ಹುಟ್ಟುಹಬ್ಬಕ್ಕೆ ಶುಭ ಕೋರಿದ ಕಿಚ್ಚನಿಗೆ 'ಲವ್ ಯೂ ಕೆ' ಎಂದ ರಕ್ಷಿತಾ

ಲಾಕ್ ಡೌನ್ ನಡುವೆಯೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ರಕ್ಷಿತಾಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಅಭಿಮಾನಿಗಳ ಜೊತೆಗೆ ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ವಿಶ್ ಮಾಡುತ್ತಿದ್ದಾರೆ. ಈ ಭಾರಿ ರಕ್ಷಿತಾ ಮನೆಯಲ್ಲಿಯೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Recommended Video

ಕುತೂಹಲ ಮೂಡಿಸಿದೆ ತಲೈವಿ ಚಿತ್ರದ ಪಾತ್ರಗಳ ಆಯ್ಕೆ | FILMIBEAT KANNDA

ಪತಿ ಪ್ರೇಮ್ ವಿಶೇಷವಾಗಿ ತಯಾರಿಸಿದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಚಿತ್ರರಂಗದಿಂದ ರಕ್ಷಿತಾಗೆ ಗೆಳತಿ ರಚಿತಾ ರಾಮ್ ಶುಭಹಾರೈಸಿದ್ದಾರೆ. ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ವಿಶ್ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇಡೀ ಸಿಟಿ ಮೌನವಾಗಿದೆ. ಆದರೆ ರಕ್ಷಿತಾ ಇರುವಾಗ ಪ್ರೇಮ್ ಗೆ ಸೈಲೆನ್ಸ್ ಅನುಭವವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ..

ಕ್ರೇಜಿ ಕ್ವೀನ್ ಗೆ ಸುದೀಪ್ ವಿಶ್

ಲಾಕ್ ಡೌನ್ ನಡುವೆಯೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಕ್ಷಿತಾಗೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವ ಸುದೀಪ್ "ಗೆಳತಿ ರಕ್ಷಿತಾ ದೇವರು ನಿನಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ. ಈ ಸಮಯದಲ್ಲಿ ಇಡೀ ನಗರ ಶಾಂತವಾಗಿದ್ದರೂ, ನೀನು ಇರುವಾಗ ಈ ಮೌನವನ್ನು ಪ್ರೇಮ್ ಎಂದಿಗೂ ಅನುಭವಿಸಲು ಸಾಧ್ಯವಿಲ್ಲ ಎಂದು ನನಗೆ ಗೊತ್ತಿದೆ. ಅದ್ಭುತವಾದ ದಿನ ನಿಮ್ಮದಾಗಲಿ. ಹುಟ್ಟುಹಬ್ಬ ಶುಭಾಶಯಗಳು" ಎಂದು ವಿಶ್ ಮಾಡಿದ್ದಾರೆ.

ಸುದೀಪ್ ಗೆ ಲವ್ ಯೂ ಕೆ ಎಂದ ರಕ್ಷಿತಾ

ಹುಟ್ಟುಹಬ್ಬಕ್ಕೆ ಶುಭಕೋರಿದ ಸುದೀಪ್ ಗೆ ರಕ್ಷಿತಾ ಪ್ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಕಿಚ್ಚನಿಗೆ ಪ್ರೀತಿಯಿಂದ 'ಕೆ' ಎಂದು ಕರೆಯುವ ಕ್ರೇಜಿ ಕ್ವೀನ್ "ಲವ್ ಯೂ ಕೆ. ನೀವು ತುಂಬ ಕೈಂಡೆಸ್ಟ್ ಮತ್ತು ಸ್ವೀಟೆಸ್ಟ್ ವ್ಯಕ್ತಿ. ಯಾವಾಗಲು ನನ್ನ ಪರ ಇರುವುದಕ್ಕೆ ದನ್ಯವಾದಗಳು. ಪ್ರೀಯಾ ಮತ್ತು ಸಾನುಗೆ ನನ್ನ ಪ್ರೀತಿ ಹೇಳಿ" ಎಂದು ಹೇಳಿದ್ದಾರೆ.

ಸುದೀಪ್ ಮತ್ತು ರಕ್ಷಿತಾ ಇಬ್ಬರು ಉತ್ತಮ ಸ್ನೇಹಿತರು

ಸುದೀಪ್ ಮತ್ತು ರಕ್ಷಿತಾ ಇಬ್ಬರು ಉತ್ತಮ ಸ್ನೇಹಿತರು

ನಟಿ ರಕ್ಷಿತಾ ಚಿತ್ರರಂಗದಲ್ಲಿ ಉತ್ತಮ ಸ್ನೇಹವನ್ನು ಸಂಪಾದಿಸಿದ್ದಾರೆ. ಅನೇಕರ ಜೊತೆ ಉತ್ತಮ ಬಾಂಧವ್ಯವಿಟ್ಟುಕೊಂಡಿರುವ ರಕ್ಷಿತಾ ಸುದೀಪ್ ಮತ್ತು ದರ್ಶನ್ ಇಬ್ಬರು ವಿಶೇಷವಾದ ಗೆಳೆಯರು. ಸುದೀಪ್ ಜೊತೆ ರಕ್ಷಿತಾ ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಿಗೆ ಅಭಿನಯಿಸಿದ ಸಿನಿಮಾ ಕಮ್ಮಿ ಆದರೂ ಇಬ್ಬರ ಸ್ನೇಹ ಸಂಬಂಧ ಗಟ್ಟಿಯಾಗಿದೆ. 2002ರಲ್ಲಿ ರಿಲೀಸ್ ಆದ ಧಮ್ ಸಿನಿಮಾದಲ್ಲಿ ರಕ್ಷಿತಾ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಸುದೀಪ್ ಜೊತೆ ತೆರೆಹಂಚಿಕೊಳ್ಳುತ್ತಾರೆ. ಆನಂತರ ಕಾಶಿ ಮತ್ತು ಹೆಬ್ಬುಲಿ ಸಿನಿಮಾದಲ್ಲಿ ಒಟ್ಟಿಗೆ ಇಬ್ಬರು ಅಭಿನಯಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ.

ರಕ್ಷಿತಾಗೆ ರಚಿತಾ ರಾಮ್ ವಿಶ್

ರಕ್ಷಿತಾಗೆ ರಚಿತಾ ರಾಮ್ ವಿಶ್

ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿರುವ ರಚಿತಾ "ನಿಮ್ಮ ಎಲ್ಲಾ ಆಸೆಗಳು ಈಡೇರಲಿ ಎಂದು ಶುಭ ಕೋರುತ್ತೇನೆ. ಹುಟ್ಟುಹಬ್ಬ ಶುಭಾಶಯಗಳು ನನ್ನ ಪ್ರೀತಿಯ ರಾಕ್ಸ್. ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದು ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಇಬ್ಬರು ಫೋಟೋವನ್ನು ಶೇರ್ ಮಾಡಿದ್ದಾರೆ.

More from Filmibeat

English summary
Kannada Actor Sudeep birthday wishes to Actress Rakshitha. Rakshitha celebrating her 36th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X