ಖುಷಿ ಸಮಾಚಾರ ಕೇಳಿ 'ಕಿರಿಕ್' ಹುಡುಗರ ಬೆನ್ನುತಟ್ಟಿದ ಕಿಚ್ಚ ಸುದೀಪ್
ರಕ್ಷಿತ್ ಶೆಟ್ಟಿ ಅಭಿನಯದ ರಿಶಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಸಿನಿಮಾದ ಹಿಂದಿ ರೀಮೇಕ್ ರೈಟ್ಸ್ ಬಿಕರಿ ಆಗಿದೆ. ಅಲ್ಲದೇ, ಟಾಲಿವುಡ್ ನಲ್ಲಿಯೂ 'ಕಿರಿಕ್ ಪಾರ್ಟಿ' ಚಿತ್ರ ರೀಮೇಕ್ ಆಗುತ್ತಿದೆ. ತಮಿಳು ಹಾಗೂ ಮಲೆಯಾಳಂ ಭಾಷೆಗೂ 'ಕಿರಿಕ್ ಪಾರ್ಟಿ' ರೀಮೇಕ್ ರೈಟ್ಸ್ ಸೇಲ್ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ.
ಈ ಖುಷಿಯ ಸಮಾಚಾರವನ್ನು ಇಂದು 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಆ ಮೂಲಕ ಕಿಚ್ಚ ಸುದೀಪ್ ರವರಿಗೂ 'ಕಿರಿಕ್ ಪಾರ್ಟಿ' ರೀಮೇಕ್ ರೈಟ್ಸ್ ಸೇಲ್ ಆಗಿರುವ ಸುದ್ದಿ ಗೊತ್ತಾಗಿದೆ.

ಕೂಡಲೆ 'ಕಿರಿಕ್' ಹುಡುಗರಾದ ರಕ್ಷಿತ್ ಹಾಗೂ ರಿಶಬ್ ಗೆ ಸುದೀಪ್ ಶುಭಾಶಯ ತಿಳಿಸಿದ್ದಾರೆ.
ಯುವಕರ ತಂಡ ಪಟ್ಟ ಶ್ರಮಕ್ಕೆ ಉತ್ತಮ ಪ್ರತಿಫಲ ಸಿಕ್ಕಾಗ, ಅವರ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಆಗಲೇ ಉದ್ಯಮ ಬೆಳೆಯಲು ಸಾಧ್ಯ. ಸದ್ಯ ಆ ಕೆಲಸವನ್ನ ಕಿಚ್ಚ ಸುದೀಪ್ ಮಾಡಿದ್ದಾರೆ.
English summary
Kannada Actor Kiccha Sudeep has taken his twitter account to congratulate 'Kirik Party' team.


Click it and Unblock the Notifications