಿಎಲ್‌ನ ಉದ್ಘಾಟನಾ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್, ಫ್ರಾಂಚೈಸಿಯ ನಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಸಂಜು ಸ್ಯಾಮ್ಸನ್ ಜೊತೆಗೆ ಸುದೀಪ್ ಪೋಸ್ ನೀಡಿರುವ ಹಳೆಯ ಚಿತ್ರವನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ಇದರ ಜೊತೆಗೆ ವಿಶೇಷ ಪ್ರಕಟಣೆಯೊಂದಿಗೆ ಸೇರಿದೆ. "ಕಿಂಗ್ ಕಿಚ್ಚ ದಿ ಬ್ರಾಂಡ್‌" ಎಂಬ ಸ್ಪೆಷಲ್ ಹಾಡನ್ನು ರಾಜಸ್ಥಾನ ಫ್ರಾಂಚೈಸಿಯ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.

ಫೋಟೋ ವಿಷಯಕ್ಕೆ ಬರುವುದಾದರೇ ಕಿಚ್ಚ ಸುದೀಪ್ ಮತ್ತು ಸಂಜು ಸ್ಯಾಮ್ಸನ್ ಜನವರಿಯಲ್ಲಿ ಭೇಟಿಯಾಗಿದ್ದರು. ಶ್ರೀಲಂಕಾದಲ್ಲಿ ಟಿ 20 ಸರಣಿಯ ವೇಳೆ ಸಂಜು ಸ್ಯಾಮ್ಸನ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದ ಕಾರಣ ಅವರನ್ನು ಸುದೀಪ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಭೇಟಿಯಾಗಿದ್ದರು. ಇನ್ನು ರಾಜಸ್ಥಾನ್ ರಾಯಲ್ಸ್ ಕ್ಯಾಪ್ಟನ್, ತಮ್ಮ ಸಹ ಆಟಗಾರ ಕೆಸಿ ಕಾರ್ಯಪ್ಪ ಅವರೊಂದಿಗೆ ಡಿನ್ನರ್ ಪಾರ್ಟಿಯಲ್ಲಿ ಸುದೀಪ್ ಜೊತೆಗೂಡಿ ಸ್ವಲ್ಪ ಸಮಯ ಕಳೆದಿದ್ದರು.

Sudeep Birthday: Rajasthan Royals To Release Tribute Song

"ಕಿಂಗ್ ಕಿಚ್ಚ ದಿ ಬ್ರಾಂಡ್"

ರಾಜಸ್ಥಾನ್ ರಾಯಲ್ಸ್ ಬಿಟುಗಡೆ ಮಾಡುತ್ತಿರುವ 'ಕಿಂಗ್ ಕಿಚ್ಚ ದಿ ಬ್ರಾಂಡ್' ಕುರಿತು ಹೇಳುವುದಾದರೆ, ಎ2 ಎಂಟರ್‌ಟೈನ್‌ಮೆಂಟ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈಗಾಗಲೇ ಹಾಡಿನ ಟೀಸರ್ ಅನ್ನು ಬಿಡಲಾಗಿದೆ. ಇದು ಅಭಿಮಾನಿಗಳೇ ನಿರ್ಮಿಸಿರುವ ಹಾಡಾಗಿದ್ದು, ಕನ್ನಡ ಚಿತ್ರರಂಗಕ್ಕೆ ಕಿಚ್ಚ ಸುದೀಪ್ ಅವರು ನೀಡಿರುವ ಅಪಾರ ಕೊಡುಗೆಯನ್ನು ಒತ್ತಿಹೇಳುತ್ತದೆ.

ಗಾಯಕರಾದ ಶಿವಾನಿ ನವೀನ್, ಪ್ರೈಡ್ ಮತ್ತು ಯಶ್ ಐ ಕೆ ಹಾಡಿಗೆ ಧ್ವನಿ ನೀಡಿದ್ದಾರೆ. ಬೀಟ್ ಬೋಯಿ ತೌಸಿಫ್ (Beat Boi Tousif ) ರಾಗ ಸಂಯೋಜಿಸಿದ್ದಾರೆ. ಪ್ರೈಡ್ ಹಾಡುವ ಜೊತೆಗೆ ಸಾಹಿತ್ಯ ಬರೆದಿದ್ದಾರೆ. ಕಿಚ್ಚನ ಅಭಿಮಾನಿಗಳ ಮಾಹಿತಿ ಪ್ರಕಾರ, ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ನಟ ಡಾ. ಶಿವ ರಾಜ್‌ಕುಮಾರ್ ಉಪಸ್ಥಿತರಿರುತ್ತಾರೆ.

ಕಳೆದ ವರ್ಷ ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡದ ಓಪನರ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರು ಕಿಚ್ಚ ಸುದೀಪ್‌ಗೆ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. 2022ರ ಐಪಿಎಲ್‌ನಲ್ಲಿ ತಾವು ಆಡಿದ್ದ ಬ್ಯಾಟ್‌ನಲ್ಲಿ ಜೋಸ್ ಬಟ್ಲರ್ ಸಹಿ ಹಾಕಿ ಸುದೀಪ್‌ಗೆ ಗಿಫ್ಟ್ ನೀಡಿದ್ದರು. ಸುದೀಪ್ ಈ ಕುರಿತಾಗಿ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದರು.

More from Filmibeat

English summary
Sudeep Birthday: Rajasthan Royals To Release Tribute Song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X