ಪ್ರೀತಿಯ ಅಪ್ಪನ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಶುಭಕೋರಿದ್ದು ಹೀಗೆ
ಕಿಚ್ಚ ಸುದೀಪ್ ರವರ ತಂದೆ ಸಂಜೀವ್ ಮಂಜಪ್ಪ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಪ್ರಯುಕ್ತ ಪ್ರೀತಿಯ ಅಪ್ಪನಿಗೆ ಪುತ್ರ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಸದ್ಯ ಮನೆಯಿಂದ ಹೊರಗಿರುವ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ.
"ನನ್ನ ಮಾರ್ಗದರ್ಶಿ, ನನ್ನ ಶಕ್ತಿ, ನನ್ನ ಬೋಧಕ, ನನ್ನ ಹೀರೋಗೆ ಹುಟ್ಟುಹಬ್ಬದ ಶುಭಾಶಯಗಳು. ಸದಾ ನಿಮ್ಮ ನೆರಳಿನಲ್ಲೇ ಇರೋದು ನನಗೆ ತುಂಬಾ ಖುಷಿ ಕೊಡುತ್ತದೆ. ಲವ್ ಯೂ" ಎಂದು ಟ್ವಿಟ್ಟರ್ ನಲ್ಲಿ ಶುಭಾಶಯತಿಳಿಸಿದ್ದಾರೆ. ಅಪ್ಪನ ಜೊತೆ ಇರುವ ಮುದ್ದಾದ ಫೋಟೋವನ್ನು ಶೇರ್ ಮಾಡಿದ್ದಾರೆ. ಸುದೀಪ್ ತಂದೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಹ ವಿಶ್ ಮಾಡುತ್ತಿದ್ದಾರೆ.
ಅಂದ್ಹಾಗೆ, ಸುದೀಪ್ ತಂದೆ ಸಂಜೀವ್ ಮಂಜಪ್ಪ ಶಿವಮೊಗ್ಗ ಮೂಲದವರು. ಶಿವಮೊಗ್ಗದಿಂದ ಬೆಂಗಳೂರಿಗೆ ಬಂದ ಸಂಜೀವ್, 'ಸರೋವರ' ಎಂಬ ಹೋಟೆಲ್ ಶುರು ಮಾಡಿದರು. ಹೋಟೆಲ್ ಉದ್ಯಮದಲ್ಲಿ ಸಾಧನೆ ಮಾಡಿರುವ ತಂದೆ ಸಂಜೀವ್ ಅವರೇ ಪುತ್ರ ಸುದೀಪ್ ಗೆ ಸ್ಫೂರ್ತಿಯ ಚಿಲುಮೆ.

ಸುದೀಪ್ ಸದ್ಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಜುಲೈ 16ರಿಂದ ಫ್ಯಾಂಟಮ್ ತಂಡ ಚಿತ್ರೀಕರಣ ಪ್ರಾರಂಭಮಾಡಿದೆ. ಕೊರೊನಾ ವೈರಸ್ ಹಾವಳಿಯ ನಡುವೆಯೂ ಸಿನಿಮಾತಂಡ ಚಿತ್ರೀಕರಣ ಪ್ರಾರಂಭವಾಗಿದೆ. ಈ ಮೂಲಕ ಕೊರೊನಾ ಬಳಿಕ ಶೂಟಿಂಗ್ ಪ್ರಾರಂಭಮಾಡಿದ ಮೊದಲ ಸಿನಿಮಾ ಇದಾಗಿದೆ. ಹೈದರಬಾದ್ ನ ಅನ್ನಪೂರ್ಣ ಸ್ಟೂಡಿಯೊದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.


Click it and Unblock the Notifications











