For Quick Alerts
  ALLOW NOTIFICATIONS  
  For Daily Alerts

  ಮೋಸ್ಟ್ ಡಿಸೈರಬಲ್ ಕಪಲ್ ಗಳಿಗೆ ಕಿಚ್ಚನ ಕಿವಿ ಮಾತು

  By Pavithra
  |
  ಮೋಸ್ಟ್ ಡಿಸೈರಬಲ್ ಕಪಲ್ ಗಳಿಗೆ ಕಿಚ್ಚನ ಕಿವಿ ಮಾತು | Filmibeat Kannada

  ಟೈಮ್ಸ್ ಪತ್ರಿಕೆ ಸಮೀಕ್ಷೆ ನಡೆಸಿರುವ ಪ್ರಕಾರ 2017 ಮೆನ್ ಹಾಗೂ ವುಮೆನ್ ಪಟ್ಟಿ ಇತ್ತೀಚಿಗಷ್ಟೆ ಪ್ರಕಟವಾಗಿದೆ. ಸ್ಯಾಂಡಲ್ ವುಡ್ ನಿಂದ ಈ ಭಾರಿ ಮೋಸ್ಟ್ ಡಿಸೈರಬಲ್ ಮೆನ್ ರಕ್ಷಿತ್ ಶೆಟ್ಟಿ ಆಯ್ಕೆ ಆಗಿದ್ದರೆ ಮೋಸ್ಟ್ ಡಿಸೈರಬಲ್ ವುಮೆನ್ ಆಗಿ ರಶ್ಮಿಕಾ ಮಂದಣ್ಣ ಸೆಲೆಕ್ಟ್ ಆಗಿದ್ದಾರೆ.

  ಕಿಚ್ಚ ಸುದೀಪ್ ಫಾರ್ ಎವರ್ ಡಿಸೈರಬಲ್ ಮೆನ್ ಆಗಿ ಆಯ್ಕೆ ಮಾಡಲಾಗಿದೆ. ತೆರೆ ಮೇಲೆ ಹಿಟ್ ಆಗಿದ ನಂತರ ರಿಯಲ್ ಲೈಫ್ ನಲ್ಲಿ ಜೋಡಿ ಆಗಿರುವ ರಕ್ಷಿತ್ ಹಾಗೂ ರಶ್ಮಿಕಾ ಜೋಡಿಗೆ ಶುಭಾಶಯ ಕೋರಿರುವ ಕಿಚ್ಚ ಸುದೀಪ್ ಜೊತೆಗೆ ಒಂದು ಕಿವಿ ಮಾತನ್ನು ಹೇಳಿದ್ದಾರೆ.

  "ಡಿಸೈರಬಲ್ ಲಿಸ್ಟ್ ನಲ್ಲಿ ಮೊದಲು ಇರುವ ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಶುಭಾಶಯಗಳು. ಜೊತೆಯಲ್ಲಿ ಬೇರೆ ಕಲಾವಿದರಿಗೂ ಅಭಿನಂದನೆ. ಈ ಕ್ಷಣವನ್ನು ಕಳೆದು ಹೋಗುವ ಮುನ್ನ ಎಂಜಾಯ್ ಮಾಡಿ" ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

  ಪ್ರಿಯಾಮಣಿ 'ಧ್ವಜ' ಚಿತ್ರಕ್ಕೂ ರಮ್ಯಾ ಜೀವನ ಚರಿತ್ರೆಗೂ ಸಂಬಂಧ ಇದ್ಯಾ.?ಪ್ರಿಯಾಮಣಿ 'ಧ್ವಜ' ಚಿತ್ರಕ್ಕೂ ರಮ್ಯಾ ಜೀವನ ಚರಿತ್ರೆಗೂ ಸಂಬಂಧ ಇದ್ಯಾ.?

  ಕಿಚ್ಚನ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಟ ರಕ್ಷಿತ್ ಶೆಟ್ಟಿ, ನೀವು ಎವರ್ ಗ್ರೀನ್‌ ಮೋಸ್ಟ್ ಡಿಸೈರಬಲ್ ಆಗಿದ್ದೀರಾ, ನೀವು ನಮಗೆ ಸ್ಫೂರ್ತಿ ಎಂದಿದ್ದಾರೆ. ಜೊತೆಗೆ ರಶ್ಮಿಕಾ ಕೂಡ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  ಒಟ್ಟಾರೆ ಕರ್ನಾಟಕ ಕ್ರಶ್ ಆಗಿದ್ದ ರಶ್ಮಿಕಾ ಅವರನ್ನ ಡಿಸೈರಬಲ್ ವುಮೆನ್ ಆಯ್ಕೆ ಆಯ್ಕೆ ಮಾಡಿರುವುದು ಅಭಿಮಾನಿಗಳಿಗಂತು ಸಖತ್ ಖುಷಿ ತಂದುಕೊಟ್ಟಿದೆ ಇತ್ತ ರಕ್ಷಿತ್ ಅಭಿಮಾನಿಗಳು ಕೂಡ ಈ ಸಂದರ್ಭವನ್ನ ಡಬಲ್ ಖುಷಿ ತಂದುಕೊಟ್ಟಿದೆ.

  English summary
  According to a Times magazine poll, the Times Most Desirable Men of 2017 and Times Most Desirable Women Rakshith Shetty and Rashmika Mandanna are elected. Sudeep congratulated Rakshith and Rashmika

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X