ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಸುದೀಪ್ ನಟನೆ.!

Recommended Video

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಸುದೀಪ್ ನಟನೆ. | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಪರಭಾಷೆಯ ಸೂಪರ್ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಜೊತೆ ಅಭಿನಯಿಸಿದ್ದಾರೆ. ತೆಲುಗು ಚಿತ್ರದಲ್ಲಿ ಎಸ್ ಎಸ್ ರಾಜಮೌಳಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ವಿಜಯ್ ಚಿತ್ರದಲ್ಲಿ ನಟಿಸಿದ್ದಾರೆ.

ಈಗ ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗೆ, ಭಾರತ ಚಿತ್ರರಂಗದ ಘಟಾನುಘಟಿಗಳ ಜೊತೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಿರುವ ಕಿಚ್ಚ ಸುದೀಪ್, ರಜನಿಕಾಂತ್ ಜೊತೆ ಒಂದು ಸಿನಿಮಾ ಮಾಡಲಿ ಎಂಬ ಆಸೆ ಹೊಂದಿರುವವರು ಸಾಕಷ್ಟು ಜನ ಇದ್ದಾರೆ.

ಈ ಆಸೆ ಅದ್ಯಾವಾಗ ಈಡೇರುತ್ತೋ ಎಂದು ಯೋಚನೆ ಮಾಡುವಷ್ಟರಲ್ಲಿ ಇಲ್ಲೊಂದು ಅಚ್ಚರಿ ವಿಷ್ಯ ಬಹಿರಂಗವಾಗಿದೆ. ಹೌದು, ಸುದೀಪ್ ಈಗಾಗಲೇ ತಲೈವಾ ಜೊತೆ ಸ್ಕ್ರೀನ್ ಶೇರ್ ಮಾಡಿ ಆಗೋಗಿದೆ. ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ, ರಜನಿ ಜೊತೆ ಸುದೀಪ್ ಯಾವಾಗ ಆಕ್ಟ್ ಮಾಡಿದ್ರು.? ಮುಂದೆ ಓದಿ.....

ಸೂಪರ್ ಸ್ಟಾರ್ ಜೊತೆ ಸುದೀಪ್

ಸೂಪರ್ ಸ್ಟಾರ್ ಜೊತೆ ಸುದೀಪ್

ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಶಂಕರ್ ನಿರ್ದೇಶನದಲ್ಲಿ '2.0' ಸಿನಿಮಾ ಮುಗಿಸಿ, 'ಪೆಟ್ಟಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಕಡೆ ಸುದೀಪ್ 'ದಿ ವಿಲನ್' ಸಿನಿಮಾ ಮುಗಿಸಿ, 'ಕೋಟಿಗೊಬ್ಬ 3', 'ಪೈಲ್ವಾನ್' ಹಾಗೂ ತೆಲುಗಿನ 'ಸೈರಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ರಜನಿಕಾಂತ್ ಜೊತೆ ಆಕ್ಟ್ ಮಾಡಿರುವ ಫೋಟೋ ವೈರಲ್ ಆಗಿದೆ.

ಲಿಂಗಾ ಚಿತ್ರದಲ್ಲಿ ಸುದೀಪ್.!

ಲಿಂಗಾ ಚಿತ್ರದಲ್ಲಿ ಸುದೀಪ್.!

ರಜನಿಕಾಂತ್ ಅಭಿನಯಿಸಿದ್ದ 'ಲಿಂಗಾ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದರು. ಹೌದು, 2014ರಲ್ಲಿ ತೆರೆಕಂಡಿದ್ದ 'ಲಿಂಗಾ' ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರ ನಿರ್ವಹಿಸಿದ್ದರು. ಆದ್ರೆ, ದುರಾದೃಷ್ಟವಶಾತ್ ಆ ದೃಶ್ಯವನ್ನ ಚಿತ್ರದಿಂದ ತೆಗೆದು ಹಾಕಲಾಯಿತು.

ಚಿತ್ರಕೃಪೆ: RAJINISTS

ಆಗಲೇ ಸುದ್ದಿಯಾಗಿತ್ತು

ಆಗಲೇ ಸುದ್ದಿಯಾಗಿತ್ತು

ಈ ಸಿನಿಮಾ ಶೂಟಿಂಗ್ ಆಗುತ್ತಿರುವಾಗಲೇ ಸುದೀಪ್ 'ಲಿಂಗಾ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಆಗಿತ್ತು. ಆದ್ರೆ, ಅದನ್ನ ಯಾರೂ ಖಚಿತ ಪಡಿಸಿರಲಿಲ್ಲ. ಬಟ್, ಸಿನಿಮಾ ಸುದೀಪ್ ಬಣ್ಣ ಹಚ್ಚಿದ್ದರು, ನಂತರ ಕಾರಣಾಂತರಗಳಿಂದ ಆ ದೃಶ್ಯವನ್ನ ಡಿಲೀಟ್ ಮಾಡಲಾಗಿತ್ತು. ಇದು ಸುದೀಪ್ ಅಭಿಮಾನಿಗಳಲ್ಲಿ ಬೇಸರ ತಂದಿದೆ.

'ಈಗ' ನೋಡಿ ಮೆಚ್ಚಿಕೊಂಡಿದ್ದ ರಜನಿ

'ಈಗ' ನೋಡಿ ಮೆಚ್ಚಿಕೊಂಡಿದ್ದ ರಜನಿ

ಸುದೀಪ್ ಅಭಿನಯಿಸಿದ್ದ ಈಗ ಸಿನಿಮಾ ನೋಡಿ ರಜನಿಕಾಂತ್ ಫುಲ್ ಖುಷ್ ಆಗಿದ್ದರು. ಸ್ವತಃ ರಜನಿಕಾಂತ್ ಸುದೀಪ್ ಗೆ ಫೋನ್ ಮಾಡಿ, ಹೊಗಳಿದ್ದರು. ಸ್ಟೈಲ್ ಕಿಂಗ್ ಎಂದು ಬಣ್ಣಿಸಿದ್ದರಂತೆ.

ರವಿಕುಮಾರ್ ಜೊತೆ ಸಿನಿಮಾ

ರವಿಕುಮಾರ್ ಜೊತೆ ಸಿನಿಮಾ

'ಲಿಂಗಾ' ಸಿನಿಮಾ ನಿರ್ದೇಶನ ಮಾಡಿದ್ದ ಕೆ ಎಸ್ ರವಿಕುಮಾರ್ ಆಗಲೇ ಸುದೀಪ್ ಅವರನ್ನು ಮೆಚ್ಚಿಕೊಂಡು ವಿಶೇಷ ಪಾತ್ರ ಮಾಡಿಸಿದ್ದರು. ನಂತರ ಆ ದೃಶ್ಯ ಡಿಲೀಟ್ ಆಯ್ತು. ಎರಡು ವರ್ಷಗಳ ಬಳಿಕ ಅದೇ ರವಿಕುಮಾರ್ ಸುದೀಪ್ ಜೊತೆ 'ಕೋಟಿಗೊಬ್ಬ-2' ಸಿನಿಮಾ ಮಾಡಿ ಯಶಸ್ಸು ಕಂಡರು.

More from Filmibeat

English summary
Kannada actor Sudeep has not played the villain opposite Superstar Rajinikanth yet. Sadly, his cameo role in Lingaa was deleted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X