For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್: ಕಿಚ್ಚನ ಮನೆ ಮುಂದೆ ಜನಸಾಗರ

  By Harshitha
  |

  ಕಿಚ್ಚ ಸುದೀಪ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ಪ್ರೀತಿಯ 'ನಲ್ಲ'ನಿಗೆ ಇವತ್ತು 45ನೇ ವಸಂತಕ್ಕೆ ಕಾಲಿಟ್ಟ ಸಡಗರ. ಫ್ಯಾನ್ಸ್ ಜೊತೆಗೆ ತಮ್ಮ ಜನ್ಮದಿನವನ್ನ ಕಿಚ್ಚ ಸುದೀಪ್ ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.

  ಹಾಗ್ನೋಡಿದ್ರೆ, ಇನ್ಮೇಲೆ ಹುಟ್ಟುಹಬ್ಬ ಆಚರಣೆ ಬೇಡ ಅಂತ ಕಳೆದ ವರ್ಷ ಸುದೀಪ್ ಘೋಷಿಸಿದ್ದರು. ಆದ್ರೀಗ, ಈ ವರ್ಷ ಅಭಿಮಾನಿಗಳಿಗೋಸ್ಕರ ಸುದೀಪ್ ತಮ್ಮ ಜನ್ಮದಿನವನ್ನ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ.

  ಅಂದು ಬೇಡವೆಂದಿದ್ದ ಹುಟ್ಟುಹಬ್ಬವನ್ನ ಮತ್ತೆ ಆಚರಿಸಲು ಸುದೀಪ್ ನಿರ್ಧಾರ: ಕಾರಣ ಇಲ್ಲಿದೆಅಂದು ಬೇಡವೆಂದಿದ್ದ ಹುಟ್ಟುಹಬ್ಬವನ್ನ ಮತ್ತೆ ಆಚರಿಸಲು ಸುದೀಪ್ ನಿರ್ಧಾರ: ಕಾರಣ ಇಲ್ಲಿದೆ

  ಇವತ್ತಿನ ಇಡೀ ದಿನವನ್ನ ಅಭಿಮಾನಿಗಳಿಗಾಗಿಯೇ ಸುದೀಪ್ ಮೀಸಲಿಟ್ಟಿದ್ದಾರೆ. ''ಹುಟ್ಟುಹಬ್ಬದಲ್ಲಿ ಯಾವುದೇ ಆಡಂಬರ ಇರಬಾರದು. ಯಾರೂ ಕೂಡ ದುಡ್ಡು ಖರ್ಚು ಮಾಡಬಾರದು'' ಅಂತ ಸುದೀಪ್ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ, ಯಾವುದೇ ಉಡುಗೊರೆ ತರದೆ ಮನಸಾರೆ ಶುಭಾಶಯ ಕೋರುವ ಅಭಿಮಾನಿಗಳಿಗೆ ಮಾತ್ರ ಸುದೀಪ್ ಮನೆ ಬಾಗಿಲು ಇಂದು ತೆರೆದಿರುತ್ತದೆ.

  ನೆಚ್ಚಿನ ನಟನ ಹುಟ್ಟುಹಬ್ಬದಂದು ಶುಭಕೋರಲು ರಾಜ್ಯದ ವಿವಿದೆಡೆಯಿಂದ ಅಭಿಮಾನಿಗಳು ನಿನ್ನೆ ರಾತ್ರಿಯೇ ಸುದೀಪ್ ಮನೆ ಮುಂದೆ ಜಮಾಯಿಸಿದ್ದರು. ಸುದೀಪ್ ರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬೀಳ್ತಿದ್ರು. ನೂಕುನುಗ್ಗಲು ಉಂಟಾಗಿದ್ದರಿಂದ, ಪರಿಸ್ಥಿತಿಯನ್ನ ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಓರ್ವ ಅಭಿಮಾನಿಯ ತಲೆಗೆ ಪೆಟ್ಟು ಬಿದ್ದಿದೆ.

  ಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದುಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದು

  ಈಗಲೂ ಸುದೀಪ್ ಮನೆ ಮುಂದೆ ಅಸಂಖ್ಯಾತ ಅಭಿಮಾನಿಗಳು ನೆರೆದಿದ್ದಾರೆ. ಪ್ರತಿಯೊಬ್ಬರನ್ನೂ ಭೇಟಿ ಮಾಡಲು ಸುದೀಪ್ ಕೂಡ ಉತ್ಸುಕರಾಗಿದ್ದಾರೆ.

  ಬರ್ತಡೇ ಮೂಡ್ ನಲ್ಲಿರುವ ಸುದೀಪ್ ಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

  English summary
  Kannada Actor Kiccha Sudeep celebrates his 45th Birthday with fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X