ಹೈದರಾಬಾದ್ ನಲ್ಲಿ, ಬರಿಗಾಲಿನಲ್ಲಿ ಕನ್ನಡ ಧ್ವಜ ಹಾರಿಸಿದ ಕಿಚ್ಚ
Recommended Video

ಹೈದರಾಬಾದ್ ನಲ್ಲಿ ಬರಿಗಾಲಿನಲ್ಲಿ ಕನ್ನಡದ ಬಾವುಟ ಹಾರಿಸಿದ ಸುದೀಪ್ | FILMIBEAT KANNADA
'ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು' ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತಿನಂತೆ ಪ್ರತಿ ಕನ್ನಡಿಗರು ಇರಬೇಕು. ಈಗ ಅದೇ ರೀತಿ ನಟ ಸುದೀಪ್ ನಡೆದುಕೊಂಡಿದ್ದಾರೆ.
ಇಂದು ಕನ್ನಡ ರಾಜ್ಯೋತ್ಸವವನ್ನು ನಟ ಸುದೀಪ್ ಆಚರಿಸಿದ್ದಾರೆ. ಅದರಲ್ಲಿಯೂ ಈ ವರ್ಷ ಹೈದರಾಬಾದ್ ನಲ್ಲಿ ಕಿಚ್ಚ ಕನ್ನಡ ಧ್ವಜವನ್ನು ಹಾರಿಸಿದ್ದಾರೆ. ಇದು ಎಲ್ಲರ ಮೆಚ್ಚಿಗೆಗೆ ಕಾರಣವಾಗಿದೆ.

ಸುದೀಪ್ ಅವರ 'ಪೈಲ್ವಾನ್' ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಸದ್ಯ ಅದೇ ಕಾರಣಕ್ಕೆ ಸುದೀಪ್ ಅಲ್ಲಿ ಇದ್ದು, ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿಯೇ ಬಾವುಟ ಹಾರಿಸಿ ಕನ್ನಡ ತಾಯಿಗೆ ವಂದಿಸಿದ್ದಾರೆ. ಈ ವೇಳೆ ಇಡೀ ತಂಡ ಸೇರಿಕೊಂಡಿದೆ.

ಬರೀ ಕಾಲಿನಲ್ಲಿ ನಿಂತು ಸುದೀಪ್ ಬಾವುಟಕ್ಕೆ ಕೈ ಮುಗಿಯುತ್ತಿರುವ ಫೋಟೋ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಸುದೀಪ್ ಗೆ ಇರುವ ಕನ್ನಡ ಪ್ರೇಮವನ್ನು ಇದು ತೋರಿಸುತ್ತಿದೆ.
More from Filmibeat
English summary
Kannada actor Sudeep calibrated Kannada Rajyotsava in hyderabad


Click it and Unblock the Notifications











