twitter
    For Quick Alerts
    ALLOW NOTIFICATIONS  
    For Daily Alerts

    ವೃದ್ಧ ದಂಪತಿ ಬಾಳಿಗೆ ಬೆಳಕಾದ ಸುದೀಪ್ ಚಾರಿಟೇಬಲ್ ಟ್ರಸ್ಟ್

    |

    ನಟ ಕಿಚ್ಚ ಸುದೀಪ್ ಅವರ ಸಾಮಾಜಿಕ ಕಳಕಳಿ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದ್ದಂತೆ ತೋರುತ್ತಿದೆ. ಸಮಾಜ ಸೇವೆಯಲ್ಲಿ ಸಮಕಾಲೀನ ನಟರಿಗಿಂತ ತಾವೂ ಸಹ ಕಡಿಮೆ ಇಲ್ಲ ಎಂಬುದನ್ನು ಸುದೀಪ್ ಈಗಾಗಲೇ ತೋರಿಸಿದ್ದಾರೆ.

    Recommended Video

    ರನ್ನನ ರಕ್ಷಾಬಂದನ. | Kiccha Sudeep Raksha Bhandan Wishes | Filmibeat Kannada

    ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ಸ್ಯಾಂಡಲ್‌ವುಡ್‌ನ ಹಲವರು ನೆರವಿನ ಹಸ್ತ ಚಾಚಿದರು. ಅದರಲ್ಲಿ ಸುದೀಪ್ ಸಹ ಒಬ್ಬರು.

    ಸುದೀಪ್ ಅವರು ಬೆನ್ನೆಲುಬಾಗಿ ನಿಂತಿರುವ ಅವರದ್ದೇ ಹೆಸರಿನ ಕೆಲವು ಟ್ರಸ್ಟ್‌ಗಳು, ಅಭಿಮಾನಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಸಂಘಗಳ ಮೂಲಕ ತೆರೆಮರೆಯಲ್ಲಿ ನಿಂತು ಸಮಾಜ ಸೇವೆ ಮಾಡಿಸುತ್ತಾರೆ ಸುದೀಪ್.

    ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ಬದುಕು

    ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ಬದುಕು

    ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಸಿದ್ಧಾಪುರ ಗ್ರಾಮದಲ್ಲಿ ವೃದ್ಧ ದಂಪತಿ ಮೂರು ವರ್ಷಗಳ ಹಿಂದೆ ಮನೆ ಕಟ್ಟಿಸಿಕೊಂಡಿದ್ದರು. ಆದರೆ ಅದಕ್ಕೆ ವಿದ್ಯುತ್ ಸಂಪರ್ಕ ಮಾಡಿಕೊಳ್ಳಲಾಗದೆ ಕತ್ತಲಲ್ಲಿಯೇ ಜೀವನ ಸಾಗಿಸುತ್ತಿತ್ತು.

    ವಿಕಲಾಂಗ ಮೊಮ್ಮಗನೊಂದಿಗೆ ವೃದ್ಧ ದಂಪತಿ ವಾಸ

    ವಿಕಲಾಂಗ ಮೊಮ್ಮಗನೊಂದಿಗೆ ವೃದ್ಧ ದಂಪತಿ ವಾಸ

    ಈ ವಿಷಯ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗಮನಕ್ಕೆ ಬಂದಿದ್ದು, ವೃದ್ಧ ದಂಪತಿಗಳಾದ ರಾಧಮ್ಮ ಹಾಗೂ ನಾಗರಾಜು ಅವರ ಮನೆಗೆ ಭೇಟಿ ನೀಡಿ, ಅವರಿಂದ ಸಮಸ್ಯೆಯನ್ನು ಆಲಿಸಿ, ವಿಕಲಾಂಗ ಮೊಮ್ಮಗನೊಂದಿಗೆ ವಾಸಿಸುತ್ತಿರುವ ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿತು.

    ಮೊದಲು ಮಾನವನಾಗು ಘೋಷವಾಕ್ಯ

    ಮೊದಲು ಮಾನವನಾಗು ಘೋಷವಾಕ್ಯ

    'ಮೊದಲು ಮಾನವನಾಗು' ಘೋಷವಾಕ್ಯದಡಿ ಕಾರ್ಯನಿರ್ವಹಿಸುತ್ತಿರುವ ಈ ಚಾರಿಟೇಬಲ್ ಟ್ರಸ್ಟ್, ವೃದ್ಧ ದಂಪತಿಯ ಮನೆಗೆ ತಾವೇ ತಮ್ಮ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಹಾಕಿಸಿಕೊಟ್ಟಿದ್ದಾರೆ. ವಿದ್ಯುತ್ ಸಂಪರ್ಕಕ್ಕೆ ಬೇಕಾದ ಅನುಮತಿಗಳನ್ನೂ ಸಹ ಅವರೇ ತೆಗೆದುಕೊಂಡಿದ್ದಾರೆ.

    ಬಡ ವಿದ್ಯಾರ್ಥಿನಿಯ ಶಿಕ್ಷಣದ ಜವಾಬ್ದಾರಿ

    ಬಡ ವಿದ್ಯಾರ್ಥಿನಿಯ ಶಿಕ್ಷಣದ ಜವಾಬ್ದಾರಿ

    ಕೆಲವು ದಿನಗಳ ಹಿಂದೆ ಇದೇ ಸುದೀಪ್ ಚಾರಿಟೇಬಲ್ ಟ್ರಸ್ಟ್, ಬಡ ಪ್ರತಿಭಾವಂತ ವಿದ್ಯಾರ್ಥಿನಿಯ ಫೀಸು ತುಂಬಿ ಓದಲು ಸಹಾಯ ಮಾಡಿತ್ತು. ಆ ಹುಡುಗಿಯ ಶಿಕ್ಷಣದ ಜವಾಬ್ದಾರಿಯನ್ನು ಸುದೀಪ್ ವಹಿಸಿಕೊಂಡಿದ್ದರು. ಇಂಥಹಾ ಹಲವು ಕಾರ್ಯಗಳನ್ನು ಸುದೀಪ್ ಮತ್ತು ಅವರ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ.

    English summary
    Sudeep charitable trust helps a old couple in Tumkuru. They gave electricity connection to old couple house.
    Tuesday, August 4, 2020, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X