ಕನ್ನಡ ತಮಿಳು ತೆಲುಗಿನಲ್ಲಿ ಕಿಚ್ಚ ಮಿಂಚಿಂಗೋ ಮಿಂಚಿಂಗು
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ವರ್ಷವಿಡೀ ತೆರೆಯ ಮೇಲೆ ರಾರಾಜಿಸಲಿದ್ದಾರೆ. ಕಿಚ್ಚನ ರಂಗು ರಂಗಾದ ಆ ಐದು ಸಿನಿಮಾಗಳು ಒಂದಕ್ಕಿಂತ ಮತ್ತೊಂದು ವಿಭಿನ್ನ ವಿಶಿಷ್ಟ. ಈ ಒಂದಿಡೀ ವರ್ಷ ಕಿಚ್ಚ ಸುದೀಪ್ ತೆರೆಯಲ್ಲಿ ಬೇರೆಲ್ಲಾ ತಾರೆಯರಿಗಿಂತ ಹೆಚ್ಚು ಶೈನ್ ಆಗಲಿದ್ದಾರೆ.
ಕಿಚ್ಚನ ಆರ್ಭಟ ತೆಲುಗು ಮತ್ತು ತಮಿಳು ಚಿತ್ರರಂಗವನ್ನ ಮೂರು ವರ್ಷಗಳ ನಂತ್ರ ಮತ್ತೆ ವ್ಯಾಪಿಸಲಿದೆ. ಈ ಹಿಂದೆ 'ಈಗ' ಸಿನಿಮಾ ಮೂಲಕ ತೆಲುಗಿನಲ್ಲಿ, ಅದ್ರ ರೀಮೇಕ್ ಮೂಲಕ ತಮಿಳಲ್ಲಿ ಹುಚ್ಚೆಬ್ಬಿಸಿದ್ದ ಕಿಚ್ಚನಿಗೆ ಈ ವರ್ಷ ಮತ್ತೊಂದು ಹಬ್ಬ. ಈ ವರ್ಷವೂ ಅವರು ತೆಲುಗು ಮತ್ತು ತಮಿಳಿನಲ್ಲಿ ಬಾಹುಬಲಿ ಮತ್ತು ಪುಲಿ ಚಿತ್ರಗಳಲ್ಲಿ ಮಿಂಚಲಿದ್ದಾರೆ.
ರಚಿತಾ ರಾಮ್ ಮತ್ತು ಹರಿಪ್ರಿಯಾ ನಾಯಕಿಯರಾಗಿರುವ ಕಿಚ್ಚನ 'ರನ್ನ' ಕನ್ನಡದಲ್ಲಿ ತೆರೆಗೆ ಬರೋಕೆ ಒಂದು ದಿನವಷ್ಟೇ ಬಾಕಿ. ಇದೂ ಕೂಡ ತೆಲುಗಿನ ಸೂಪರ್ ಹಿಟ್ ಚಿತ್ರ ಅತ್ತಾರಿಂಟಿಕಿ ದಾರೇದಿ ಚಿತ್ರದ ರೀಮೇಕ್. ಒಂದಾದ ನಂತರ ಮತ್ತೊಂದರಂತೆ ಈ ವರ್ಷ ತೆರೆಯಲ್ಲಿ ರಾರಾಜಿಸೋ ಕಿಚ್ಚನ ಸಿನಿಮಾಗಳು ಯಾವ್ದು ಅನ್ನೋ ಮಾಹಿತಿ ಈ ಸ್ಲೈಡ್ನಲ್ಲಿದೆ... ['ರನ್ನ' ಸುದೀಪ್ ಜತೆ ನಟಿಸಿದ ಖುಷಿಯಲಿ ಆನಂದಭಾಷ್ಪ]

ಬಾಹುಬಲಿಯ ಅಸ್ಲಂ ಖಾನ್
ಭಾರತೀಯ ಚಿತ್ರರಂಗವೇ ಕುತೂಹಲದಿಂದ ನೋಡ್ತಾ ಇರೋ ಬಾಹುಬಲಿ ಚಿತ್ರದಲ್ಲಿ ಅಸ್ಲಂಖಾನ್ ಆಗಿ ಕಿಚ್ಚ ಮಿಂಚಲಿದ್ದಾರೆ. ಸಣ್ಣ ಪಾತ್ರವಾದ್ರೂ ಕೊಟ್ಟಪಾತ್ರದಲ್ಲೇ ಖದರ್ ತೋರಿಸೋದು ಕಿಚ್ಚನ ತಾಕತ್ತು.

ವಿಜಯ್ ಜೊತೆಗೆ ಪುಲಿ
ತಮಿಳಿನ ಇಳೆಯದಳಪತಿ ವಿಜಯ್ ಅಭಿನಯದ ಪುಲಿ ಸಿನಿಮಾ ಮೂಲಕ ಕಿಚ್ಚ ಸುದೀಪ್ ಕಾಲಿವುಡ್ನಲ್ಲಿ ಕಿಕ್ ಏರಿಸಲಿದ್ದಾರೆ. ಸುದೀಪ್ ಸಿನಿಮಾಗಳ ಬಗ್ಗೆ ತಮಿಳಿನಲ್ಲೂ ನಿರೀಕ್ಷೆ ಇದೆ. ಇನ್ನು ಸುದೀಪ್ಗೆ ದೊಡ್ಡ ಸಂಭಾವನೆ ಕೊಟ್ಟು ಪುಲಿ ಚಿತ್ರದಲ್ಲಿ ಮುಖ್ಯಪಾತ್ರ ಕೂಡ ನೀಡಲಾಗಿದೆ.

ರವಿಮಾಮನ ಜೊತೆ ಅಪೂರ್ವ
ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ರವಿಮಾಮನ ಮೂಲಕ ಮತ್ತೆ ಕಿಚ್ಚ ಸುದೀಪ್ ಮತ್ತೊಮ್ಮೆ ರವಿಚಂದ್ರನ್ ಜೊತೆ ಅಭಿನಯಿಸಲಿದ್ದಾರೆ. ಉಳಿದ ನಟರಿಗೆ ಹಾಡಿನಲ್ಲಿ ಮಾತ್ರ ಎಂಟ್ರಿ ಇದ್ರೆ ಕಿಚ್ಚ ಇಲ್ಲೊಂದು ಗೆಸ್ಟ್ ರೋಲ್ ಮಾಡಿದ್ದಾರೆ.

ರನ್ನನಾಗಿ ರಂಗೀನ್ ಎಂಟ್ರಿ
ಸದ್ಯ ಅಭಿಮಾನಿಗಳು ಚಿತ್ರಪ್ರೇಮಿಗಳು ಕಾದಿರೋದು ಕಿಚ್ಚನ ರನ್ನ ಚಿತ್ರಕ್ಕಾಗಿ. ಈಗಾಗ್ಲೇ ಹಾಡುಗಳು ಮತ್ತು ಟ್ರೈಲರ್ ಕಿಕ್ ಕೊಟ್ಟಿದ್ದು ಜೂನ್ 4ಕ್ಕೆ ಬಬ್ಬರ್ ಶೇರ್ ಥಿಯೇಟರ್ಗಿಳಿಯಲಿದ್ದಾನೆ.

ಹೆಬ್ಬುಲಿ, ಕೋಟಿಗೊಬ್ಬ 2?
ಸದ್ಯ ಕಿಚ್ಚನಿಗಾಗಿ ಕಾದಿರೋ ಎರಡು ಚಿತ್ರಗಳಿವು. ಆದ್ರೆ ಯಾವುದನ್ನ ಮೊದಲು ಕೈಗೆತ್ತಿಕೊಳ್ತಾರೋ ಗೊತ್ತಿಲ್ಲ. ಆದ್ರೆ ಈ ಸಿನಿಮಾಗಳು ಈ ವರ್ಷ ತೆರೆಗೆ ಬರೋದು ಅಸಾಧ್ಯದ ಮಾತು.


Click it and Unblock the Notifications











