For Quick Alerts
  ALLOW NOTIFICATIONS  
  For Daily Alerts

  ಟೋಕಿಯೋ ಒಲಂಪಿಕ್: ಬೆಳ್ಳಿ ಪದಕ ಗೆದ್ದ ಮೀರಾಭಾಯ್‌ಗೆ ಸುದೀಪ್ ಅಭಿನಂದನೆ

  |

  ಟೋಕಿಯೋ ಒಲಂಪಿಕ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಭಾಯ್ ಚಾನುಗೆ ಕನ್ನಡ ನಟ ಕಿಚ್ಚ ಸುದೀಪ್ ಅಭಿನಂದಿಸಿದ್ದಾರೆ.

  49 ಕೆಜಿ ವೇಟ್ ಲಿಫ್ಟರ್ ಸ್ಪರ್ಧೆಯಲ್ಲಿ ಮೀರಾಭಾಯ್ ಚಾನು ಬೆಳ್ಳಿ ಪದಕ ಗಳಿಸುವ ಮೂಲಕ ಟೋಕಿಯೋ ಒಲಂಪಿಕ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟರು. ಆ ಕ್ಷಣ ಮೀರಾಭಾಯ್‌ಗೆ ಸುದೀಪ್ ಪತ್ನಿ ಪ್ರಿಯಾ ಶುಭ ಹಾರೈಸಿದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸುದೀಪ್, ''ಇದು ಹೆಮ್ಮೆಯ ಸಂದರ್ಭ'' ಎಂದು ಶ್ಲಾಘಿಸಿದ್ದಾರೆ.

  ನಾನೀ ಪದಕವನ್ನು ನನ್ನ ದೇಶಕ್ಕೆ ಅರ್ಪಿಸುತ್ತಿದ್ದೇನೆ: ಮೀರಾಬಾಯ್ ಚಾನು

  49 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಸ್ಪರ್ಧಿಸಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಚಾನು ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 115 ಕೆಜಿ ಭಾರ ಎತ್ತುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚೀನಾದ ಹೌಸ್ ಜಿಹು ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ.

  ಬೆಳ್ಳಿ ಪದಕ ಗೆದ್ದ ಮೀರಾಭಾಯ್‌ಗೆ ಮಲಯಾಳಂ ನಟ ಮೋಹನ್ ಲಾಲ್, ತೆಲುಗು ನಟ ಮಹೇಶ್ ಬಾಬು, ತಮಿಳು ನಟ ಕಮಲ್ ಹಾಸನ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವರು ಶುಭಾಶಯ ತಿಳಿಸಿದ್ದಾರೆ.

  ದೇಶಕ್ಕೆ ಅರ್ಪಿಸಿದ ಮೀರಾಭಾಯ್

  ಸತ್ತಿರೋ ಹೆಣಕ್ಕೆ ಏನೂ ಮಾಡೋಕೆ ಆಗಲ್ಲ

  ಪದಕ ಗೆದ್ದ ಬಳಿಕ ಸಂತಸ ಹಂಚಿಕೊಂಡ ಮೀರಾಭಾಯ್ "ಇದು ನಿಜಕ್ಕೂ ನನ್ನ ಪಾಲಿಗೆ ಕನಸು ನನಸಾದಂತೆ. ಈ ಪದಕವನ್ನು ನಾನು ನನ್ನ ದೇಶಕ್ಕೆ ಅರ್ಪಿಸುತ್ತಿದ್ದೇನೆ ಮತ್ತು ನನಗಾಗಿ ಪ್ರಾರ್ಥಿಸಿದ ಬಿಲಿಯನ್‌ ಭಾರತೀಯರಿಗೆ ನನ್ನ ಧನ್ಯವಾದಗಳು. ಆ ನಿಮ್ಮ ಪ್ರಾರ್ಥನೆ ನನ್ನನ್ನು ಇಲ್ಲೀವರೆಗೆ ಕರೆತಂದಿತು," ಎಂದರು.

  English summary
  Sudeep congratulates weightlifter Mirabai Chanu, who won a silver medal at the Tokyo Olympic 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X