For Quick Alerts
  ALLOW NOTIFICATIONS  
  For Daily Alerts

  ಹೊಸ ದಾಖಲೆ ಸೃಷ್ಟಿಸಿದ ಕಿಚ್ಚನ ಮಡದಿ ಪ್ರಿಯಾ

  By Pavithra
  |

  ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಸಾಕಷ್ಟು ದಾಖಲೆಯನ್ನ ಮಾಡಿರುವ ನಟ, ನಿರ್ದೇಶಕ, ನಿರ್ಮಾಪಕ. ಹೊಸ ದಾಖಲೆಗಳನ್ನ ಸೃಷ್ಟಿಸೋದು, ಹಳೆ ದಾಖಲೆಯನ್ನ ಮುರಿಯೋದು ಕಿಚ್ಚನ ಪಾಲಿಗೆ ಲೆಕ್ಕವೇ ಇಲ್ಲ.

  ಸುದೀಪ್ ಟ್ವಿಟ್ಟರ್ ನಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಪಡೆದುಕೊಂಡು ದಾಖಲೆ ಸೃಷ್ಟಿ ಮಾಡಿದ್ರು. ಈಗ ಅವರದ್ದೇ ಹಾದಿಯಲ್ಲಿ ಪತ್ನಿ ಪ್ರಿಯಾ ಸುದೀಪ್ ಕೂಡ ಹೆಜ್ಜೆ ಹಾಕಿದ್ದಾರೆ.

  ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ 50 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಇದನ್ನ ಗಮನಿಸಿರುವ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಅವ್ರಿಗೆ ಶುಭಾಶಯ ಕೋರಿದ್ದಾರೆ. ಸುದೀಪ್ ಅಭಿಮಾನಿಗಳಷ್ಟೇ ಅಲ್ಲದೆ ಪ್ರಿಯಾ ಅವ್ರಿಗೂ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಈ ಮೂಲಕ 50 ಸಾವಿರ ಟ್ವಿಟ್ಟರ್ ಫಾಲೋವರ್ ಹೊಂದಿರುವ ಮೊದಲ ಸ್ಟಾರ್ ಪತ್ನಿ ಪ್ರಿಯಾ ಆಗಲಿದ್ದಾರೆ.

  ಕೇವಲ ಕಿಚ್ಚನ ಬಗ್ಗೆ ಮಾತ್ರವಲ್ಲದೆ ಕ್ರೀಡೆ, ಸಿನಿಮಾ ಹೀಗೆ ನಾನಾ ಕ್ಷೇತ್ರಗಳ ಬಗ್ಗೆ ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಡೇಟ್ ಮಾಡುತ್ತಿರುತ್ತಾರೆ. ಪ್ರಿಯಾ ಸುದೀಪ್ ಒಡೆತನದಲ್ಲಿ ನಡೆಯುತ್ತಿರುವ ಸ್ಟೇಜ್ 360 ಇವೆಂಟ್ ಕಂಪನಿಯ ಬಗ್ಗೆಯೂ ಇಲ್ಲಿ ಅಪ್ಡೇಟ್ ಸಿಗುತ್ತೆ. ಕಿಚ್ಚನ ಹಾದಿಯಲ್ಲೇ ಸಾಗುತ್ತಿರುವ ಪತ್ನಿ ಪ್ರಿಯಾ ಸುದೀಪ್ ಅವ್ರಿಗೆ ಇಂದು ಶುಭಾಶಯಗಳ ಟ್ವೀಟ್ ಜೋರಾಗಿ ಬರ್ತಿವೆ.

  English summary
  Priya Sudeep set new record. Her Followers in Twitter 50k.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X