'ಕೆಜಿಎಫ್' ಕಾಂಟ್ರೊವರ್ಸಿ ಕುರಿತು ಸುದೀಪ್ ಮಾತು

ನಟ ಸುದೀಪ್ ಇದೀಗ ಸುದ್ದಿಯಲ್ಲಿದ್ದಾರೆ. ಮೊದಲಿಗೆ 'ಕೆಜಿಎಫ್ 2' ಸಿನಿಮಾ ಬಗ್ಗೆ ಮಾತನಾಡಲು ಸುದೀಪ್ ನಿರಾಕರಿಸಿದರು ಎಂಬ ಒಕ್ಕಣೆಯೊಂದಿಗೆ ವಿಡಿಯೋ ಒಂದು ಹರಿದಾಡಿತ್ತು. ಆದರೆ ಅದು ಹಳೆಯ ವಿಡಿಯೋ ಎಂಬುದು ಆ ಬಳಿಕ ತಿಳಿದುಬಂತು. ಅದರ ನಂತರ ಹಿಂದಿ ರಾಷ್ಟ್ರಭಾಷೆ ವಿವಾದ ಬುಗಿಲೆದ್ದಿತು.

ಸಾಮಾನ್ಯವಾಗಿ ಯಾವುದೇ ವಿವಾದಗಳಿಗೂ ಸುದೀಪ್ ಸ್ಪಷ್ಟನೆ ನೀಡುವುದಿಲ್ಲ. ಅಂತೆಯೇ ಈ ಬಾರಿ ಸಹ 'ಕೆಜಿಎಫ್' ಕುರಿತಂತೆ ಆದ ವಿವಾದದ ಬಗ್ಗೆಯೂ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ ಸುದೀಪ್ ನೀಡಿರುವ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಯೂಟ್ಯೂಬ್ ಚಾನೆಲ್ 'ಕರ್ನಾಟಕ ಟಾಕ್' ಗೆ ಸಂದರ್ಶನ ನೀಡಿರುವ ನಟ ಸುದೀಪ್, ತಮ್ಮ ಹಳೆಯ ವಿಡಿಯೋ ಇಟ್ಟುಕೊಂಡು 'ಕೆಜಿಎಫ್' ಸಿನಿಮಾ ಬಗ್ಗೆ ಮಾತನಾಡಲು ಸುದೀಪ್ ನಿರಾಕರಿಸಿದರು ಎಂದು ಆರೋಪಿಸಿ ವಿವಾದ ಸೃಷ್ಟಿಸಿದ್ದರ ಬಗ್ಗೆ ಮಾತನಾಡಿದ್ದಾರೆ. ವೈರಲ್ ಆಗಿದ್ದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸುದೀಪ್‌ಗೆ 'ಕೆಜಿಎಫ್‌' ಸಿನಿಮಾದ ಬಗ್ಗೆ ಮಾತನಾಡಿ ಎನ್ನುತ್ತಾನೆ, ಆಗ ಸುದೀಪ್ ''ನಾನು ಆ ಸಿನಿಮಾದಲ್ಲಿ ನಟಿಸಿಲ್ಲ'' ಎನ್ನುತ್ತಾರೆ. ಆ ವಿಡಿಯೋವನ್ನು ಕೆಲವರು ವೈರಲ್ ಮಾಡಿ, ಕನ್ನಡ ಸಿನಿಮಾದ ಬಗ್ಗೆ ಸುದೀಪ್ ನಿರಾಕರಿಸಿದ್ದಾರೆ ಎಂದಿದ್ದರು.

ವಿವಾದದ ಬಗ್ಗೆ ಸುದೀಪ್ ಮಾತು

ವಿವಾದದ ಬಗ್ಗೆ ಸುದೀಪ್ ಮಾತು

''ವಿವಾದಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನು ಜನಗಳನ್ನು ಸಂಪಾದಿಸಿದ್ದೇನೆ, ನಾನು ಮೌನವಾಗಿದ್ದರೂ ಅವರು ಮಾತನಾಡುತ್ತಾರೆ. ಅದು ಹಳೆಯ ವಿಡಿಯೋ ಎಂಬುದನ್ನು ನನ್ನ ಅಭಿಮಾನಿಗಳು ಸಾರಿ ಹೇಳಿದರು. ಅಂದಿನ ನನ್ನ ಮಾತಿನ ಬಗ್ಗೆ ಹೇಳುವುದಾದರೆ, ಈಗ ನಿಮ್ಮದು ಒಂದು ಚಾನೆಲ್ ಇದೆ (ಸಂದರ್ಶಕಿ ಕುರಿತು) ನೀವು ನನ್ನ ಸಂದರ್ಶನ ಮಾಡಲು ಬಂದಿದ್ದೀರಿ. ಈಗ ನಾನು ಬೇರೆ ಯಾವುದೋ ಚಾನೆಲ್ ಹೆಸರು ಹೇಳಿ ಅದರ ಬಗ್ಗೆ ಮಾತನಾಡಿ ಎಂದರೆ ಅದು ಮೂರ್ಖತನವಾಗುತ್ತದೆ. ಮೊದಲು ನನ್ನ ಚಾನೆಲ್‌ ಬಗ್ಗೆ ಮಾತನಾಡಿ ಆ ಬಳಿಕ ಬೇರೆ ಚಾನೆಲ್‌ ಬಗ್ಗೆ ಮಾತನಾಡುತ್ತೇನೆ ಎನ್ನುವುದು ನಿಮ್ಮ ಉತ್ತರ, ಹಾಗೆಯೇ ಅಂದು ನನ್ನ ಉತ್ತರವೂ ಅದೇ ಮಾದರಿಯಲ್ಲಿತ್ತು'' ಎಂದಿದ್ದಾರೆ ಸುದೀಪ್.

ಆ ದಿನ ನಡೆದಿದ್ದೇನು?

ಆ ದಿನ ನಡೆದಿದ್ದೇನು?

''ನಾನು ಯಾರಿಗೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ'' ಎನ್ನುತ್ತಾ ಅಂದು ನಡೆದ ಘಟನೆಯ ಬಗ್ಗೆ ವಿವರಿಸಿದ ಸುದೀಪ್, ''ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಕನ್ನಡಿಗ ಸಿಕ್ಕ, ಆತ ಅಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ ಬಳಿಕ 'ಕೆಜಿಎಫ್' ಬಗ್ಗೆ ಹೇಳಿ ಎಂದ. ನಮ್ಮ ಆವರೆಗಿನ ಮಾತುಕತೆ ತಮಾಷೆಯಾಗಿಯೇ ಇತ್ತು. ಅದೇ ಭಾವದಲ್ಲಿ ನಾನು 'ಆ ಸಿನಿಮಾದಲ್ಲಿ ನಾನು ನಟಿಸಿಲ್ಲ' ಎಂದೆ'' ಎಂದು ಅಂದು ನಡೆದ ಘಟನೆ ವಿವರಿಸಿದರು.

ಅಲ್ಲಿ ಸಿನಿಮಾದ ಬಗ್ಗೆ ಚರ್ಚೆ ಆಗಬಾರದಿತ್ತು: ಸುದೀಪ್

ಅಲ್ಲಿ ಸಿನಿಮಾದ ಬಗ್ಗೆ ಚರ್ಚೆ ಆಗಬಾರದಿತ್ತು: ಸುದೀಪ್

''ಗೋವಾದ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮೊದಲ ಬಾರಿಗೆ ಕನ್ನಡಿಗನೊಬ್ಬನನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಅಲ್ಲಿ ಅವರ ಸಿನಿಮಾ ಮಾತ್ರವಲ್ಲ, ನನ್ನ ಸಿನಿಮಾದ ಚರ್ಚೆಯೂ ಆಗಬಾರದಿತ್ತು. ಅಲ್ಲಿ ಆಗಬೇಕಾಗಿದ್ದಿದ್ದು ಸಿನಿಮೋತ್ಸವದ ಚರ್ಚೆ, ಕನ್ನಡ ಚಿತ್ರರಂಗಕ್ಕೆ ಆ ಸಿನಿಮೋತ್ಸವದಲ್ಲಿ ಸಿಕ್ಕ ಪ್ರಾತಿನಿಧ್ಯದ ಚರ್ಚೆ ಆಗಬೇಕಿತ್ತು. ಅಲ್ಲದೆ, ನಾನು ಮೊದಲ ಬಾರಿಗೆ ಅಂಥಹಾ ದೊಡ್ಡ ಕಾರ್ಯಕ್ರಮದಲ್ಲಿ ದೊಡ್ಡ ವ್ಯಕ್ತಿಗಳ ಜೊತೆ ಭಾಗವಹಿಸುತ್ತಿದ್ದೇನೆ. ಅಲ್ಲಿ ಭಾಷಣ ಸಹ ಮಾಡಲಿದ್ದೆ, ಅದರ ಬಗ್ಗೆ ನಾನು ಟೆನ್ಶನ್‌ನಲ್ಲಿದ್ದೆ, ಈ ನಡುವೆ ಆತ ಈ ಪ್ರಶ್ನೆ ಕೇಳಿದ'' ಎಂದು ವಿವರಿಸಿದ್ದಾರೆ ಸುದೀಪ್.

ಈ ಹಿಂದೆ 'ಕೆಜಿಎಫ್' ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದೇನೆ: ಸುದೀಪ್

ಈ ಹಿಂದೆ 'ಕೆಜಿಎಫ್' ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದೇನೆ: ಸುದೀಪ್

''ಮುಂಬೈನಲ್ಲಿ ಫರ್ದೀನ್‌ ಅವರಿಗೆ ಸಂದರ್ಶನ ನೀಡುವಾಗ ಅವರು 'ಕೆಜಿಎಫ್' ಸಿನಿಮಾದ ಬಗ್ಗೆ ಪ್ರಶ್ನೆ ಕೇಳಿದರು. ನಾನು ಆಗ ಬಹಳ ಹೆಮ್ಮೆಯಿಂದಲೇ ಆ ಬಗ್ಗೆ ಮಾತನಾಡಿದೆ. ನೋಡಿ ಈ ವಿವಾದವನ್ನು 'ಕೆಜಿಎಫ್' ತಂಡವರು ಮಾಡಿದ್ದಲ್ಲ, ಕಿತಾಪತಿ ಮಾಡಲೆಂದೇ ಕೆಲವರು ಇದ್ದಾರೆ ಅವರು ಮಾಡಿರುವುದು. ಅವರು ವಿವಾದ ಮಾಡಿದರು ನಮ್ಮವರು ಉತ್ತರ ನೀಡಿದರು. ನನ್ನನ್ನು ಇಷ್ಟು ಪ್ರೀತಿಸುವ ಜನಗಳನ್ನು ಸಂಪಾದಿಸಿರುವುದು ನಾನು ಮಾಡಿದ ದೊಡ್ಡ ಸಂಪಾದನೆ. ಇಂಥಹಾ ವಿವಾದಗಳು, ಪ್ರಶ್ನೆಗಳಿಗೆಲ್ಲ ನಗುವೊಂದಷ್ಟೆ ನನ್ನ ಉತ್ತರ'' ಎಂದಿದ್ದಾರೆ ಸುದೀಪ್.

More from Filmibeat

English summary
Actor Sudeep clarifies about his old video circulating in which he refuse to talk about KGF movie. Sudeep says some people intentionally made controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X