ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ನಟ ಸುದೀಪ್ ಸಂತಾಪ

ಖ್ಯಾತ ರಂಗಭೂಮಿ ನಟ ಮಾಸ್ಟರ್ ಹಿರಣ್ಣಯ್ಯ ನಿಧನ ಹೊಂದಿದ್ದಾರೆ. ನಾಟಕ ಜಗತ್ತಿನ ದೈತ್ಯ ನಟನನ್ನು ಕಳೆದುಕೊಂಡು ಎಲ್ಲರೂ ನೋವಿನಲ್ಲಿ ಇದ್ದಾರೆ. ರಂಗಭೂಮಿ, ಸಿನಿಮಾ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಬದುಕಿಗೆ ಬೇಕಷ್ಟು ಲಂಚ ತಿಂದ್ರೆ ತಪ್ಪೇನಿಲ್ಲ : ಮಾಸ್ಟರ್ ಹಿರಣ್ಣಯ್ಯ ಸಂದರ್ಶನ

ನಟ ಸುದೀಪ್ ಕೂಡ ಮಾಸ್ಟರ್ ಹಿರಣ್ಣಯ್ಯರನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ನೆನೆದಿದ್ದಾರೆ. 'ನಂ 73 ಶಾಂತಿ ನಿವಾಸ' ಸಿನಿಮಾದಲ್ಲಿ ಮಾಸ್ಟರ್ ಹಿರಣ್ಣಯ್ಯರವರ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ಸುದೀಪ್ ಪಡೆದಿದ್ದರು. ಈ ಸಿನಿಮಾದಲ್ಲಿ ತಾತನ ಪಾತ್ರದಲ್ಲಿ ಹಿರಣ್ಣಯ್ಯ ನಟಿಸಿದ್ದರು.

sudeep condolences for actor master hirannaiah death

ಈ ಚಿತ್ರದ ನಿರ್ದೇಶನ ಮಾಡಿದ್ದ ಸುದೀಪ್, ಸಿನಿಮಾದ ತಾತನ ಪಾತ್ರಕ್ಕೆ ಮಾಸ್ಟರ್ ಹಿರಣ್ಣಯ್ಯರವರೇ ಬೇಕು ಎಂದು ಆ ಪಾತ್ರವನ್ನು ಅವರ ಕೈ ನಲ್ಲಿ ಮಾಡಿದ್ದರು. ಇನ್ನು ಮಾಸ್ಟರ್ ಹಿರಣ್ಣಯ್ಯ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಅವರ ಜೊತೆಗೆ ಕೆಲಸ ಮಾಡಿದ ದಿನಗಳನ್ನು ಮರೆಯುವುದಿಲ್ಲ ಎಂದಿದ್ದಾರೆ.

''ಸರ್ ನೀವು ಯಾವಾಗಲೂ ನಮ್ಮ ಹೃದಯಕ್ಕೆ ಹತ್ತಿರ ಆಗಿರುತ್ತೀರಿ. ನಂ 73 ಶಾಂತಿ ನಿವಾಸ ಸಿನಿಮಾದಲ್ಲಿ ನಾನು ಅವರ ಜೊತೆಗೆ ಕೆಲಸ ಮಾಡಿದ ಪ್ರತಿ ದೃಶ್ಯ ಕೂಡ ನೆನಪಿನಲ್ಲಿ ಉಳಿಯುವಂತದ್ದು. ಇಂತಹ ದೊಡ್ಡ ಪ್ರತಿಭೆಯ ಬಗ್ಗೆ ಏನೇ ಹೇಳಿದರೂ ಅದು ಚಿಕ್ಕದು. ಕಲೆ ಜಗತ್ತಿಗೆ ಅವರ ಕೊಡುಗೆ ಅಪಾರ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ''

ಹಿರಿಯ ರಂಗಕರ್ಮಿ, ಮಾಸ್ಟರ್ ಹಿರಿಯಣ್ಣಯ್ಯ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು 10 ಗಂಟೆ ಸುಮಾರಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬನಶಂಕರಿಯ ಅವರ ನಿವಾಸದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ

More from Filmibeat

English summary
Actor Sudeep condolences for popular movie theater actor Master Hirannaiah. Master Hirannaiah passes away today (May 2th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X