ನಟಿ ಐಂದ್ರಿತಾ ರೇಗೆ ಶುಭಕೋರಿದ ಕಿಚ್ಚ ಸುದೀಪ್
ಸ್ಯಾಂಡಲ್ ವುಡ್ ನ ನಟಿ ಐಂದ್ರಿತಾ ರೇಗೆ ಹುಟ್ಟುಹಬ್ಬದ ಸಂಭ್ರಮ. 35ನೇ ವಸಂತಕ್ಕೆ ಕಾಲಿಟ್ಟ ನಟಿ ಐಂದ್ರಿತಾ ಲಾಕ್ ಡೌನ್ ಪರಿಣಾಮ ಮನೆಯಲ್ಲಿಯೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟಿ ಐಂದ್ರಿತಾಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರುತ್ತಿದ್ದಾರೆ.
Recommended Video
ಕೊರೊನಾ ಲಾಕ್ ಡೌನ್ ಪರಿಣಾಮ ಈ ಬಾರಿಯ ಹುಟ್ಟುಹಬ್ಬ ಆಡಂಬರ, ಅದ್ದೂರಿತನವಿಲ್ಲ. ಐಂದ್ರಿತಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ಶುಭಾಶಯಕೋರಿದ್ದಾರೆ. ಟ್ವಿಟ್ಟರ್ ನಲ್ಲಿ ವಿಶ್ ಮಾಡಿರುವ ಕಿಚ್ಚ, "ಹುಟ್ಟುಹಬ್ಬದ ಶುಭಾಶಯಗಳು. ಯಾವಾಗಲು ನಗುತ್ತಿರಿ. ದಿಗಂತ್ ಅವರಿಗೂ ನನ್ನ ಪ್ರೀತಿ" ಎಂದು ಹೇಳಿದ್ದಾರೆ.
ನಟಿ ಐಂದ್ರಿತಾ ರೇ ಮತ್ತು ಕಿಚ್ಚ ಸುದೀಪ್ ವೀರಪರಂಪರೆ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಸಹ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ಇನ್ನೂ ಪತ್ನಿಯ ಹುಟ್ಟುಹಬ್ಬಕ್ಕೆ ನಟ ದಿಗಂತ್ ಕೂಡ ಪ್ರೀತಿಯ ವಿಶ್ ಮಾಡಿದ್ದಾರೆ.
ಐಂದ್ರಿತಾ ಜೊತೆಗಿನ ಮದುವೆ ಫೋಟೋ ಶೇರ್ ಮಾಡಿ "ಕ್ವಾರಂಟೈನ್ ಹುಟ್ಟುಹಬ್ಬಕ್ಕೆ ಶುಭಾಶಯಗಳು" ಎಂದು ಹೇಳಿದ್ದಾರೆ.
ನಟಿ ಐಂದ್ರಿತಾ ರೇ ಕನ್ನಡ ಅಭಿಮಾನಿಗಳ ಮುಂದೆ ಬರದೆ ವರ್ಷಗಳೆ ಆಗಿವೆ. ಚೌಕ ಸಿನಿಮಾದ ನಂತರ ಐಂದ್ರಿತಾ ಮತ್ತೆ ತೆರೆಮೇಲೆ ಬಂದಿಲ್ಲ. ರ್ಯಾಂಬೊ-2 ಸಿನಿಮಾದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದ ಐಂದ್ರಿತಾ, ನಂತರ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕನ್ನಡದಲ್ಲಿ ಗರುಡ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜೊತೆಗೆ ನೆನಪಿರಲಿ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ದಿಗಂತ್ ಜೊತೆ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


Click it and Unblock the Notifications











