ಕಿಚ್ಚ ಸುದೀಪ್ ನಿರ್ದೇಶನ ಮಾಡುತ್ತಿರುವುದು ರಿಮೇಕ್ ಚಿತ್ರವಲ್ಲ ಸ್ವಮೇಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೆ ನಿರ್ದೇಶಕನಕ್ಕೆ ಮರಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸುದೀಪ್ ನಿರ್ದೇಶನದ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸುದೀಪ್ ಒಬ್ಬ ನಟ ಮಾತ್ರವಲ್ಲ. ಉತ್ತಮ ನಿರ್ದೇಶಕ ಕೂಡ. ಈಗಾಗಲೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿ ಉತ್ತಮ ನಿರ್ದೇಶಕ ಅನ್ನೋದನ್ನು ಪ್ರೂವ್ ಮಾಡಿದ್ದಾರೆ.

'ಮೈ ಆಟೋಗ್ರಾಫ್', '#73 ಶಾಂತಿನಿವಾಸ', 'ವೀರ ಮದಕರಿ', 'ಜಸ್ಟ್ ಮಾತ್ ಮಾತಲ್ಲಿ', 'ಕೆಂಪೇಗೌಡ' ಮತ್ತು 'ಮಾಣಿಕ್ಯ' ಚಿತ್ರಗಳು ಕಿಚ್ಚನ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾಗಳು. ಈಗ ಮತ್ತೆ ಸುದೀಪ್ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈ ಬಾರಿಯೂ ಸುದೀಪ್ ರಿಮೇಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ, ತೆಲುಗಿನ 'ಭರತ್ ಅನೇ ನೇನು' ಚಿತ್ರವನ್ನು ಕನ್ನಡಕ್ಕೆ ತರಲಿದ್ದಾರೆ ಎನ್ನುವ ಮಾತುಗಳು ಸದ್ದು ಮಾಡುತ್ತಿತ್ತು.

ಆದರೀಗ ಇದಕ್ಕೆಲ್ಲ ಸುದೀಪ್ ಅವರೆ ಉತ್ತರಿಸಿದ್ದಾರೆ. ಈ ಬಾರಿ ನಿರ್ದೇಶನ ಮಾಡುತ್ತಿರುವುದು ರಿಮೇಕ್ ಚಿತ್ರಕ್ಕಲ್ಲ ಸ್ವಮೇಕ್ ಚಿತ್ರಕ್ಕೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸುದೀಪ್, "ಸದ್ಯ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ನಾನು ಸ್ಪಷ್ಟಪಡಿಸುತ್ತೇನೆ. ಇದು ಸ್ವಮೇಕ್ ಸಿನಿಮಾ. ಈ ಬಗ್ಗೆ ನಾನು ಮತ್ತು ನನ್ನ ತಂಡ ಉತ್ಸುಕರಾಗಿದ್ದೇವೆ. ಅತಿ ಶೀಘ್ರದಲ್ಲೆ ಸಿನಿಮಾ ಸೆಟ್ಟೇರಲಿದೆ" ಎಂದು ಹೇಳುವ ಮೂಲಕ ರಿಮೇಕ್ ಸಿನಿಮಾ ಎನ್ನುವ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

Sudeep Clarified On Twitter That He Will Direct The Original Script

ಸ್ವಮೇಕ್ ಸಿನಿಮಾ ಅಂದಮೇಲೆ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ಸುದೀಪ್ ಸದ್ಯ 'ಕೋಟಿಗೊಬ್ಬ-3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬಾಲಿವುಡ್ ನ 'ದಬಾಂಗ್-3' ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗುತ್ತಿದೆ. ಇದರ ಜೊತೆಗೆ ಮುಂದಿನ ತಿಂಗಳಿಂದ ಸುದೀಪ್, ಅನೂಪ್ ಬಂಡಾರಿ ನಿರ್ದೇಶನದ 'ಪ್ಯಾಂಟಮ್' ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಎಲ್ಲಾ ಕಮಿಟ್ ಮೆಂಟ್ ಮುಗಿದ ಬಳಿಕ ಸುದೀಪ್ ನಿರ್ದೇಶಕರಾಗಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Kannada actor Kiccha Sudeep back to direction. Sudeep Clarified On Twitter That He Will Direct The Original Script.
Read more about: sudeep ಸುದೀಪ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X